ಮನೆಯ ಸೌಭಾಗ್ಯಕ್ಕಾಗಿ ಹೊಸ್ತಿಲಿಗೆ ಪೂಜೆ ಮಾಡಿ
ನಮ್ಮ ಹಿಂದೂ ಸಂಪ್ರದಾಯದಲ್ಲಿ ಪೂಜೆ ಪುನಸ್ಕಾರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಈ ಒಂದು ಪೂಜೆ-ಪುನಸ್ಕಾರ ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ, ಅದೇ ರೀತಿಯಾಗಿ ಹಿಂದಿನಿಂದಲೂ ನಮ್ಮ ಹಿರಿಯರು ಮಾಡಿಕೊಂಡು ಬಂದಂತಹ ಪದ್ಧತಿಗಳಲ್ಲಿ ಹೊಸ್ತಿಲ ಪೂಜೆಯು ಕೂಡ ಒಂದು. ನಮ್ಮ ಸಂಪ್ರದಾಯದಲ್ಲಿ ದೇವರಿಗೆ ಎಷ್ಟು ಪ್ರಾಮುಖ್ಯತೆಯನ್ನು ಕೊಡುತ್ತೇವೋ ಅಷ್ಟೇ ಪ್ರಾಮುಖ್ಯತೆಯನ್ನು ಕೂಡ ಹೊಸ್ತಿಲಿಗೆ ಕೊಡುತ್ತೇವೆ ಅದರಲ್ಲೂ ಮನೆಯ ಮುಖ್ಯ ಭಾಗದಲ್ಲಿರುವ ಹೊಸ್ತಿಲು ಮನೆಯ ಸೌಭಾಗ್ಯದ ಆಗಮನದ ದಾರಿ ಎಂದು ಹೇಳಲಾಗುತ್ತದೆ, ಇಂತಹ ಹೊಸ್ತಿಲಿಗೆ ನಮ್ಮ ಹಿರಿಯರು ಕೂಡ ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿಕೊಂಡು ಬಂದಿದ್ದಾರೆ ಒಂದು ಪದ್ಧತಿ ಈಗಲೂ ಕೂಡ ಇದೆ ಆದರೆ ಇದರ ಹಿಂದಿನ ಉದ್ದೇಶವೇನು ಅರ್ಥ ಏನು ಎನ್ನುವುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಹಾಗಾದರೆ ಹೊಸ್ತಿನ ಪೂಜೆಯ ಹಿಂದಿನ ಅರ್ಥ ಮತ್ತು ಉದ್ದೇಶಗಳು ಏನು ಎಂದು ನೋಡೋಣ.
ಮನೆಯಲ್ಲಿ ಹೆಣ್ಣು ಮಕ್ಕಳು ಅದರಲ್ಲಿಯೂ ಮದುವೆಯಾದ ಅಂತಹ ಸುಮಂಗಲಿಯರು ಪ್ರತಿನಿತ್ಯ ಹೊಸಲಿನ ಪೂಜೆಯನ್ನು ಮಾಡುವುದರಿಂದ ಮನೆಯೂ ಸೌಭಾಗ್ಯದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ, ಪ್ರತಿನಿತ್ಯ ಹೊಸ್ತಿಲನ್ನು ತೊಳೆದು ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ರಂಗೋಲಿಯನ್ನು ಇಟ್ಟು ಸುಗಂಧ ಭರಿತವಾದ ಹೂವುಗಳನ್ನು ಇಟ್ಟು ಧೂಪಗಳಿಂದ ಗಂಧದಕಡ್ಡಿಗಳಿಂದ ಪೂಜೆಯನ್ನು ಮಾಡಿ ಹೊಸ್ತಿಲನ್ನು ನಮಸ್ಕರಿಸುವುದರಿಂದ ಅದು ಮನೆಯ ಅಭಿವೃದ್ಧಿಗೆ ಸಮೃದ್ಧಿಗೆ ನೆರವಾಗುತ್ತದೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಹೆಣ್ಣುಮಗಳು ಮಹಾಲಕ್ಷ್ಮಿ ದೇವಿಯ ಸ್ವರೂಪವಾಗಿದ್ದು ಮನೆಯ ಸಮೃದ್ಧಿಯ ಸ್ವರೂಪವಾಗಿದ್ದು ಅಂತಹ ಮಹಿಳೆ ಹೊಸ್ತಿಲನ್ನು ಪೂಜಿಸಿ ಮನೆಗೆ ಮಂಗಳಕರವಾದ ಆರ್ಥಿಕವಾಗಿ ಮಹಾಲಕ್ಷ್ಮಿಯ ಸ್ವಾಗತವನ್ನು ಕೋರಿ ಹೊಸ್ತಿಲನ್ನು ಪೂಜೆ ಮಾಡುವುದರಿಂದ ಆ ಮನೆಯಲ್ಲಿ ಮಂಗಳ ಕಾರ್ಯಗಳು ಮಹಾಲಕ್ಷ್ಮಿದೇವಿ ಅನುಗ್ರಹಗಳು ಮನೆಯ ಸಮೃದ್ಧಿಗಳ ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ನಮ್ಮ ನಂಬಿಕೆಗಳ ಪ್ರಕಾರ ಮಹಾಲಕ್ಷ್ಮಿದೇವಿ ಪ್ರಸನ್ನಳಾಗಿರುವಾಗ ಯಾವಾಗಲೂ ಸಂಚಾರವನ್ನು ಮಾಡುತ್ತಿರುತ್ತಾಳೆ. ಯಾರ ಮುಖ್ಯ ದ್ವಾರದ ಬಾಗಿಲು ಸ್ವಾಗತವನ್ನು ಕೋರುವ ರೀತಿಯಲ್ಲಿ ಅಲಂಕೃತವಾಗಿ ಧೂಪಗಳಿಂದ ಕೂಡಿರುತ್ತದೆ ಆ ಮನೆಗೆ ಮಹಾಲಕ್ಷ್ಮಿ ದೇವಿಯ ಇಷ್ಟಪಟ್ಟು ಒಳಗೆ ಬರುತ್ತಾಳೆ ಎಂದು ಹೇಳಲಾಗುತ್ತದೆ, ಹಾಗಾಗಿ ಮನೆಯ ಸಮೃದ್ಧಿಗಾಗಿ ಮನೆಯ ಏಳಿಗೆಗಾಗಿ ಮನೆಯ ಸದಸ್ಯರ ಒಳಿತಿಗಾಗಿ ಹೊಸ್ತಿಲ ಪೂಜೆ ಬಹಳ ಮುಖ್ಯವಾಗಿರುತ್ತದೆ. ಅಷ್ಟೇ ಅಲ್ಲದೆ ಮನೆಯ ಒಳಗಡೆ ಋಣಾತ್ಮಕ ಶಕ್ತಿಗಳ ಆಗಲಿ, ಸಕಾರಾತ್ಮಕ ಶಕ್ತಿಗಳಾಗಲಿ ಪ್ರವೇಶ ಮಾಡುವುದು ಮನೆಯ ಮುಖ್ಯದ್ವಾರದಿಂದ ಆಗಿರುವುದರಿಂದ ಮನೆಯ ಮುಖ್ಯದ್ವಾರವನ್ನು ಯಾವಾಗಲೂ ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು. ಅರಿಶಿನ ಕುಂಕುಮವನ್ನಿಟ್ಟು ಪೂಜೆಯನ್ನು ಮಾಡುವುದರಿಂದ ಅಲ್ಲಿ ದೈವಿಕ ಶಕ್ತಿ ಹೆಚ್ಚಾಗುತ್ತದೆ, ಹಾಗಾಗಿ ಮನೆಯ ಒಳಗಡೆ ಯಾವುದೇ ರೀತಿಯ ಋಣಾತ್ಮಕ ಶಕ್ತಿಗಳ ಪ್ರವೇಶವನ್ನು ಮಾಡುವುದಿಲ್ಲ, ಅಷ್ಟೇ ಅಲ್ಲದೆ ಮನೆಯಲ್ಲಿ ಮುಖ್ಯ ದ್ವಾರದ ಬಾಗಿಲು ಸ್ವಚ್ಛತೆ ಇಲ್ಲ ಎಂದರೆ ದರಿದ್ರಲಕ್ಷ್ಮಿ ಯು ಒಳಗೆ ಬರುತ್ತಾಳೆ ಆಗ ಮಹಾಲಕ್ಷ್ಮಿದೇವಿ ಮನೆಯಲ್ಲಿ ನೆಲೆಸುವುದಿಲ್ಲ.
ಈ ಎಲ್ಲಾ ಕಾರಣದಿಂದಾಗಿ ನಮ್ಮ ಹಿರಿಯರು ಹಿಂದಿನ ಕಾಲದಿಂದಲೂ ಹೊಸ್ತಿಲಿನ ಪೂಜೆಗೆ ಸಾಕಷ್ಟು ಪ್ರಮುಖ್ಯತೆಯನ್ನು ನೀಡಿಕೊಂಡು ಬಂದಿದ್ದಾರೆ ಮನೆಯ ಸಮೃದ್ಧಿ ಅಭಿವೃದ್ಧಿಗಾಗಿ ಮಹಾಲಕ್ಷ್ಮಿದೇವಿ ಅನುಗ್ರಹಕ್ಕಾಗಿ ಮನೆಯಲ್ಲಿ ಸಕಾರಾತ್ಮಕತೆಯು ಹೆಚ್ಚಾಗಬೇಕು ಎಂದು ಹೊಸ್ತಿಲಿನ ಪೂಜೆಯನ್ನು ಮಾಡಲಾಗುತ್ತದೆ.
-ಸತೀಶ್ ಶೆಟ್ಟಿ ಚೇರ್ಕಾಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