ಮಳೆಯೇ ನೀ ಒಮ್ಮೆ ಮಾತನಾಡು ...!

ಮಳೆಯೇ ನೀ ಒಮ್ಮೆ ಮಾತನಾಡು ...!

ಕವನ

ಮಳೆಯೇ ನೀ ಒಮ್ಮೆ ಮಾತನಾಡು,
ಮೌನದಿ ಏಕೆ ನೀ ಸುರಿತಿರುವೆ
ಧರೆಯ ತಳಮಳ, ಹಸಿರಿನ ಕಳವಳ
ತೀರದ ದಾಹದ ಬಯಕೆಗೆ, ಮಾತನಾಡು .

ನೆನಪಿನ ಹನಿಯಲಿ ನನ್ನನು ನೆನಸು ನೀ
ಕನಸಿನ ಗೂಡಲಿ ನಡುಗಿಸು ನನ್ನನು
ಸೋಲುವೇ ನಿನ್ನಯ ಸ್ಪರ್ಶದ ಸುಖುಕೆ ನಾ
ಮರೆತು ನಾ ನೆನೆಯುತ ಇರುವೆನು ಅನುದಿನಾ

ಗಾಳಿಯ ಕೆಣಕಿಸಿ ನಗುತ ನೀ ಬಂದಿಹೆ
ಮೊಡವ ಕರಗಿಸಿ ನಲಿಯುತ ಸುರಿದಿಹೆ
“ಒಲವ ಸುಧೆಯ” ಅರಳಿಸಿ ಕಂಪನು ಸೂಸಿಹೆ
ಸಿಹಿಯ ನೋವನು ನೀಡುತ ಮಳೆಯೇ ನೀ ನಗುತಿಹೆ

ಮಳೆಯೇ ನೀ ಒಮ್ಮೆ ಮಾತಾನಾಡು,
ಮೌನ ಮುರಿದು ಮನದ ಗೀತೆ ನೀನು ಹಾಡು.....

Comments