ಮಳೆ ಇದ್ದು ನೀ ಜೊತೆ ಇಲ್ಲದಾಗ...
ಕವನ
ಪವನಗಳು ಕವನ ಹಾಡುತ್ತಿದ್ದವು;
ಹಳದಿ ಪರ್ಣಗಳು ಉದುರಿದ್ದವು;
ಕಣಿವೆಯಲ್ಲಿ ಹಸಿರು ಹಸಲೆಗಳು
ನವಚೈತನ್ಯದಿಂದ ಚಿಗುರಿದ್ದವು;
ನೋಟ ಹಾರಿಸಿದ್ದಲ್ಲೆಲ್ಲ ಹೊಗರು
ಥಾಳಥಳ್ಯ ಹೊಳೆಯುತ್ತಿತ್ತು;
ಶ್ಯಾಮಲ ಮೇಘಗಳ ನಾವೆಯು
ಗಗನಾದ್ಯಂತ ಅಂಬುಧಿಯ ಮೇಲೆ
ತೆಲುತ್ತ ತೆಲುತ್ತ ವರ್ಷಿಸುತ್ತಿತ್ತು!
ಲಾವಣ್ಯಯುತ
ಕಾಮೋದ್ರೇಕತೆಗಳು ಎಬ್ಬಿದರೂ
ನೀ ಜೊತೆ ಇಲ್ಲದಿರುವುದರಿಂದ,
ಎಲ್ಲವೂ ಔಚಿತ್ಯವಿಲ್ಲದೆ ಸಪ್ಪೆಯಾಗಿತ್ತು!
ಮೇಘರಾಜ ತಮ್ಮ ಕೃಪೆ ವರ್ಷಿಸಿದರೂ,
ಆ ವರ್ಷವು ಕೇವಲ ಅಶ್ರುಪೂರಿತ
ಕಣ್ಣೀರಿನ ಝರಿಯನು
ಅವಕುಂಠಿಸುತ್ತಿತ್ತು!!
-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು
ಚಿತ್ರ್