ಮಳೆ...
ಕವನ
ಏತಕೆ ಮನುಜ ನೋಡುತ ನಿಂತಿಹೆ
ದೂರದಿ ಗಾಳಿಯು ರಭಸದಿ ಬರುತಿದೆ
ಮಾರ್ದನಿಯೇಳುತ ದಶದಿಕ್ಕುಗಳಲಿ
ಆಹಾ.. ಬಂತೈ ವರುಷದಧಾರೆಯು..
ಘನೀರ್ಭಾವದ ಮೋಡ ಕರಗುತ ಮೆಲ್ಲಗೆ
ಮೇಘರಾಜನು ವಸುಧೆಗೆ ಇಳಿದ
ತೋಯುತ ಮೆಲ್ಲಗೆ ತೊರೆಯೊಳು ಹರಿಯುತ
ಸೇರಿದನು ವಿಶಾಲ ಅಭ್ಧಿಯ..
ಗುಡುಗುಡು ಗುಡುಗುವ ಮಿಂಚಿನ ಮಳೆಗಳು
ತಿದಿಯೊಳಗನ ಶಿಖ ಪ್ರಜ್ವಲಿಸೆ
ಹಗಲಿರುಳೆಂಬ ಭೇದವ ಮರೆತು
ಒಂದಾಗಿವೆ ವಿಶಾಲ ನಭದಲಿ...
ತೊಳೆಯುತ ಕೊಳೆಯನು ದುಷ್ಟ ಪಾಪಗಳ
ಬತ್ತಿದ ನದಿಯು ಮತ್ತೆ ಹರಿಯುತ
ಹೊಸತನದ ನವಗಾಳಿ ಬೀಸುತ
ಆಹಾ.. ಬಂತೈ ವರುಷದಧಾರೆಯು..
ಕಣ್ಣಂಚಲ್ಲಿ ಕುಳಿತು ಮೆಲ್ಲಗೆ
ಹೆಣ್ಣಿನ ದುಃಖವ ಅರ್ಥೈಸಿಕೊಳ್ಳುತ
ಸಾಂತ್ವನದ ಹೊಸ ಬೀಜ ಬಿತ್ತುತ
ದೇಶದ ರೈತನ ಬೆನ್ನೆಲುಬಾಗಿ
ಆಹಾ.. ಬಂತೈ ವರುಷದ ಧಾರೆಯು..
ಬಲೆಯನು ಬೀಸುತ ಬೆಸ್ತನು ಹೊರಟ
ನೇಗಿಲು ರೈತನ ಭುಜದಲಿ ಕುಳಿತು
ದೇವನೇ ಮೆಚ್ಚಿದ ನವಿಲಿನ ಕುಣಿತ
ಹರಸಿದ ಹಸಿರಾಗಲು ಈ ಭುವಿಗೆ..
-ಶಮೀರ್ ನಂದಿಬೆಟ್ಟ
ಚಿತ್ರ್