ಮತಾಂತರ ತಡೆವ ಯತ್ನದಲ್ಲಿ ನಾನು ಗೆದ್ದೆ !

ಮತಾಂತರ ತಡೆವ ಯತ್ನದಲ್ಲಿ ನಾನು ಗೆದ್ದೆ !

ಬರಹ

"ನೇನು ಸಂಡೇ ರಾನು, ಏಮ್ ಬಟ್ಲುಂಡೋ ಈ ಬದ್ದೇ ಈಯಂಡಿ" ಐರನ್ ಹೆಂಗಸು ಹೇಳ್ಖುತ್ತಿದ್ದಳು ನಮ್ಮ ತಾಯಿಯ ಬಳಿ ಅವಳದ್ದು ತೆಲಗು.
ಅಮ್ಮನಿಗೂ ತೆಲಗು ಬರುತ್ತೆ
ಆದರೆ ನಂಗೆ ಅಷ್ಟೊಂದು ಬರಲ್ಲ ಹಾಗಾಗಿ ಸಂಭಾಷಣೆಯನ್ನು ಕನ್ನಡದಲ್ಲೇ ಬರೆಯುತ್ತೇನೆ
"ಯಾಕೆ ಎಲ್ಲಿಗೆ ಹೋಗ್ತಿಯಾ" ಅಮ್ಮ ಕೇಳಿದರು
"ಚರ್ಚ್‌ಗೆ ಹೋಗ್ಬೇಕು"ಎಂದಳು
ಅಲ್ಲೇ ಪೇಪರ್ ಓದುತ್ತಿದ್ದ ನನ್ನ ಕಿವಿ ನೆಟ್ಟಗಾಯ್ತು. ಸ್ವಲ್ಪ ಇದರಲ್ಲೆಲ್ಲಾ ಆಸಕ್ತಿ ನಂಗೆ
"ನೀನೇನು ಕ್ರಿಸ್ಚಿಯನ್ನಾ?"
"ಇಲ್ಲ ಈ ಸಂಡೇ ಹೋಗಿ ಮುಂದಿನ ವಾರ ಆಗ್ತೀನಿ"
ನಮ್ಮ ತಾಯಿ ಕೇಳಿದರು
"ಯಾಕೆ ನಮ್ಮ ಧರ್ಮ ಏನ್ ಮಾಡ್ತು ನಿಂಗೆ?"
ಇಲ್ಲಮ ನಮ್ಮ ದೇವರನ್ನೆಲ್ಲಾ ತುಂಬಾ ಬೇಡಿಕೊಂಡೆ ಕೊನೆಗೆ ಇಲ್ಲಿರೋ ಚರ್ಚಲ್ಲಿ ಹೋಗಿದ್ದಕ್ಕೆ ಏಸು ನಂಗೆ ತುಂಬಾ ಸಹಾಯ ಮಾಡಿದರು"
"ಏನಾಗಿತ್ತು ನಿಂಗೆ?" ನಾನು ಪ್ರಶ್ನಿಸಿದೆ
"ನಮ್ಮ ಯಜಮಾನರು ತುಂಬಾ ಹೊಡೀತಾಇದ್ದರು ಜೊತೆಗೆ ಅವರ ಕಾಲು ಸರಿ ಇರಲಿಲ್ಲ .ನಾನು ಎಲ್ಲಾ ದೇವರನ್ನೂ ಬೇಡಿಕೊಂಡೆ. ಕೊನೆಗೆ . ಅರಳೀ ಮರ, ಎಲ್ಲಾ ಮರನೂ ಸುತ್ತಿದೆ ಎಲ್ಲೂ ಸರಿ ಹೋಗ್ಲಿಲ್ಲ. "
ನಮ್ಮ ತಾಯಿ ಹೇಳಿದರು
"ನೀನು ಎಲ್ಲಾ ದೇವರನ್ನು ಬೇಡ್ಕೊಂಡ ತಕ್ಶಣ ನಿಂಗೆ ಫಲ ಬೇಕು ಅಂದ್ರೆ ಸಿಗಲ್ಲ. ಅದಕ್ಕೆ ಸಹನೆಯಿಂದ ಕಾಯಲೇಬೇಕು.
