ಮತ್ತಷ್ಟು ಹನಿಗಳು !

ಮತ್ತಷ್ಟು ಹನಿಗಳು !

ಕವನ

ವಿಸ್ಮಯ! 

ನೀವು

ನಿಮ್ಮ

ಜೀವನದ

ನಶ್ವರತೆಯೊಂದಿಗೆ

ರಾಜೀ

ಮಾಡಿಕೊಂಡಿರಾದರೆ....

 

ನಿಮ್ಮ

ಜೀವನದಲಿ

ಅಸಾಮಾನ್ಯ

ಘಟನೆಗಳು

ಸಂಭವಿಸುವುದರಲ್ಲಿ

ಆಶ್ಚರ್ಯವಿಲ್ಲ!

***

ಯುದ್ಧ....

ಈ ಜೀವನದ

ಕುರುಕ್ಷೇತ್ರ

ಯುದ್ಧವನು

ಎದುರಿಸಿ

ಗೆದ್ದವರು

ವಿರಳ...

 

ಹೋರಾಡಿ

ಹೋರಾಡೀ

ಬಳಲಿ

ಅಸಹಾಯಕರಾಗಿ

ಸೋತವರೇ

ಬಹಳ!

***

ಜಾದೂ ಲೋಕ 

ಸಂಸಾರ

ಸಾಗರದಲಿ

ಸೋಲು

ಸೋಲಲ್ಲ;

ಗೆಲುವು

ಗೆಲುವಲ್ಲ....

 

ಇದು

ಜಾದೂ ಲೋಕ-

ಇಲ್ಲಿ ಸೋಲೇ

ಗೆಲುವು;

ಗೆಲುವೇ

ಸೋಲು!

***

ನನ್ನ ತಾಯಿ ಭಾರತಿ! 

ಓ ಭರತಭೂಮಿ

ನನ್ನ ತಾಯಿ 

ನಿನ್ನ ಹೆಸರ ಮರೆತೆವು...

ಯಾರೊ ಇಟ್ಟ 

'ಇಂಡಿಯಾ'ವ

ನನ್ನ ತಾಯಿ ಎಂದೆವು...

 

ಇದುವೆ ಈ ಜಗದ 

ಭವ್ಯ ಸಂಸ್ಕೃತಿ

ಇತಿಹಾಸವವು...

ನಾವು ಇಂದೇ-

ನೀ ನನ್ನ ತಾಯಿ

"ಭಾರತಾಂಬೆ" ಎಂಬೆವು!

***

ಮುಂಜಾನೆ ಹಸಿರು ಹುಲ್ಲಿನ ಮೇಲೆ 

ಮುಂಜಾನೆ

ಹಸಿರು ಹುಲ್ಲಿನ

ಹನಿಗಳ ಮೇಲೆ

ಸೂರ್ಯನ

ಕಿರಣಗಳು 

ಬೀಳುವುದನು ಕಂಡಿರಾ...

 

ಪುಟ್ಟ ಫುಟ್ಟ

ವಜ್ರಗಳು ಫಳ ಫಳ

ಹೊಳೆವುದರ

ಜೊತೆಗೆ

ಏಳು ಬಣ್ಣಗಳ

ಸೊಬಗನು ಉಂಡಿರಾ!

***

ನಾಗರೀಕ-ಅನಾಗರೀಕ 

ನಾಗರೀಕ

ಮನುಷ್ಯನೊಬ್ಬನೇ

ಆಯುಧ ಹಿಡಿದು

ಹೋರಾಡುವುದು

ಏಕೆಂದರೆ ಇವನು

ಬುದ್ಧಿವಂತ....

 

ಅನಾಗರೀಕ

ಪ್ರಾಣಿಗಳು

ಎಂದೂ

ಆಯುಧಗಳನು

ಬಳಸದೇ ಹೋರಾಡಿವೆ

ಇವು ದಡ್ಡರು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್