ಮಚ್ಚೇರಿಯ ವಿಶ್ವಖ್ಯಾತ ಮನೋವೈದ್ಯ-ಡಾ.ಮಚ್ಚೇರಿ ಕೇಶವನ್

ಮಚ್ಚೇರಿಯ ವಿಶ್ವಖ್ಯಾತ ಮನೋವೈದ್ಯ-ಡಾ.ಮಚ್ಚೇರಿ ಕೇಶವನ್

ಆ ಹುಡುಗನಿಗೆ ಇಂಜಿನಿಯರ್ ಆಗುವಾಸೆ....ತಂದೆಗೆ ಹುಡುಗ ಡಾಕ್ಟರ್ ಆಗಬೇಕೆಂಬಾಸೆ. ಕಡೆಗೆ ಒಂದು ಪಂಥ- ನಾನು ಹೇಳಿದಷ್ಟೇ ಅಂಕಗಳನ್ನು ಪಡೆಯಬೇಕು-ಆಗ ನಿನ್ನಿಷ್ಟದಂತಾಗಲಿ ಎಂದರು. ಹುಡುಗ ೊಪ್ಪಿದ. ದ್ವಿತೀಯ ಪಿ.ಯು.ಸಿ ಪಲಿತಾಂಶದಲ್ಲಿ ತಂದೆ ಹೇಳಿದ್ದಕ್ಕಿಂತ 0.5 % ಕಡಿಮೆ ಬಂದಿತ್ತು...! ಅನಿವಾರ್ಯವಾಗಿ ಈ ಹುಡುಗ ಎಂ.ಬಿ.ಬಿ.ಎಸ್. ಸೇರಿದ. ಇಂಜಿನಿಯರಿಂಗ್ ಕ್ಷೇತ್ರಕ್ಕಾದ ನಷ್ಟ ವೈದ್ಯಕೀಯ ಕ್ಷೇತ್ರಕ್ಕೆ ಲಾಭವಾಯಿತು. ಆ ಹುಡುಗ  ಇಂದು ವಿಶ್ವ ಖ್ಯಾತ ಮನೋವಿಜ್ಞಾನಿ .

ಆತ  ಡಾ. ಮಚ್ಚೇರಿ ಕೇಶವನ್.

ಕಡೂರು ತಾಲೂಕಿನ ಮಚ್ಚೇರಿ ಗ್ರಾಮದ ರಮಾ-ಶ್ರೀನಿವಾಸ ಮೂರ್ತಿ ಅವರ ಎರಡನೇ ಮಗ. .ಪ್ರಾಥಮಿಕ ವಿದ್ಯಾಬ್ಯಾಸ ಬೇಲೂರಿನಲ್ಲಿ. ನಂತರ ಎಂಬಿಬಿಎಸ್ ಮೈಸೂರಿನಲ್ಲಿ. ಮನ:ಶ್ಯಾಸ್ತ್ರದಲ್ಲಿ ಎಂ.ಡಿ. ಪದವಿ ಪಡೆದದ್ದು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ. ನಂತರ ಅಮೆರಿಕಾದಲ್ಲಿ ಎಫ್.ಆರ್.ಸಿ.ಎಸ್, ಅಲ್ಲಿನ ಪಿಟ್ಸಬರ್ಗ್ನಲ್ಲಿ  ಪ್ರೊಫೆಸರ್ ಆಗಿ ಸೇವೆ. ಅಲ್ಲಿನ ಪ್ರತಿಷ್ಟಿತ ಗ್ಯಾಸ್ಕೆಲ್ ಪ್ರಶಸ್ತಿ ಪಡೆದ  ನಾನ್ ಏಷ್ಯನ್ ! ಮತ್ತು ಮೊದಲ ಕನ್ನಡಿಗ.

3 ಬಾರಿ ಗೋಲ್ಡನ್ ಆಪಲ್ ಪ್ರಶಸ್ತಿ, ರಾಯಲ್ ಸೊಸೈಟಿ ಫೆಲೋಷಿಪ್ ಮುಂತಾದ ಪ್ರಶಸ್ತಿಗೆ ಭಾಜನ. ಮನೋವೈದ್ಯಕೀಯ ಲೇಖಕನಾಗಿ ಲಿಮ್ಕಾ ಧಾಖಲೆ ಮಾಡಿದ ಕನ್ನಡಿಗ ಕೇಶವನ್. ಅಮೇರಿಕಾದಲ್ಲಿ ಕನ್ನಡ ಪುಸ್ತಕ ಭಂಡಾರ ಹೊಂದಿರುವ ಕೇಶವನ್ ಅವರಿಗೆ ಕನ್ನಡ ನಾಡು ಎಂದರೆ ಅತೀವ ಪ್ರೀತಿ.

ಮಚ್ಚೇರಿ ಯಂತಹ ಕುಗ್ರಾಮಕ್ಕೆ ಕೇಶವನ್ ಒಂದು ಹೆಮ್ಮೆ.....ಹಾಂ...ಮಚ್ಚೇರಿ ಯ  ಮೊದಲ ಹೆಸರು ಮತ್ಸ್ಯನಗರಿ- ವಿರಾಟ ರಾಜನ ರಾಜಧಾನಿಯಾಗಿತ್ತು ಎಂಬ ಸ್ಥಳ ಪುರಾಣವಿದೆ.