ಮನೆಯಲ್ಲೊಂದು ಪುಟ್ಟ ಕಾಡು - ಬೊನ್ಸಾಯ್ ಸಸ್ಯಗಳು
ಬೊನ್ಸಾಯ ಗಿಡ ಎಂದರೆ ಜಪಾನಿ ಭಾಷೆಯಲ್ಲಿ ಬೊನ್ ಎಂದರೆ ಕುಂಡ, ಸಾಯ್ ಎಂದರೆ ಮರ ಎಂದರ್ಥ. ಹೀಗೆಂದರೆ ಕುಂಡದಲ್ಲಿ ಮರ ಬೆಳೆಸುವುದು ಎಂದರ್ಥವಾಗುತ್ತದೆ. ಇದು ಮೂಲ ಭಾರತೀಯರಾದ ಶರಣರ, ಸಂತರ, ದಾರ್ಶನಿಕರೆಲ್ಲರೂ ಈ ಸಸಿಗಳನ್ನು ಬೆಳೆಸುವ ಕಾಯಕವನ್ನು ಮಾಡಿಕೊಂಡು ಬರುತ್ತಿದ್ದರು ಎಂಬ ಮಾಹಿತಿ ಇದೆ. ಅದೇ ಪ್ರಕಾರ ಅವರೆಲ್ಲರೂ ಪರಿಸರ, ಅರಣ್ಯ ರಕ್ಷಣೆಯ ಕೆಲಸ ಮಾಡಿದರಿಂದಲೇ ನಮಗೆ ಇಷ್ಟು ವರ್ಷಗಳ ಕಾಲ ಯಾವುದೇ ರೀತಿಯಿಂದ ಅಂದರೆ ಪ್ರಕೃತಿಯಿಂದ ಹಾನಿ ಸಂಭವಿಸಿದೇ ನಾವು ಸುಖವಾಗಿ ಬಾಳಿದೇವೆ ಎನ್ನಬಹುದು. ಆದರೆ ಬರು ಬರುತ್ತಾ ಕಾಡುಗಳನ್ನು ನಾಶ ಮಾಡಿ, ನಗರಗಳನ್ನು ನಿರ್ಮಿಸಿ, ನಮ್ಮ ಬೆನ್ನೇ ನಾವು ತಟ್ಟಿಗೊಂಡು, ನಾವೇ ಶ್ರೇಷ್ಠರು ಎಂದು ಎದೆ ಉಬ್ಬಸಿ ಬದುಕುತ್ತಿದ್ದೇವಲ್ಲಾ, ಇದೇ ನೋಡಿ ನಮ್ಮ ಅಹಾಂಕರಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದು, ಹಾಕಿದ್ದು.........ಹೀಗೆ ದಿನಗಳು ಉರುಳಿದಂತೆ ಇದೆಲ್ಲಾ ನಾವುಗಳು ಮರೆತು ಹೋಗಿ ಹಲವು ವರ್ಷಗಳೇ ಕಳೆದು ಹೋಗಿವೆ. ಸಧ್ಯದ ದಿನಮಾನಗಳಲ್ಲಿ ಈ ಚಟುವಟಿಕೆಗಳು ವಿದೇಶಿಗರ ಆಸಕ್ತಿ ಜೊತೆಗೆ ಅವರ ಪಾಲಾಗಿರುವುದು ಕಾಣುತ್ತವೆ. ಇದು ನಮ್ಮ ದುರಂತ ಎನ್ನಬಹುದು. ಭಾರತೀಯರಾದ ನಾವು ಬೊನ್ಸಾಯ್ ಗಿಡ ಬೆಳೆಸುವ ಬಗೆ ಯೋಚನೆ ಖಂಡಿತಾ ಮಾಡುತ್ತಿಲ್ಲ. ಕಾರಣ ನಮ್ಮಲ್ಲಿ ಆಸಕ್ತಿ, ಅಭಿಮಾನ, ನಿಸ್ವಾರ್ಥ ಸೇವೆ, ಅರಣ್ಯ ಸಂಪತ್ತು ರಕ್ಷಣೆ ಮಾಡಬೇಕೆಂಬ ಪರಿಜ್ಞಾನವೇ ಇಲ್ಲ. ಇನ್ನು ಅರಣ್ಯ ಸಂಪತ್ತು, ಪರಿಸರ ಸಂರಕ್ಷಣೆ ಮಾಡಬೇಕೆಂಬ ಕನಿಷ್ಠ ತಿಳುವಳಿಕೆ ಸಹ ಇಲ್ಲದಿರುವುದು