ಮಲ್ಲಿಗೆ ನುಡಿ ಕಾರಣ !
ಮಲ್ಲಿಗೆ, ಇಲ್ಲಿಯೆ ಅರಳಿ
ಸುಗಂಧ ಬೀರುತಾ
ನೀನು ನಿಲ್ಲಲು
ನುಡಿ ಕಾರಣ....
ಕಣ್ಣಿಗೆ ತಂಪನು ನೀಡಲು ಆಸೆಯೆ
ಮನಸಿನ ಮಂದಿರ ಸೇರಲು ಬಯಕೆಯೆ
ಇದು ನನ್ನಯ ಭ್ರಮೆಯೇನು
ಇಲ್ಲ ನಿನ್ನಯ ಕೋರಿಕೆಯೆ
ಮಲ್ಲಿಗೆ.........
ದೇವನ ಶಿರವನು ಅರ್ಚಿಸಲು ತವಕವೆ
ತರುಣಿಯ ಮುಡಿಯನು ಏರಲು ಕಾತರವೆ
ಇದು ನನ್ನಯ ಕನಸೇನು
ಇಲ್ಲ ನಿನ್ನಯ ತಪವೇನು
ಮಲ್ಲಿಗೆ.......
ದುಂಬಿಗೆ ಜೇನನು ಸವಿಯಲು ಸ್ವಾಗತವೆ
ಪ್ರೇಮಿಗೆ ಸಂತಸ ನೀಡಲು ಹರಕೆಯೆ
ಇದು ನನ್ನಯ ಕಥೆಯೇನು
ಇಲ್ಲ ನಿನ್ನಯ ತ್ಯಾಗವೇನು
ಮಲ್ಲಿಗೆ........
ಶ್ರೀ ನಾಗರಾಜ್.