ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ

ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ

ಕವನ

 


ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ,
ಶಾಲೆ ಮರೆತು ಆಟದಲಿ ಬೆರೆತು,
ಮಗ್ಗಿ ಬರಾರದೆ ಅಪ್ಪಅಮ್ಮನ ಹೊಡೆತ ತಿಂದು ಬಿಕ್ಕಿ ಅತ್ತಿದ್ದು,
ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ.


 


ಮರಹತ್ತಿ ನಲಿದು, ಮಾವು ಕದ್ದು ಸಿಕ್ಕಾಗ, ಕೊರಳ ಪಟ್ಟಿ ಹಿಡಿದ ಗೌಡಗೆ
ಗುಂಡಿ ಬಿಚ್ಚಿ ಅಂಗಿ ಕೊಟ್ಟಿ ಕದ್ದು ಓಡಿದ್ದು
ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ.


 


ಕೆಸರಲ್ಲಿ ಕರಗಿ ಹೊಲಗದ್ದೆಯಲಿ ಬದಿಯಲಿ ಓಡಾಡಿದ್ದು 
ಬದದ ಬದಿಯ ಬಿಲದ ಹಾವ ಕಂಡು ಚೀರಿ ಅತ್ತಿದ್ದು
ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ.


 


ಜಿಗಿದು ಕುಣಿದು ನಾಲೆಗಳಲಿ ಈಜೀ, ಮರಳಲಿ ಹೊರಳಾಡಿದ್ದು
ಶಂಕ ಕಪ್ಪೆ ಚಿಪ್ಪಗಳ ಕೂಡಿಸಿ ಏಣಿಸಿ ನಲಿದದ್ದು
ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ.


 


ಗಿಲ್ಲಿಹಿಡಿದು ಗಲ್ಲಿಸುತ್ತಿ , ಗೋಲಿಯಾಡಿ ಕೈಕಾಲು ಗಾಯ ಮಾಡಿಕೊಂಡದ್ದು
ಲಗೊರಿಯಾಡ್ತಾ ಚೆಂಡು ಚೆಲುವಮ್ಮಗೆ ತಗುಲಿ ಕದ್ದು ಓಡ್ಡಿದ್ದು.
ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ.


 


ಎಮ್ಮೆ ಕೋಣವ ಹತ್ತಿ , ಕೆರೆಯೀರಿ ಸುತ್ತಿದ್ದು,
ಗೋಧುಳಿನಲಿ ಮನೆಯ ಸೇರಿ ಚುರುಮುರಿಯ ತಿಂದದ್ದು
ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ.


 


ದಿನೇಶ್ ಕೆ ಆರ್