ದುರಂತ ಎನ್ನಬಹುದು. ಹೀಗಾಗಿಯೇ ಇಂದು ನಮಗೆ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಆದಕಾರಣ ಈಗಲಾದರೂ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಮುಂದೆ ಬರಲಿರುವ ಭಯಂಕರ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಮನೆಗೊಂದು, ಮಕ್ಕಳಿಗೊಂದು ಎನ್ನುವಂತೆ ಪ್ರತಿ ವರ್ಷ ಒಂದೊಂದು ಸಸಿಗಳನ್ನು ನೆಟ್ಟು, ಜೊಪಾನವಾಗಿ ಬೆಳೆಸುವ ಮೂಲಕ ಪರಿಸರ ರಕ್ಷಣೆ ಮಾಡುವುದು ಸೇರಿದಂತೆ ಅರಣ್ಯ ಸಂಪತ್ತು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಮುಕ್ತ ಮನಸ್ಸಿನಿಂದ ಹೆಜ್ಜೆ ಹಾಕಬೇಕು, ಅಂದಾಗಲೇ ಮಾತ್ರ ನಾವೆಲ್ಲರೂ ಸುಖಕರವಾಗಿ ಬಾಳಲು ಸಾಧ್ಯ, ಇಲ್ಲವಾದಲ್ಲಿ ಆ ಘನ ಘೋರ, ಕಲ್ಪನೆಗೂ ಮೀರಿದ ಅನಾಹುತಗಳಿಗೆ ಬಲಿಯಾಗಲು ಸಿದ್ದರಾಗಲೇಕು.ಆದಕಾರಣ ಬಂಧುಗಳೇ ಇಂತಹ ಭಯಂಕರವಾದ ಸಂಕೋಲೆಗಳನ್ನು ಮೆಟ್ಟಿ ನಿಲ್ಲಲು ನಮ್ಮಲ್ಲಿ ಉಳಿದ ಏಕೈಕ ಅಸ್ತ್ರ ಒಂದೇ ಅದುವೇ ಪರಿಸರ ಕಾಪಾಡುವುದು.
ಹಾಗಾಗಿಯೇ ಬರುವ ಎಲ್ಲಾ ರೀತಿಯ ಕಷ್ಟಗಳಿಗೆ ಒಂದೇ ಉಪಾಯ, ಅದುವೇ ಪರಿಸರ ರಕ್ಷಣೆ - ಸಂರಕ್ಷಣೆ ಎಂಬುದು ಅರಿತು, ಹೆಚ್ಚು ಹೆಚ್ಚಾಗಿ ಸಸಿಗಳನ್ನು ನೆಟ್ಟು,ಬೆಳೆಸುವ ಕೆಲಸ ಮಾಡಬೇಕು ಮತ್ತು ಆಗಲೇಬೇಕು. ಹೀಗಾದಾಗ ಮಾತ್ರ ನಾವೆಲ್ಲರೂ ಸ್ವಚ್ಚಂದವಾಗಿ ಬಾಳಲು ಸಾಧ್ಯ. ಆದ್ದರಿಂದ ನಾವೆಲ್ಲರೂ ಬೋನ್ಸಾಯ್ ಸಸ್ಯಗಳು ನಮ್ಮ ನಮ್ಮ ಮನೆಯಲ್ಲಿಯೇ ನೆಟ್ಟು ಪುಟ್ಟ ಕಾಡು ನಿರ್ಮಿಸಿಕೊಂಡರೆ ಬೇಕಾದಷ್ಟು ಆಮ್ಲಜನಕ ಪಡೆಯಬಹುದಾಗಿದೆ. ಈ ಬೊನ್ಸಾಯ್ ಗಿಡಗಳು ಆಮ್ಲಜನಕವನ್ನು ಅಧಿಕವಾಗಿ ಕೊಡುವ ಮೌಲ್ಯದ ಗಿಡಗಳಾಗಿವೆ ಎನ್ನುವುದು ಸತ್ಯ.
