ಮದುವೆ ಮನೆಯಲ್ಲಿ ಒಗಟು

ಮದುವೆ ಮನೆಯಲ್ಲಿ ಒಗಟು

ಬರಹ

ಪ್ರಿಯ ಗೆಳೆಯರೆ,
ನಾನು ಹುಟ್ಟಿ ಬೆಳೆದದ್ದು ಒಂದು ಹಳ್ಳಿಯೂ ಅಲ್ಲದ ಪೇಟೆಯೂ ಅಲ್ಲದ ಒಂದು ಊರಿನಲ್ಲಿ.ಇತ್ತೀಚೆಗೆಷ್ಟೆ ನಾನು ಮದುವೆ ಮಾಡ್ಕೊಂಡೆ..ಹುಡುಗಿ ಬೆಂಗಳೂರಿನವಳು.ನಮ್ಮದು ಪ್ರೇಮ ವಿವಾಹ. ಮದುವೆಯಂತು ಸಂಭ್ರಮದಿಂದ ನಡೆಯಿತು.ಆದ್ರೆ ನಮ್ಮೂರಿನ ತರಹ ಮದು ಮಕ್ಕಳಿಗೆ ತಮ್ಮ ಬಾಳ ಸಂಗಾತಿಯ ಹೆಸರು ಕೇಳುವುದು, ಅದರಲ್ಲೂ ಒಗಟಿನಲ್ಲಿ ಹೆಸರು ಕೇಳುವುದು ಯಾವುದು ಇರಲಿಲ್ಲ.ಅದು ನಮ್ಮ ಗ್ರಾಮೀಣ ಬದುಕಿಗೆ ಚೆಂದ.ಈ ಪಟ್ಟಣದ ಜಂಜಾಟದ ಬದುಕಿನಲ್ಲಿ ಇದಕ್ಕೆಲ್ಲ ಟೈಮ್ ಎಲ್ಲಿರುತ್ತೆ ಜನರಿಗೆ?ಆದ್ರು ನನ್ನ ತರ್ಲೆ ಮಿತ್ರರು ನನಗೆ ಒಗಟಿನಲ್ಲಿ ನನ್ನ ಸಂಗಾತಿಯ ಹೆಸರು ಹೇಳೋಕೆ ಒತ್ತಾಯ ಮಾಡಿದ್ರು.ಅದರ ಒಂದು ತುಣುಕು ನಿಮಗಾಗಿ ಇಲ್ಲಿದೆ.ಇಂತಹ ಇನ್ನಷ್ಟು ಒಗಟುಗಳು ಇದ್ರೆ ದಯವಿಟ್ಟೂ ನನಗೆ ಕಳುಹಿಸಿ.
ಪತಿ: ಗುಂಗುರ್ ಕೂದ್ಲು ,ಬಂಗಾರ ಬೈತಲಿ,ಬಂಗ್ಲೆದಾಗ ಕುಂತು ಇಂಗ್ಲೀಷ್ ಓದ್ತಾಳ ನನ್ನಾಕಿ...................(ಹೆಂದತಿಯ ಹೆಸರು)
ಪತ್ನಿ: ಕಟಕ್ ರೊಟ್ಟಿ, ಕಲ್ಲಾನ ಹಿಂಡಿ,ಕಟ್ಗೊಂಡು ಹೋಗು ಅಂದ್ರೆ ಸೆಟಗೊಂಡು ಹೋಗ್ತಾನ.....................(ಗಂಡನ ಹೆಸರು)