ನೀನು ಮಾಡಿದ್ದ ಪೂಜೆ ಎಲ್ಲಾ ಫಲ ನೀಡೋಕೂ ನೀನು ಚರ್ಚ್ಗೆ ಹೋಗೋಕೂ ಸರಿಯಾಗಿ ನಿಂಗೆ ಒಳ್ಳೇದಾಯ್ತು ಅಷ್ಟೆ."
ಅವಳು ಮಾತಾಡಲಿಲ್ಲ
"ನೋಡು ನಾನೂ ಕಷ್ಟದ ಸಮಯದಲ್ಲಿ ಬೆಳಗ್ಗೆ ಮೂರು ಘಂಟೆಗೆ ತಣ್ಣೀರ್‍ಇನಲ್ಲಿ ಸ್ನಾನ ಮಾಡಿ ಪೂಜೆ ಮಾಡಿ ದೇವಸ್ಥಾನಕ್ಕೆ ಹೋಗಿ ಕಷ್ಟ ಪಟ್ಟಿದ್ದೇನೆ . ಹಾಗಂತ ನಾನು ಪೂಜಿ ಮಾಡಿ ಒಂದುತಿಂಗಳಲ್ಲೇ ಆಗ್ಬೇಕು ಅಂತೇನು ಇಲ್ಲ. ನಾವು ಹಿಂದೆ ಮಾಡಿದ ಯಾವ ಯಾವ ಕರ್ಮವೋ ಕಳೆಯಬೇಕು ಆಮೇಲೆ ಒಳ್ಳೆಯದಾಗೋದು. ನನಗೂ ಹಾಗೆಲ್ಲಾ ಮಾಡಿಸುಮಾರು ಆರು ತಿಂಗಳ ನಂತರವಷ್ಟೆ ಒಳ್ಲೆಯದಾಯ್ತು. ಈಗ ನೋಡು ನಾನು ಅಬ್ಬಾಬ್ಬ ಅನ್ನೋ ಹಾಗೆ ಇಲ್ಲವಾದೂ ಪರವಾಗಿಲ್ಲ ಅನ್ನೋಹಾಗೆ ಇದ್ದೀನಲ್ವಾ?"ನಾನು ನುಡಿದೆ
"ಹಾಗಾದ್ರೆ ಏಸೂನಾ ಪೂಜೆ ಮಾಡೋದು ಬೇಡವಾ?" ಪ್ರಶ್ನಿಸಿದಳು
"ಹಾಗಂತ ನಾನು ಹೇಳೋದಿಲ್ಲ
ನಿಂಗೆ ನಂಬಿಕೆ ಇದ್ರೆ ಮಾಡು. ಯಾವತ್ತೂ ಏಸೂನೂ ನಮ್ಮ ದೇವರೂ ಜಗಳ ಆಡಿಲ್ಲ .ಅಥವ ನೀನಿದ್ರೆ ನಾನಿರಲ್ಲ ಅಂತ ಹೇಳ್ಕೊಂಡಿಲ್ಲ
ಇಬ್ಬರನ್ನು ಪೂಜೆ ಮಾಡು . ಎಲ್ಲರ ಫೋಟೋನೂ ಇಟ್ಕೋ ಆದ್ರೆ ಕನ್ವರ್ಟ್ ಆಗಿ ಮರ್ಯಾದೆ ಕಳ್ಕೊಂಬೇಡ "ಎಂದೆ
ಅವಳ ಮನೆಯಲ್ಲಿ ಯಾರ ಒಪ್ಪಿಗೆಯೂ ಸಿಕ್ಕಿಲ್ಲವಂತೆ . ಮನೆಯವರ ವಿರ್ರುದ್ದ ಹೋಗಲು ಮನಸಿಲ್ಲ. ಆದರೆ ಚರ್ಚಿನವರು ಕನ್ವರ್ಟ್ ಆದರೆ ಇನ್ನಷ್ಟು ಒಳ್ಳೆಯದಾಗುತ್ತೆ ಎಂಉ ಹೇಳಿದ್ದಾರಂತೆ . ಪೂಜೆ ಮಾಡಿದ್ರೆ ಏಸುವನ್ನೇ ಪೂಜಿಸಬೇಕು, ಇಲ್ಲವಾದರೆ ಮತ್ತಷ್ಟು ಕಷ್ಟ ಬರುತ್ತದೆ ಎಂದೂ ಹೆದರಿಸಿದ್ದಾರಂತೆ
