ಮಳೆಯ ಆಗಮನ!!

ಮಳೆಯ ಆಗಮನ!!

ಬರಹ

ಈಗ ಬೇಸಿಗೆ ಶುರುವಾಗಿ ಎಲ್ಲೆಲ್ಲೂ ಬಿಸಿಲಿನ ಝಳಝಳ.....ನಮ್ಮ ಮನಸು ಆಗಲೆ ಮುಂದೆ ಬರುವ ಮಳೆಗಾಲಕ್ಕೆ ಅತುರದಿಂದ ಕಾದು ನಿಲ್ಲುವುದು ಸಹಜ. ಈ ಆಲೋಚನೆಗಳು ಬಂದಾಗ ನಾನು 'ಹಾಗೆ ಸುಮ್ಮನೆ' ಹೀಗೆ ಗೀಚಿದೆ.Smile

ಮೋಡವು ಮುಗಿಲ ಮುಸುಕುತಿರೆ
ಸೋನೆ ಹನಿಗಳು ಸುರಿಯುತಿರೆ
ಮಳೆಯು ಮೊದಲಾಯ್ತು ನೋಡಾ
ಮಣ್ಣು ಕಂಪ ಸೂಸಿದರೆ
ಒಣಗಿದ ಮೈಮನವು ಹಸಿಯಾಗಿ
ಭಾವ ಹೊಳೆಯಾಗಿ ಹರಿಯಿತು ಈ ಕವನದಾಂಗ!!

-----------