ಮತಬಾಂಧವ
ಕವನ
ಓ ಮತಬಾಂಧವರೆ
ಆರಿಸುವಾಗ ನಮ್ಮನ್ನಾಳುವ
ದೊರೆಯನ್ನು ತೋರಿಸಿರಿ
ತರಕಾರಿ ಕೊಳ್ಳುವಾಗ
ತೋರಿಸುವ ಕನಿಷ್ಠ ಬುದ್ದಿಯನ್ನು
ನಾವೇನು ಹುಟ್ಟಿಲ್ಲ
ಅವರ ಮರುಳು ಮಾತ ಕೇಳಲು
ಬಣ್ಣ ಬಣ್ಣದ ವೇಷಗಳ ನೋಡಲು
ನಮ್ಮ ಹಕ್ಕನ್ನು ಅವರ ಕೈಗಿತ್ತು ಭಿಕ್ಷೆ ಬೇಡಲು
ಅವರಾಡುವ ಆಟಗಳ ಸಹಿಸಲು
ಅವರಾಕುವ ಬಾಡೂಟ
ಮತ್ತೇರಿಸುವ ಮಧ್ಯ
ಕೈ ತುಂಬ ದುಡ್ಡು
ಸೀರೆ ಕುಪ್ಪಸ ಇತ್ಯಾದಿ ಉಡುಗೊರೆಗೆ
ಮಾರದಿರಿ ಅಮೂಲ್ಯ ಓಟನ್ನು
ಹರ್ಷದ ಕೂಳಿಗಾಗಿ
ವರ್ಷದ ಕೂಳ ಕಡೆಗಣಿಸದೆ
ವಿದ್ಯಾ ಬುದ್ದಿ ಸಂಪನ್ನ
ನೇರ ದಿಟ್ಟ ಪ್ರಾಮಾಣಿಕರಿಗೆ
ಕಣ್ಣ ಮುಚ್ಚಿ ಓಟ ಒತ್ತಿ ಆರಿಸೋಣ
ನಾವಾರಿಸುವ ನಾಯಕ
ನಮಗಾಗಬೇಕು ಜನನಾಯಕ
ಕೇಳುವಂತಿರಬೇಕು ನಮ್ಮ ಸುಖ ದುಃಖಗಳ
ವರೆಸುವಂತಿರಬೇಕು ನಮ್ಮ ಕಣ್ಣೀರ
ತೋರುವಂತಿರಬೇಕು ನಮಗೆ ದಾರಿದೀಪವ
ಇಂತಿ,
ಕವಿತಾಗೌಡ