ಮತದಾನ ಮಾಡಿರಯ್ಯ...

ಮತದಾನ ಮಾಡಿರಯ್ಯ...

ಕವನ

ಚುನಾವಣೆ ಹತ್ತಿರ ಬಂತಯ್ಯ

ಮತದಾನ ಮಾಡಿ ಬನ್ನಿರಯ್ಯ

ಅವರು ಕಾಯುತ್ತಿದ್ದಾರೆ ದೋಚಲಯ್ಯ

ನಿಧಾನಿಸಿ ಯೋಚಿಸಿ ಮತದಾನ ಮಾಡಿರಯ್ಯ...!

 

ಹೆಂಡ,ಕಾಸು, ಸೀರೆ ನೋಡದಿರಯ್ಯ 

ಸ್ನೇಹ, ಸಂಬಂಧಗಳು ಮರೆಯಿರಯ್ಯ 

ನೆಲ,ಜಲ, ಭಾಷೆ,ನಾಡು ಉಳಿಯುವಂತೆ  

ಮತದಾನ ಮಾಡಿರಯ್ಯ...!

 

ಜಾತಿ ಜಾತಿ ಎನ್ನದಿರಯ್ಯ 

ಅವರು ಬಳಸುವದು ಇಂತಹ ತಂತ್ರಗಳಯ್ಯ 

ಆಸೆ ಆಮಿಷಕ್ಕೆ ಒಳಗಾಗದಿರಯ್ಯ 

ಒಳಗಾದರೆ ನಮ್ಮ ಗ್ರಾಮ ಹಾಳಾಗುವದಯ್ಯಾ..!

 

ಪ್ರಾಮಾಣಿಕರನ್ನು ಹುಡುಕಿ ಮತದಾನ ಮಾಡಿರಯ್ಯ 

ಚಿನ್ಹೆಗಳು ನೋಡಿ ಮರುಳಾಗದಿರಯ್ಯ 

ಸುಳ್ಳು ಮಾತು ನಂಬಿ ಮೋಸಹೋಗದಿರಯ್ಯ 

ಒಳ್ಳೆಯ ಕೆಲಸ ಮಾಡುವವರನ್ನು ಗೆಲ್ಲಿಸಿರಯ್ಯ..!

 

ಎಲ್ಲರು ತಪ್ಪದೆ ಮತದಾನ ಮಾಡಿರಯ್ಯ 

ಭ್ರಷ್ಟರನ್ನು ಸೋಲಿಸಿ ಸಮಾಜ ಉಳಿಸಿರಯ್ಯಾ

ಜನ ಸೇವೆಯೇ ಬದುಕೆಂದವನಿಗೆ ಅವಕಾಶ ನೀಡಿರಯ್ಯ 

ಗ್ರಾಮಗಳು ಸ್ವಲ್ಪವಾದರೂ ಉದ್ದಾರ ಆಗಲಯ್ಯಾ..!

 

- ಪ್ರಭುಲಿಂಗಯ್ಯ ಮಠ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್