ಮಳೆಯ ದರ್ಶನ !
ಕವನ
ನಲಿಯುತಲಿದೆ ಮಳೆಯ ನರ್ತನ
ಬೀಸುತಲಿದೆ ದಿಕ್ಕು ಕಾಣದ ಪವನ
ತೇಲುತಲಿದೆ ನಾವೆಸೆದ ಕಸದಾಭರಣ
ನಿನ್ನ ಆರ್ಭಟಕೆ ನಾವೇ ಕಾರಣ
ಹೆಚ್ಚುತಲಿದೆ ಮಳೆಯ ಪ್ರಮಾಣ
ಬಯಸುತಿದೆ ಭೂತಾಯಿ ನವ ಚಿಗುರಿನ ಜನನ
ಕುಗ್ಗುತಲಿದೆ ಹೊಲದಲಿ ಸಸಿಯ ತ್ರಾಣ
ರೈತರಲ್ಲಾಗಿದೆ ಚಿಂತೆಯ ಉಲ್ಬಣ
ನಿಲ್ಲಬೇಕಿದೆ ಮಳೆಯ ದಾರುಣ
ಕಾಣದಾಗುತಿದೆ ಹಾದಿ ಬೀದಿಯ ಆವರಣ
ಬರಡಾಗುತಿದೆ ಜನರ ಜೀವನ
ಬೇಡುತಲಿದೆ ಜನರ ಮನ ನಿನ್ನಯ ನಿಧಾನ
ಸುರಿಯುತಿದೆ ಎಡಬಿಡದೆ ವರುಣ
ಆಗುತಲಿದೆ ಮನುಷ್ಯರಲ್ಲದ ಜೀವಿಗಳ ಮರಣ
ತೋರಿಸಬೇಕಿದೆ ನಿನ್ನಯ ಕರುಣ
ಮುಂದಾದರೂ ಬಿಡುವೆವು ನಮ್ಮಲ್ಲಿಯ ಆಸೆಯ ಪೊಟ್ಟಣ
-ಅರ್ಚನಾ ಪಿ, ಹೊಸ್ಕೇರಿ. ಕುಮಟಾ
ಚಿತ್ರ ಕೃಪೆ: ಇಂಟರ್ನೆಟ್
ಚಿತ್ರ್