ಮತ್ತೆ ಭೋರ್ಗರೆಯುತಿದೆ ಕಡಲು..
ಒಂದು ಮಾತು ಆಡದೆ
ಮೌನದೊಳಗೇ
ಮತ್ತೆ ಭೋರ್ಗರೆಯುದತಿದೆ ಕಡಲು..
ಭೋರ್ಗರೆದು ಹರಿಯುತಿದೆ
ನನ್ನೆದೆಯ ತೊಯ್ದು..
ಈ ಕಡಲ ಹರಿವ ಪರಿಗೆ ನಾನಿಂದು
ಕುಸಿದರೂ ಕುಸಿಯದಾಗಿದ್ದೇನೆ..
ಯಾರೋ ಕಸಿದ ಭಾವಗಳ
ಮತ್ತೆ ಈ ಕಡಲಲ್ಲಿ ಬೆರೆಸಿ
ಬಿಟ್ಟರೂ ಮತ್ತೆ ಭೋರ್ಗರೆಯುತಿದೆ ಕಡಲು....
ಆ ಕೆಂಗಣ್ಣುಗಳ ನೋಟದೆಡೆಗೆ ಹುಸಿನಗೆಯ
ಚೆಲ್ಲಿ ಮತ್ತೆ ಭೋರ್ಗರೆತಿದೆ ಕಡಲು
ಕಲ್ಪನಾ ಲೋಕದ ಭಾವಗಳ
ಬಂಧಕ್ಕೆ ಕಡಲುಕ್ಕಿ ಹರಿದು
ಬಂದು ಬೆರೆತು ಬೆರೆತು ಹೋದರೂ
ಸೆಣಸಾಟ ನಿಂತಿಲ್ಲ
ನಿಲ್ಲುವ ಕುರುಹೇ ಇಲ್ಲ....
ಎದೆ ನಡುಕ ತಾಳದಾಗಿದೆ
ಈ ಕಡಲ ಆರ್ಭಟಕೆ ...
ನನ್ನೆದೆಯೊಳಗೆ ಹರಿಯುತಿದೆ ಕಡಲು....
ಜಗದ ಪರಿವೆಯೆ ಇರದೆ
ನನ್ನನ್ನೆ ಕಡೆಯುತಿದೆ
ಕಡೆಯುತಿದೆ... ಕಡೆಯುತಿದೆ...
ಕಡೆಯುತಿದೆ.. ಕಡೆಕಡೆದು
ಹರಿಯುತಿದೆ ಕದಲು...
ಭಾರವೆನಿಸಿದ ಬಂಧದಲಿ
ಕೊರಳ ಕಟ್ಟಿದ ಉಲಿಯು ಸೇರಿ
ನೊರೆಹಾಲುಕ್ಕುವ ತೆರದಿ
ಉಕ್ಕಿ ಹರಿಯುತಿದೆ ಕಡಲು...
ಇತಿ ಇಲ್ಲ ಮಿತಿ ಇಲ್ಲ
ಅತಿಯಾದರೂ ಅತಿಯಲ್ಲ
ಈ ಭಾವಗಳ ಮಥಿಸೊ ಯತ್ನದಲಿ
ಸೋತು ಸುಣ್ಣವಾಗಿದೆ ಕಡಲು..
ಭೋರ್ಗರೆದು ಹರಿಯುತಿದೆ ಕಡಲು..
ನಾ ಮುಂದು ತಾ ಮುಂದು
ಎಂಬಂತೆ ಧುಮುಕುತಿದೆ...
ಧುಮುಕುತಿದೆ.. ಧುಮುಕುತಿದೆ....
ಧುಮುಕುತಿದೆ.. ಧುಮ್ಮಿಕ್ಕಿ
ಹರಿಯುತಿದೆ ಕಡಲು....
ಮತ್ತೆ ಭೊರ್ಗರೆಯುತಿದೆ ಕಡಲು..