ಮತ್ತಷ್ಟು ಗಾದೆಗಳು - ೬
ಬರಹ
೧. ಅಗಸನ ಕತ್ತ ಡೊಂಬರದವನಿಗೆ ದಾನ ಮಾಡಿದ ಹಾಗೆ.
೨. ಉಂಡರೆ ಉಬ್ಬಸ, ಹಸಿದರೆ ಸಂಕಟ.
೩. ಒರಲೆ ಹಿಡಿದ ಕಟ್ಟಿಗೆ, ತರಲೆ ಹಿಡಿದ ಮನೆ ಹಾಳು.
೪. ಬಂಡವಾಳ ಮೂರು ಕಾಸು, ಬಡಿವಾರ ಆರು ಕಾಸು.
೫. ಗಂಜಿ ಕುಡಿಯುವವನ ಮೀಸೆ ತೀಡಕ್ಕೆ ಒಂದಾಳು.
೬. ಊರ ಚಿಂತೆ ಕಟ್ಟಿಕೊಂಡು ವೀರಶೆಟ್ಟಿ ಬಡವಾದ.
೭. ಮೊದಲು ಬಂದ ಕಿವಿಗಿಂತ ಆಮೇಲೆ ಬಂದ ಕೋಡು ಉದ್ದ.
೮. ಉಗುರಿನಲ್ಲಾಗುವ ಕೆಲಸಕ್ಕೆ ಕೊಡಲಿ ತಗಂಡರು.
೯. ಕೈಲಿ ಸಾಗದವನಿಗೆ ಒಂಭತ್ತು ಕುಡುಗೋಲು.
೧೦. ಉತ್ತರನ ಪೌರುಷ ಒಲೆ ಮುಂದೆ.