ಮತ್ತೆ ಮತ್ತೆ ಕಾಡುತ್ತಿದೆ ನಿನ್ನದೇ ನೆನಪು
ಮತ್ತೆ ಮತ್ತೆ ಕಾಡುತ್ತಿದೆ ನಿನ್ನದೇ ನೆನಪು
ಬೆಳಗೆದ್ದು ಹಲ್ಲುಜ್ಜುವಾಗ ನೀ ಬಂದು ನುಡಿದಂತೆ
’ಅದೆಷ್ಟು ಬಿಳುಪು ನಿನ್ನ ಹಲ್ಲು, ಹೇಗೆ ಹಲ್ಲುಜ್ಜುವೆಯೋ?’
ಕನ್ನಡಿಯ ಮುಂದೆ ತಲೆ ಬಾಚುವಾಗ ಸನಿಹ ನೀ ಬಂದಂತೆ
ತಲೆಯ ಮೇಲೆಲ್ಲಾ ಕೈಯಾಡಿಸಿ, ಕೂದಲ ಕೆದಕಿ ನಕ್ಕಂತೆ
ತಿಂಡಿ ತಿನ್ನುವಾಗ ಕಿವಿಯಲ್ಲಿ ನೀ ಉಸುರಿದಂತೆ
’ನೀರು ದೋಸೆ ನನಗೂ ಇಷ್ಟ, ತರಬಾರದಿತ್ತೇ?’
ಮನೆಯಿಂದ ಹೊರಟಾಗ ದೂರವಾಣಿ ರಿಂಗಣಿಸಿದಂತೆ
’ಯಾಕೆ ಇನ್ನೂ ಆಫೀಸಿಗೆ ಬಂದಿಲ್ಲ?’ ಎಂದಂತೆ
ಆಫೀಸು ತಲುಪಿ ನನ್ನ ಮೇಜಿನ ಬಳಿ ಬರುತ್ತಿದ್ದಂತೆ
ಮತ್ತೆ ಇಂಟರ್ ಕಾಂನಲ್ಲಿ ’ಗುಡ್ ಮಾರ್ನಿಂಗ್’ ಎಂದಂತೆ
ವಿನಾ ಕಾರಣ ಮತ್ತೆ ಮತ್ತೆ ನನ್ನ ಬಳಿ ಸುಳಿಯುತ್ತಾ,
ಏನೇನೋ ಮಾತಾಡುತ್ತಾ ನನ್ನ ಗೋಳು ಹೊಯ್ದಂತೆ
ಮಧ್ಯಾಹ್ನದ ನನ್ನ ಊಟದ ಡಬ್ಬ ಎಗರಿಸಿದಂತೆ
’ಕೊಡು’ ಎಂದರೆ, ’ಬೇಕಿದ್ದರೆ ನನ್ನ ಡಬ್ಬ ತಿನ್ನು’ ಎಂದಂತೆ
ಮತ್ತೆ ಏನೋ ಸಮಸ್ಯೆಯೇ ಅಲ್ಲದ ಸಮಸ್ಯೆಗಳನ್ನು ಪರಿಹರಿಸೆಂದು ಪೀಡಿಸಿದಂತೆ
ಸಂಜೆಯಾಗುತ್ತಾ ಮುಗುಳುನಗುವಿನೊಂದಿಗೆ ಬೈ ಎಂದು ಕೈಯಾಡಿಸುತ್ತಾ ಮನೆಗೆ ನಡೆದಂತೆ
ಮತ್ತೆ ಮತ್ತೆ ಕಾಡುತ್ತಿದೆ ಅದೇ ನೆನಪು
ಅದೇನು ಕಾರಣವೋ, ಏನನ್ನೂ ಹೇಳದೆ ಅದೊಂದು ಸಂಜೆ
ನನ್ನ ಪ್ರೀತಿಗೇ ಟಾ ಟಾ ಮಾಡಿ ಹೋದ ನನ್ನ ಗೆಳತಿ
ಮತ್ತೆ ಮತ್ತೆ ಕಾಡುತ್ತಿದೆ ನಿನ್ನದೇ ನೆನಪು.