ಮದುವೆ ಮದುವೆ ಮದುವೆ...

ಮದುವೆ ಮದುವೆ ಮದುವೆ...

ಬರಹ

ಅವನು ವೆಂಕಟರಾಜು...
ಚಿಕ್ಕಬಳ್ಳಾಪುರ ಸಮೀಪದ ಹಳ್ಳಯೊಂದರಲ್ಲಿ ಮನೆಯವರ ಮುಂದಾಳತ್ವದಲ್ಲಿ ಹೆಣ್ಣು ನೋಡಿದ. ಎರಡು ಮನೆಯವರೂ ಒಪ್ಪಿಗೆ ಕೊಟ್ಟು ಮದುವೆ ಸಾಧ್ಯತೆಯಿದೆ ಎನ್ನುವಾಗ ಹೆಣ್ಣು ಇವನಿಗೆ ದೂರವಾಣಿಯಲ್ಲಿ ಹೀಗೆಂದಳು.. ನೀವು ಬೇರೆ ಮನೆ ಮಾಡಿ, ಮನೆಯಲ್ಲಿ ಸಂಪ್‌ ತೋಡಿಸಿ. ನೀರಿಗಾಗಿ ಕಷ್ಟ ಬೇಡ. ಆದಷ್ಟು ಬೇಗ ಮನೆಗೆ ಶೀಟಿನಿಂದ ತಾರಸಿಗೆ ಪ್ರಮೋಷನ್‌ ಕೊಟ್ಟರೆ ಚೆನ್ನ ಇರುತ್ತೆ.. ಕೂಡಲೇ ಇವನು ಈ ಸಂಭಂದಕ್ಕೆ ಎಳ್ಳು ನೀರು ಬಿಟ್ಟ.

ಅವನು ಸೋಮಶೇಖರ. ಹೊಸಕೋಟೆ ಸಮೀಪದ ಹಳ್ಳಯೊಂದರಲ್ಲಿ ಅಪ್ಪ ಹೆಣ್ಣು ನೋಡಿದರು. ಇವನು ನೋಡಿದ ಬಳಿಕ ಎರಡು ಮನೆಯ ಕಡೆಯಿಂದ ಸಾಮಾನ್ಯವಾದ ಒಂದು ಸುತ್ತು ಮಾತುಕತೆ ನಡೆಯಿತು. ಕೊನೆಗೆ ಹುಡುಗಿಯ ಅಮ್ಮ ಹುಡುಗ ಎಲ್ಲಾ ರೀತಿಯಲ್ಲೂ ಸರಿ. ಆದರೆ ವಯಸ್ಸಾಗಿದೆ.. (ಅವನಿಗೆ ೨೫ ವರ್ಷ)

ಇನ್ನೊಬ್ಬ ಮಹೇಶ. ವಿದ್ಯಾವಂತ. ಸ್ಪುರದ್ರೂಪಿ. ಸೌಜನ್ಯ ವ್ಯಕ್ತಿತ್ವದ ಇವನಿಗೆ ಕೋಲಾರದ ಆಚೆ ಆಂಧ್ರದ ಸಮೀಪ ಹೆಣ್ಣೊಂದನ್ನು ಗುರುತು ಮಾಡಿದರು. ಅದರಂತೆ ಹುಡುಗ ಹೋಗಿ ನೋಡಿ ಒಪ್ಪಿಕೊಂಡ. ಅವಳು ಕೂಡ ಡಬ್ಬಲ್ ಪದವೀಧರೆ. ಇನ್ನೇನು ಎಲ್ಲಾ ಆಯಿತು ಅನ್ನುವಷ್ಟರಲ್ಲಿ .. ನಮಗೆ ಗೊತ್ತಾಯಿತು. ಹುಡುಗ ಕೇವಲ SSLC ಮಾತ್ರ ಓದಿದ್ದಾನಂತೆ. So.. ಹೀಗಾಗಿ ನಾವು ಯೋಚನೆ ಮಾಡ್ತಿದ್ದೀವಿ ಎಂಬ ಮಾರುತ್ತರದ ಉತ್ತರ ಆಕಡೆಯಿಂದ ಬಂತು. ಗಂಡಿನ ಮನೆಯವರು ಒಮ್ಮೆಲೆ ಸಿಡಿಮಿಡಿಯಾದರು. ನೇರವಾಗಿ ಹುಡುಗನ ಅಪ್ಪ ಹಾಗೂ ತಮ್ಮ ಅವರ ಮನೆಗೆ ಹೋದರು. ಕೆಲಕಾಲ ತಮ್ಮ ಕೋಪ ತಾಪವನ್ನೆಲ್ಲಾ ಶಿಕ್ಷಣದ ದಾಖಲೆಗಳ ಸಮೇತ ವ್ಯಕ್ತಪಡಿಸಿದರು. ಆದರೆ ಹೆಣ್ಣಿನ ಮನೆಯವರಿಂದ ಮಾತ್ರ ಮೌನದ ಉತ್ತರ..

