ಮಳೆಯು ಬಂದಿದೆ .....
ಕವನ
ಮಳೆಯು ಬಂದು ಮನವು ಇಂದು ಹಸಿಯಾಗಿದೆ
ಇಲ್ಲೇ ಎಲ್ಲೋ ಇದ್ದ ಬೇಸರಿಕೆ ಮಾಯವಾಗಿದೆ
ತಂಪು ತಂಗಾಳಿ ಮೂಡಿಸಿ ನವೀನ ಕೌತುಕ
ಕರೆದೊಯ್ದಿದೆ ನನ್ನ ಕರೆದೊಯ್ದಿದೆ ನಿನ್ನ .
ಜೊತೆಯಲಿ ನಡೆಯುವ ಮಳೆಯಲಿ ನೆನೆಯುತ
ತನು ಮನ ಒಂದಾಗಲು ನಲಿಯುತ
ಕಲಿಸಿದೆ ಹೊಸ ಭಾಷೆ ; ನುಡಿಸಿದೆ ಹೊಸ ರಾಗ
ನಾನಾದೆ ಮೌನ , ನೀನದರ ಭಾವ
ಕಾಲುನಡಿಗೆಯಲ್ಲೇ ಸವಿಯುವ ಈ ಬಾಳಪಯಣ
ಕಾಲುದಾರಿಗೆ ಕೊಟ್ಟೆ ನೀ ಹೊಸ ರೂಪ
ಕಲಿಸಿದೆ ಹೊಸ ಪಾಠ ; ಹಾಡಿಸಿದೆ ಹೊಸ ಹಾಡ
ನಾ ಕಂಡೆ ಕನಸಾ,ನೀನೆ ಅದರ ತುಂಬಾ .
Comments
ಉ: ಮಳೆಯು ಬಂದಿದೆ .....
In reply to ಉ: ಮಳೆಯು ಬಂದಿದೆ ..... by makara
ಉ: ಮಳೆಯು ಬಂದಿದೆ .....
ಉ: ಮಳೆಯು ಬಂದಿದೆ .....
In reply to ಉ: ಮಳೆಯು ಬಂದಿದೆ ..... by venkatb83
ಉ: ಮಳೆಯು ಬಂದಿದೆ .....