ಮತ್ತಷ್ಟು ಹನಿಗಳು !

ಮತ್ತಷ್ಟು ಹನಿಗಳು !

ಕವನ

ಈ ನೋವುಗಳೇ

ಬದುಕನ್ನು ಸುಡುವ

ಅಗ್ನಿ ಕುಂಡವು ! 

*

ಬದುಕಿನಲ್ಲಿ

ಕೆಲವೊಮ್ಮೆ ವಿಷದ

ಮುಳ್ಳಿಗೇ ಬೆಲೆ !

ಹೇಡಿ ಅವನು

ನನ್ನ ಬಳಸಿಕೊಂಡೇ

ಓಡಿ ಹೋದನು !

*

ಮುನ್ನುಗ್ಗುವಾತ

ಮುಂದೆ ಹೆಜ್ಜೆ ಇಟ್ಟಾಗ

ಸೈನಿಕನಾದ !

*

ಕಾಲಿರುವುದು

ಒದೆಯಲಲ್ಲ ತಿಳಿ

ನೀ ನಡೆಯಲು

*

ಗೂಡು ಸೇರುವ

ಪ್ರತೀ ಜೀವಿಗಳಿಗೂ

ಕತ್ತಲ ಭಯ!

*

ಪ್ರತೀ ಮನೆಯೂ

ಪ್ರಣಯ ರಂಗಭೂಮಿ

ಪ್ರೀತಿಯೊಂದಿರೆ !

*

ಕಾವ್ಯ ಹುಟ್ಟುತ್ತ

ಸಿರಿವಂತ, ಕವಿಯೋ 

ಬಡವನಾದ !

*

ಮತ್ತೇರಿದಳು

ಹುಡುಗಿ, ಹುಡುಗನು

ದಡ ಸೇರಿದ ! 

*

ಮೌನದೊಳಗೆ

ಮನ ಸೇರಿದಾಗಲೇ

ಮಾತು ನಿಂತಿತು ! 

*

ನಲಿವಿನಲ್ಲಿ

ನೋವಿದೆಯೆಂದರೆ , ನಾ

ಬದುಕಲಾರೆ

*

ಕನಸುಗಳು

ಇರಬೇಕು, ನಡುವೆ

ನನಸುಗಳು !

*

ಅರ್ಬುದ

ರಾಜಕೀಯ

ಜನ

ಸಾಮಾನ್ಯರಿಗೆ

ಅರ್ಬುದ

ಇದ್ದಂತೆ !

*

 

ಮೌನ

ಮೌನವು ತುಂಬಿದ ನಡಿಗೆಯು ಮಂದ

ಸೋತಿಹ ಆಳಿನ ರೀತಿಯಲಿ

ಮತ್ತದೆ ಯೌವನ ಮುರುಟುತ ಸಾಗೆ

ಬತ್ತಿದ ಮೈ ಮನ ಮೌನದಲಿ

ಹನಿಗಳು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್