ಈ ಮೇಲಿನ ಎಲ್ಲಾ ವಿಚಾರಗಳು ಕೇವಲ ನಿದರ್ಶನಗಳು ಮಾತ್ರ. ಇಂತಹ ಅನೇಕ ವಿಚಾರಗಳು ನಮ್ಮ ನಿಮ್ಮ ನಡುವೆ ಹಲವಾರಿವೆ. ಆದರೆ ಕೆಲವೊಮ್ಮೆ ಬಹಿರಂಗವಾಗಿ ಹೇಳಿದರೆ ಮತ್ತೆ ಕೆಲವರು ಸುಮ್ಮನೆ ನಕ್ಕು ಸಮ್ಮನಿರುತ್ತಾರೆ. ಹಾಗಂದ ಮಾತ್ರಕ್ಕೆ ಕೇವಲ ಹೆಣ್ಣಿನಿಂದ ಮನೆಯವರಿಂದ ಮಾತ್ರ ಇಂತಹ ಆರೋಪಗಳು ಕೇಳಿ ಬರುತ್ತವೆ ಎಂದು ಹುಬ್ಬೇರಿಸಬೇಡಿ. ಇದಕ್ಕೆ ತದ್ವಿರುದ್ದವಾದ, ಇದಕ್ಕಿಂತ ಘೋರವಾದ ವಿಚಾರಗಳು ಹುಡುಗರ ಮನೆಯಿಂದ ಹುಡುಗಿ ಮನೆಯವರು ಕೇಳಿದ್ದಾರೆ, ನೋಡಿದ್ದಾರೆ, ಅನುಭವಿಸಿದ್ದಾರೆ. ಅದು ನಮಗೂ ಗೊತ್ತು. ನಿಮಗೂ ಗೊತ್ತು.

ಆದರೆ ನಾನೀಗ ಕೇವಲ ಹುಡುಗರು ಅನುಭವಿಸಿರುವ ವಿಚಾರಗಳನ್ನು ಅಷ್ಟೇ ತಿಳಿಸ ಬಯಸುತ್ತೇನೆ. ಹಾಗಂದ ಮಾತ್ರಕ್ಕೆ ಮಹಿಳೆಯ ವಿರೋಧಿ ಅಂತು ನಾನಲ್ಲ.

