ಮತ್ತೆ ಮಗುವಾಗಬೇಕು ನಾನು

ಮತ್ತೆ ಮಗುವಾಗಬೇಕು ನಾನು

ಕವನ

ಆ ನಿಷ್ಕಲ್ಮಷ  ಸುಂದರ ನಗು

ತುಂಬಿತ್ತು ನನ್ನ ತುಟಿಗಳಲ್ಲಿ ನಾನಗಿದ್ದಾಗ ಮಗು 

ಏನನ್ನು ಅರಿಯದ ಮುಗ್ಧ ಭಾವ

ನಾ ಮಗುವಾಗಿದ್ದಾಗ ಆವರಿಸಿತ್ತು ನನ್ನ ಮನವ

ಚಂಚಲತೆಇಂದ ಓಡುತಿದ್ದ ಪಾದಗಳು

ಇಂದು ಸೋತಿದೆ, ಚುಚ್ಚಿ ಅದಕ್ಕೆ ಮುಳ್ಳುಗಳು

ಅಂದು ಎಲ್ಲರನ್ನೂ ನಗಿಸುತಿದ್ದ ನನ್ನ ತುಂಟು ಮಾತು

ಇಂದು ಮಾಯವಾಗಿದೆ ನನ್ನೊಳಗೆ ಅಡಗಿ ಕೂತು

ಅಂದು ಎಲ್ಲವನ್ನೂ ಮರುಕ್ಷಣ ಮರೆಯುತ್ತಿದ್ದ ನಾನು

ಇಂದು ಮರೆಯಲಾಗುತ್ತಿಲ್ಲ ಯಾವ ನೋವನ್ನು

​​​​​​ಅಂದು ಮಲಗಿದ್ದೆ ಅಮ್ಮನ ಮಡಿಲಲ್ಲಿ ಹಾಯಾಗಿ

ಇಂದು ನಾನು ನನ್ನ ಬದುಕಿನ ಹಾದಿಯಲ್ಲಿ ಏಕಾಂಗಿ 

ಈಗ ಇರಬಹುದು ನನ್ನಲ್ಲಿ ಯಶಸ್ಸನ್ನು ಸಾಧಿಸುವ ಬದ್ಧತೆ 

ಆದರೆ ನಾ ಕಳೆದುಕೊಂಡಿರುವೆ, ನನ್ನಲದ್ದ ಮಗುವಿನ ಮುಗ್ಧತೆ

ಮರಳಿ ಬೇಕು ನನಗೆ ನಾ ಮಾಗುವಾಗಿದ್ದ ಆ ದಿನಗಳು

ಮತ್ತೆ ಮರುಕಳಿಸಬೇಕಿದೆ ಆ ಕ್ಷಣಗಳು 

ನಾ ಮುಚ್ಚುವುದರೊಳಗೆ ಕಣ್ಣು

ಒಮ್ಮೆ ಮತ್ತೆ ಮಾಗುವಾಗಬೇಕು ನಾನು 🥰☺️