ಮಳೆಯ ಜಾತ್ರೆಯಲ್ಲಿ ತೊಯ್ದ ಮನವು...

ಮಳೆಯ ಜಾತ್ರೆಯಲ್ಲಿ ತೊಯ್ದ ಮನವು...

ಕವನ

  


 


 


 


 


ತೇವ ಮನದಿ ಆನನ ಹೊಸ ಚಾರಣ


ನವ ಭರವಸೆಯ ಅಭಿಸರಣ, ಜೀವನಕ್ಕೊಂದು ಶೃಂಗಾರದ ತೋರಣ


ಹನಿಗಳಿಂದ ತೊಯ್ದ ಎಲೆಯ ಆನಂದ ಭಾಷ್ಪ


ನಾಚಿ ಮಿಂಚುತಿರುವ ಪ್ರೇಮ ಪುಷ್ಪ, ಪ್ರೀತಿಯ ಓಘ ಜ್ಯೇಷ್ಠ


 


ಮಳೆಯಲ್ಲಿ ಮಿಂದಿರುವ ಮಲೆ, ಝರಿಯ ಪ್ರೀತಿಯ ಕರೆಯನೊಪ್ಪಿದ ಇಳೆ


ನಿನ್ನಯ ಕೈಯ ಕೊರಳಿಗೆ ನೇಸರದ ಕಲೆ, ಮೂಡಿರುವ ಮಳೆಯ ಬಳೆ


ತಳ್ಳುವ ಗಾಳಿಯು ನೆನಪಿಸಿದೆ ನೀ ನೂಕಿದ ಉಯ್ಯಾಲೆ ಆಕಾಶದೆಡೆಗೆ


ಜೀವವ ಸೋಕಿ ಹೊತ್ತ ಭಾವಗಳು ಹೊರಟಿವೆ ನಿನ್ನೆಡೆಗೆ


 


ತಣ್ಣಗೆ ಸ್ಪರ್ಶಿಸಿ, ಎದೆಗೂಡಲ್ಲಿ ಬೆಚ್ಚಗೆ ಅವಿತ ಸಹಚಾರಿ


ಹಸಿರು ದಾರಿಯಲ್ಲಿ, ಸಡಗರದ ಮಳೆಯ ಜಾತ್ರೆಯಲ್ಲಿ ನಿನ್ನ ಅರಸುವ ಪಾದಚಾರಿ


ಮನದಲ್ಲಿ ನೀ ನಲಿದಾಡಿದೆ ಹನಿ ಗೆಜ್ಜೆಯ ಸವಿ ಸದ್ದಿಗೆ


ಬಾರದಿರಲಿ ಹಳೆಯು ನಿನ್ನೆಡೆಗೆ, ಸುಖವಿರಲಿ ಸದಾ ನಿನ್ನ ಜೊತೆಗೆ


 


 


 


ಚಿತ್ರ; Source: www.google.com/images

Comments