ಮಲೆನಾಡಿನ ಕಲಾಕೃತಿಯಂಥ ದೃಶ್ಯಗಳು
ಕಾಫಿತೋಟಕ್ಕೆ ಹೊಂದಿಕೊಂಡಂತೆ ಇರುವ ಹೆಂಚಿನಮನೆ,ಮನೆಯ ಹಿಂಬದಿಯಲ್ಲಿಗಗನಚುಂಬಿ ಕಾಡುಮರಗಳು.ಮನೆಯ ಬಲಬದಿಗೆ ಇರುವ ಬಚ್ಚಲುಮನೆಯ ದೊಡ್ಡ ಅಂಡೆಯಲ್ಲಿ ನೀರು ಹಬೆಯಾಡುತಿದೆ.ಮಂದವಾಗಿ ಹೊಗೆ ಬಚ್ಚಲುಮನೆಯ ತುಂಬ ಪಸರಿಸಿದೆ.ಬಚ್ಚಲು ಮನೆಯ ಒಳಗಡೆ ಬೆಚ್ಚನೆಯ ಅನುಭವ.ಹೊರಗೆ ಚಳಿ.ಕಾಮೋರ್ಡಗಳಿಂದ ಆಕಾಶ ಸುತ್ತುವರೆದು ಕತ್ತಲಾವರಿಸಿದಂತೆ ತೋರುತಿದೆ.ಮಳೆಯ ಮುನ್ಸೂಚನೆಯೆಂಬಂತೆ ತೋಟದ ಒಡಲಿಂದ ಜೀರುಂಡೆಗಳು ಜಿರ್ ಧನಿ ಕೇಳಿಬರುತ್ತಿದೆ.ನಿಧಾನಕ್ಕೆ ಮಳೆ ಬೀಳಲು ಶುರುವಾಯಿತು.ಬರಬರತ್ತಾ ಜೋರಾಗಿ ಸುರಿಯತೊಡಗಿತ್ತು.ದೋ ಎಂಬ ಶಬ್ದ ಇಡೀ ಪರಿಸರದಲ್ಲಿ ತುಂಬಿ ಹೋಯಿತು.ಜೊತೆಯೆಂಬಂತೇ ಗಾಳಿಯು ಹೆಚ್ಚಾಗಿ ಮರಗಿಡಗಳೇಲ್ಲ ತೂರಾಡತೊಡಗಿದವು.ತೆಂಗಿನ ಮರದ ಸೋಗೇಯೊಂದು ದಫ್ ಎಂದು ಕೆಳಗೆ ಬಿತ್ತು.ಸಿಡಿಲು,ಗುಡುಗು,ಗಾಳಿ,ಮಳೆ-ಎಲ್ಲವೂ,ಮೌನವಾಗಿರುತ್ತಿದ ಮಲೆನಾಡಿಗೆ ಹೊಸ ಚಲನೆಯನ್ನು ತಂದಿತ್ತು.ಬಚ್ಚಲು ಮನೆಯಲ್ಲಿ ಬಿಸಿಬಿಸಿ ನೀರಿನ ಸ್ನಾನ.ಪಕ್ಕದಲ್ಲೇ ದಗದಗಿಸಿ ಉರಿಯುತಿರುವ ಒಲೆ.ಬಚ್ಚಲುಮನೆಯ ಮೇಲೆ ಸೋಗೆಯ ಹೊದಿಕೆಯ ಸಂದಿನಿಂದ ಜಿನುಗುತ್ತಿರುವ ಮಳೆಹನಿ.