ನಾನು ನನ್ನ ತಾಯಿ ನಮ್ಮ ಧರ್ಮದಲ್ಲಿರುವ ಒಳ್ಳೇಯ ಅಂಶಗಳನ್ನು ಸ್ವಲ್ಪ ಹೊತ್ತು ಹೇಳಿದ್ದೆವು. ಸ್ವಲ್ಪ ಹೊತ್ತು ಮಾತಾಡದೆ ಕುಳಿತಿದ್ದ ಅವಳು ಎದ್ದು ಹೋಗುತ್ತೇನೆ ಎಂದು ಹೇಳಿ ಹೊರಟಳು
ಇದಾಗಿದ್ದು ಹೋದ ಗುರುವಾರ
ಅದಾದ ಮೇಲೆ ನಾನೂ ಅವಳಿಗೆ ಸಿಕ್ಕಿರಲಿಲ್ಲ.
ಇವತ್ತು ಸ್ವಲ್ಪ ಹುಷಾರಿಲ್ಲ ಎಂದು ಸ್ವಲ್ಪ ಲೇಟ್ ಆಗಿ ಮನೆಯಿಂದ ಹೊರಡಬೇಕಿತ್ತು . ಆಗ ಬಟ್ಟೇ ತೆಗೆದುಕೊಂಡು ಹೋಗಲು ಬಂದಳು/
"ಕನವರ್ಟ್ ಆದ್ಯಾ?" ಪ್ರಶ್ನಿಸಿದೆ
"ಇಲ್ಲಾಮ ನಮ್ಮ ಯಜಮಾನರು ಹಾಗು ಮಕ್ಕಳಿಗೆ ನೀವು ಹೇಳಿದ್ದುನ್ನ ಹೇಳ್ದೇ ಅವರೂ ಹಾಗೆ ಅಂದ್ರು. ನಮ್ಮ ದೇವರನ್ನೇ ಪೂಜೆ ಮಾಡೋಣ ಅಂತ ಡಿಸೈಡ್ ಮಾಡಿದೀನಿ, ಕನವರ್ಟ್ ಆಗಲ್ಲ" ಎಂದಳು
ಅಮ್ಮನ ಕಡೆಗೆ ನೋಡಿದೆ
ಅವಳ ಮುಖದಲ್ಲಿ ಗೆಲುವಿನ ನಗೆಯ ಮಿಂಚು
ಅವಳು ಹೋದ ಮೇಲೆ ನಾನು ನನ್ನ್ನ ತಾಯಿ ಮಾತಾಡಿಕೊಂಡ್ವಿ
ಇವರು ಎಷ್ಟು ಮುಗ್ದರು ಇವರನ್ನ ಬ್ರೈನ್ ವಾಶ ಮಾಡೋದು ತುಂಬಾ ಸುಲಭಾ ಅಂತಾನೆ ಇಂತಹವರನ್ನೇ ಮತಾಂತರಕ್ಕೆ ಓಲೈಸುತ್ತಾರೆ. ನಮ್ಮಂತಹವರ ಹತ್ತಿರಕ್ಕೂ ಬರುವುದಿಲ್ಲ. "
ಆಗಲೆ ಅಮ್ಮ ಹೇಳಿದ್ದು ಒಂದು ಹಿಂದಿನ ಘಟನೆ