ಹೀಗಾಗಿ ಮನೆಯಲ್ಲಿರುವ ಎಲ್ಲರೂ ಈ ಕಾಯಕ ರೂಢಿಸಿಕೊಂಡರೆ ಪರಿಸರ ಸಂರಕ್ಷಣೆ ಮಾಡಲು ತುಂಬಾ ಸಹಕಾರಿಯಾಗುತ್ತದೆ.ಎಲ್ಲರೂ ಮನೆಯಲ್ಲೊಂದು, ಮನೆಯ ಆವರಣದಲ್ಲೊಂದು ಪುಟ್ಟ ಕಾಡು ನಿಮಿ೯ಸುವ ಮೂಲಕ ಹಲವಾರು ರೋಗಗಳನ್ನು ತಡೆಗಟ್ಟಲು ಹಾಗೂ ಹೊಡೆದೊಡಿಸಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ನಮ್ಮದು,
ಮಾನವನ ವೇಗದ ಬದುಕಿನಲ್ಲಿ ಪರಿಸರ ಸಂರಕ್ಷಣೆ ಜೊತೆಗೆ ಅರಣ್ಯ ಸಂಪತ್ತು ಸಂಪೂರ್ಣವಾಗಿ ನಾಶ ಮಾಡುವ ಮೂಲಕ ಕಡೆಗಣಿಸುತ್ತಿರುವ ನಾವು, ನಮ್ಮ ಜೀವನ ಶೈಲಿ ಮುಂದೊಂದು ದಿನ ನಮ್ಮಗೆಲ್ಲರಿಗೂ ಮುಳ್ಳಾಗಬಹುದು ಎಂಬ ಎಚ್ಚರಿಕೆ ಇರಲಿ, ಮನುಷ್ಯ ಪರಿಸರದ ಮೇಲೆ ದಿನನಿತ್ಯ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ದರೆ ಜೀವಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗುತ್ತದೆ ಎಂಬುದು ಮರೆಯದಿರಲಿ, ಎನ್ನುವ ವಿಚಾರಗಳನ್ನು ವ್ಯಕ್ತ ಪಡಿಸುತ್ತಾ ಪರಿಸರ ರಕ್ಷಣೆಯ ಅಭಿಯಾನಗಳು ಒಂದು ದಿನದ ಅಭಿಯಾನಗಳಾಗದೇ, ಆಚರಣೆಗೂ ಬರುವಂತಾಗಬೇಕು. ಅಂದಾಗಲೇ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಾಗಬಹುದು. ಇನ್ನು ನಮ್ಮ ನಮ್ಮ ಮನೆ ಆವರಣ ಮತ್ತು ಲಭ್ಯ ಸ್ಥಳಗಳಲ್ಲಿ ಸಸಿ ನೆಟ್ಟು ಬೆಳೆಸುವ ಮೂಲಕ ಎಲ್ಲರೂ ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಬೇಕು. ಈ ವಿಷಯದಲ್ಲಿ ಸಾಲುಮರದ ತಿಮ್ಮಕ್ಕ ನಮಗೆ ಹಾಗೂ ವಿಶ್ವಕ್ಕೆ ಮಾದರಿ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬ ನಾಗರಿಕರಲ್ಲೂ ಪರಿಸರ ಸಂರಕ್ಷಣೆದ ಬಗ್ಗೆ ಅಭಿಮಾನ ಹಾಗೂ ಜಾಗೃತಿ ಮೂಡಬೇಕು. ಕೇವಲ ವರ್ಷಕ್ಕೆ ಒಂದು ದಿನ ಮಾತ್ರ ಪರಿಸರ ರಕ್ಷಣೆಗೆ ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಆದಾಗ ಮಾತ್ರ ಪರಿಸರ ರಕ್ಷಣೆಗೆ ಸಹಕಾರಿಯಾಗಲಿದೆ.
ಏಕೆಂದರೆ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ತಿಳಿದುಕೊಳ್ಳುವ ಕೆಲಸ ನಾವೆಲ್ಲರೂ ಮಾಡಬೇಕು. ಮಾಡುವ ಮೂಲಕ ಪರಿಸರ ಸ್ನೇಹಿ ಜೀವವನ್ನು ಸಾಗಿಸುವ ಸಾಧ್ಯ. ಇನ್ನು ಇದೆ ಆಶಯವನ್ನು ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಮುನ್ನಡೆಯೋಣ. ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸೋಣ, ಕಾಡು ಬೆಳೆಸಿ ನಾಡು ಉಳಿಸಿ, ಪರಿಸರ ಒಂದೇ ಜಗದ ಸೃಷ್ಟಿಕರ್ತ.
ಮಾಹಿತಿ: ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ.
ಚಿತ್ರ ಕೃಪೆ: ಅಂತರ್ಜಾಲ ತಾಣ