ಮರೀಚಿಕೆ

ಮರೀಚಿಕೆ

ಕವನ

ಬದುಕಿನ ಬೀದಿಯಲ್ಲಿ ಉದ್ಯೋಗ, ಹಣದ ಅಂಗಡಿಗಳು!

ಕಣ್ಣು ಕೋರೈಸುವ ಚಂದದ ಬೆಳಕಿನ ಅಂಗಡಿಗಳು!

ಬಾಳ 'ಬೇಕು'ಗಳ ಬೇರು ಗಟ್ಟಿಗೊಳಿಸಲು ಗೊಬ್ಬರ ಸಿಗುವ ಮಳಿಗೆಗಳು!

 

ಬೇಕುಗಳ ಪಟ್ಟಿ ಬೆಳೆಯುತ್ತಲೇ ಇತ್ತು.. ನಿಲ್ಲದ ವ್ಯಾಪಾರಗಳು!

ಇನ್ನೊಂದು, ಮತ್ತೊಂದು, ಮಗದೊಂದು.. ಎಲ್ಲಿದೆ ಪಟ್ಟಿಯ ಕೊನೆಗಳು?!

ಬದುಕ ಬೀದಿಯಲಿ ಬಾಚಿ ಬಳಿದು ಮಾಡಿದೆ ಖರೀದಿಗಳು!

ಬಸವಳಿದೆ, ಬಾಯಾರಿದೆ ಆದರೆ ಮುಗಿಯದ ಬಯಕೆ, ಬವಣೆಗಳು..

 

ಸಂಗಾತಿ ಸುಖವ, ಮಕ್ಕಳ ಒಡನಾಟವ ಬದಿಗೊತ್ತಿ ಹತ್ತಿತು ಗೀಳು

ಹಾಡು, ಕಥೆ, ನಾಟ್ಯ, ಕಲೆ, ಅಧ್ಯಾತ್ಮಕೆಲ್ಲಿದೆ ವ್ಯಾಪಾರ ಮಳಿಗೆಗಳು?!

ನೈಸರ್ಗಿಕ, ಸುಂದರ ಪ್ರಕೃತಿಯ ಹಸಿರು ಹಾದಿಗಳು ಬರೀ ಕನಸುಗಳು...

ಹಗಲುಗನಸುಗಳು, ಬಿಸಿಲ್ಗುದುರೆಗಳು, ಮರೀಚಿಕೆಯ ಓಡುವ ಜಿಂಕೆಗಳು!!!

-ಅಮರದೇವ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್