ಬಹಳ ಕಷ್ಟ... ಬೇಜಾರು.. ಎಲ್ಲಾ ಆಗುತ್ತೆ. ಏನಕ್ಕಪ್ಪಾ ಅಂದ್ರೆ ಮದುವೆಗೆ ಹೆಣ್ಣನ್ನು ಹುಡುಕುವುದು ತುಂಬಾನೆ ಕಷ್ಟವಿದೆ. ಇತ್ತೀಚೆಗೆ ನನ್ನ ಸ್ನೇಹಿತ ವೆಂಕಟರಾಜು ಹೀಗೆ ಬೇದಿಗೆ ವ್ಯಕ್ತಪಡಿಸಿದಾಗಲೇ ನನಗರಿವಾಗಿದು ಮದುವೆಗೆ ಹೆಣ್ಣು ಸಿಗುವುದು ಬಹಳ ಕಷ್ಟವಿದೆ ಎಂದು. ಅಲ್ಲದೆ ಅವನು ಅರೆ ಸರ್ಕಾರಿ ನೌಕರ. ಇರುವುದಕ್ಕೊಂದು ಮನೆ ಬಿಟ್ಟರೆ ಬೇರೇನು ಸ್ಥಿರಾಸ್ತಿ ಇಲ್ಲ. ಅವನು ಕಳೆದ 2 ವರ್ಷಗಳಿಂದ ಹೆಣ್ಣಿನ ತಲಾಶೆನಲ್ಲಿದ್ದ. ಹೀಗಾಗಿ ಅವನ ಮನಸ್ಸು ತುಂಬಾ ಬೇಸರದಲ್ಲಿತ್ತು. ಈಗಾಗಲೇ ನೋಡಿರುವ ಒಂದಿಬ್ಬರು ಒಪ್ಪಿಗೆ ಕೊಟ್ಟಿದ್ದಾರೆ. ಇನ್ನೇನು ಅವರು ಕೂಡ ಗಂಡಿನ ಮನೆಗೆ ಬಂದು ಮಾತನಾಡಲಿದ್ದಾರೆ. ಈ ಸಂಬಂಧಗಳು ಕೂಡ ಕೂಡದಿದ್ದರೆ ಮಮದುವೆಯ ಬಗ್ಗೆ ಮರು ಚಿಂತನೆ ನಡೆಸಬೇಕಾಗುತ್ತೆ ಎಂದಾಗ ವೆಂಕಟರಾಜ ನನಗೆ ಒಂದು ಕ್ಷಣ ಈವಿಚಾರವನ್ನು ಗಂಭೀರವಾಗಿ ಯೋಚಿಸಬೇಕಾಗುತ್ತೆ ಎಂದೆನಿಸದೇ ಇರಲಿಲ್ಲ.

ಅವನು ಇನ್ನು ಮದುವೆಯ ಬಗ್ಗೆ ಗಹನ ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದಾನೆ. ಇಷ್ಟೆಲ್ಲಾ ಕಷ್ಟವಿದೆಯಾ ಮುದುವೆ ಅಂದರೆ. ನಾನದಕ್ಕೆ ಈ ರೀತಿಯ ಸಲಹೆ ಕೊಟ್ಟೆ.. ಸುಮ್ಮನೆ ಲವ್‌ ಮ್ಯಾರೇಜ್ ಆಗಯ್ಯಾ.. ಸುಮ್ಮನೆ ಯಾಕೆ ಕೊರಗ್ತೀಯಾ? ಎಂದು ಸಲಹೆ ಕೊಟ್ಟೆ. ಮೊದಲು ಅವನು ತಲೆಯಾಡಿಸಿ ಕೊನೆಗೆ ಛೇ.. ಬಿಡಪ್ಪಾ. ಏನೋ ಒಂದು ಆಗುತ್ತೆ ಎಂದ. ನನ್ನಂತೆ ಅನೇಕ ಸ್ನೇಹಿತು ಇವನಿಗೆ ಕೆಲಸಕ್ಕೆ ಬಾರದ, ಬಾಲಿಷವಾದ ಸಲಹೆಗಳು ಹರಿದು ಬಂದವು.

ಆದರೆ ಅವನು ಇನ್ನು ಮುಂದಿನ ಯೋಚನೆ ಗುಟ್ಟು ಬಿಡುತ್ತಿಲ್ಲ. ಇರಲಿ ಆದಷ್ಟು ಬೇಗ ಇವನ ಕಬ್ಬಿಣದ ಕಡಲೆಯಾದ ಮದುವೆ ಪುರಾಣ ಮುಗಿಯುತ್ತೆ ಎಮದು ಭಾವಿಸುತ್ತೇನೆ..

- ಬಾಲರಾಜ್ ಡಿ. ಕೆ