ಆವತ್ತು ನಾನು ಕಾಲೇಜಿಗೆ ಹೋಗಿದ್ದಂತೆ ಅಮ್ಮ ಮನೆಯಲ್ಲಿ ಇದ್ದರಂತೆ
ಹೀಗೆ ಗುಂಪೊಂದು ಬಂದು ಉಪದೇಶ್ ಆರಂಭಿಸಿದರಂತೆ
ಅದಕ್ಕೆ ಅಮ್ಮ ನಾನು ನಿಮ್ಮ ಉಪದೇಶ ಕೇಳಲು ರೆಡಿ ಆದರೆ ನೀವು ನಾನು ಹೇಳೋ ಮಾತೆಲ್ಲಾ ಕೇಳಿಸ್ಕೋಬೇಕು" ಅಂದರಂತೆ
"ನಿಮ್ಮ ಧರ್ಮದಲ್ಲಿ ಸಾರವಿದ್ದಂತೆ ನಮ್ಮಲ್ಲೂ ಇದೆ ನೀವ್ಯಾಕೆ ನಮ್ಮ ದರ್ಮಕ್ಕೆ ಕನವರ್ಟ್ ಆಗಬಾರದು ಎಂದು ಕೇಳಿದ್ದಕ್ಕೆ ಆ ಗುಂಪು ಮತ್ತೊಂದು ಮಾತಾಡದೆ ಹೊರಟು ಹೋಯಿತಂತೆ
ಈ ಆನಲೈನ್‌ನಲ್ಲಿ ಮತಾಂತರ ಬೇಡವೆಂದು ಏಷ್ಟು ಕೂಗಿಕೊಂಡರೂ ಬುದ್ದಿಜೀವಿಗಳಿಂದ ಮತಾಂತರದ ಪರವಾಗಿಯೇ ಕೂಗು ಬರುತ್ತದೆಯೇ ಹೊರತು ನನ್ನ ಹೋರಾಟದ ಪರವಾಗಿ ಅಲ್ಲ. ಬರವಣಿಗೆ ಅಥವ ಬಾಯಲ್ಲಿ ಏನು ಹೇಳುತ್ತೇವೋ ಅದನ್ನೇ ಕೃತಿಯಲ್ಲಿ ತೋರಿದರೆ ಚೆಂದ ಆದರೆ ಕೇವಲ ಬರವಣಿಗೆಗಷ್ಟೆ ಸೀಮಿತವಾಗಿದೆ.
ಅದಕ್ಕಾಗಿಯೇ ಮತಾಂತರ ಹೊಂದಲು ಅಣಿಯಾಗಿರುವ ಇನ್ನೂಒಂದಷ್ಟು ಜನರ ಮನಸನ್ನು ಬದಲಾಯಿಸಿದರೆ ಮತಾಂತರ ತಡೆಯಬೇಕೆಂಬ ನನ್ನ ಉದ್ದೇಶವ ಕೊಂಚವಾದರೂ ಈಡೇರುತ್ತದೆ.ಈ ಗೆಲುವು ನನ್ನಲ್ಲಿ ಹೊಸ ಆತ್ಮ ವಿಶ್ವಾಸ ಮೂಡಿಸಿದೆ.
ಮುಂದಿನವಾರ ಚರ್ಚ್‌ಗೆ ನಾನು ಮತ್ತು ನನ್ನಂತಹ ಇನ್ನಿತರ ಗೆಳತಿ ಹಾಗು ಗೆಳೆಯರೊಂದಿಗೆ ಹೋಗೋಣ ಎಂದುಕೊಂಡಿದ್ದೇನೆ (ಮತಾಂತರ ಹೊಂದಲಲ್ಲ. ಮತಾಂತರ ಹೊಂದಲು ಕಾಯುತ್ತಿರುವರನ್ನು ಭೇಟಿ ಮಾಡಲು).