ಮಹಾಮನೆ!
ಹಸಿರ ತಪ್ಪಲು, ಅಲ್ಲಿ ಜುಳು ಜುಳು ನಾದವರಿಸೋ ಹೊಳೆಗಳು, ಚಿಲಿಪಿಲಿ ಹಕ್ಕಿಗಾಳ ಗಾನ, ಹೂಗಳ ಘಮಗಳ ಮಧ್ಯೆ ಅಚ್ಚರಿ ಮೂಡಿಸುವ ವಿಚಿತ್ರವೆನಿಸೋ ವೃತ್ತಾಕಾರದ ಕಟ್ಟಡಗಳು ಕಾಣಿಸ್ತವೆ. ಇಂಥ ಕಟ್ಟಡಗಳನ್ನು ಅಮೆರಿಕ ಉಪಗ್ರಹಗಳು 1960-70ರ ದಶಕದಲ್ಲಿ ಪತ್ತೆ ಹಚ್ಚಿದ್ವು. ಅಮೆರಿಕಾದ ಸೇನಾ ನಿಪುಣರು ಉಪಗ್ರಹಗಳು ನೀಡಿದ ಚಿತ್ರಗಳನ್ನು ಪರೀಕ್ಷಿಸಿದ ನಂತ್ರ ಆ ಕಟ್ಟಡಗಳೆಡೆಗಿನ ಆರ್ಕಷಣೆ ಹೆಚ್ಚಾಯ್ತು. ಅತ್ಯುನ್ನತ ಉಪಕರಣಗಳನ್ನು ಬಳಸಿ ಶೋಧನೆ ಶುರುಮಾಡಿದ್ರು. ಯುಎಸ್ ಗುಪ್ತಚರ ಸಂಸ್ಥೆಯೂ ಈ ಕಟ್ಟಡಗಳ ಶೋಧದತ್ತ ಸಜ್ಜಾದ್ವು. ವಿಶ್ವದ ಹಿರಿಯಣ್ಣನೇ ತಲೆ ಕೆಡ್ಸಿಕೊಳ್ಳುವಂತೆ ಮಾಡಿದ್ದ ಕಟ್ಟಗಳು ಇರೋದು ಚೀನಾದ ಫ್ಯೂಜಿನ್ ಪ್ರಾಂತ್ಯದಲ್ಲಿ.
ಚೀನಾದ ವಾಸ್ತುಶಿಲ್ಪವನ್ನು ಪ್ರತಿನಿಧಿಸುವುದು ಚೀನಾದ ಈ ವಿಶಿಷ್ಟ ಕಟ್ಟಡಗಳು, ಬೀಜಿಂಗ್ನಲ್ಲಿರೋ ಟೆಂಪಲ್ ಆಫ್ ಹೆವೆನ್. ಲಾಸ್ ಎಂಜಲ್ಸ್ನಲ್ಲಿ 1995ರಲ್ಲಿ ನಡೆದ ಅಂತರಾಷ್ಟ್ರೀಯ ವಾಸ್ತುಶಿಲ್ಪ ಪ್ರದರ್ಶನದಲ್ಲಿ ಈ ಎರಡೂ ಮಾದರಿಗಳನ್ನು ಇರಿಸಲಾಯ್ತು. ಆದ್ರೆ ವಿದ್ವಾಂಸರು ಮತ್ತು ತಜ್ಞರು ಈ ವಿಶಿಷ್ಟ ಕಟ್ಟಡಗಳನ್ನು ಪ್ರಾಚೀನ ವಾಸ್ತು ಶಿಲ್ಪದ ಮುತ್ತುಗಳೆಂದು ವ್ಯಾಖ್ಯಾನಿಸಿದ್ರು. ಇವುಗಳನ್ನು ಆಗಾಧ ಆಸಕ್ತಿಯಿಂದ ಕಟ್ಟಿರೋ ಕಟ್ಟಡಗಳಂದ್ರು. ನೋಡೋಕೆ ಯುಎಫ್ಒ, ಅಣಬೆಗಳಂತೆ ಕಾಣೋ ಈ ಕಟ್ಟಡಗಳನ್ನ ಟುಲಾವ್ ಅಂತಾರೆ. ಹಾಗಾದ್ರೆ ಟುಲಾವ್ಗಳೊಳಗೆ ಜನ ಹೇಗೆ ಜೀವನ ಮಾಡ್ತಾರೆ. ಇಂತದ್ದೊಂದು ಕುತೂಹಲ ನಿಮ್ಮಲ್ಲಿ ಮನೆ ಮಾಡಿರ್ಬಹುದು.
ಚೀನಾದ ಫ್ಯೂಜಿನ್ ಪ್ರಾಂತ್ಯದ ಯಾಂಗ್ಡಿಂಗ್ ಪ್ರದೇಶವೊಂದ್ರಲ್ಲೆ ಸುಮಾರು 20 ಸಾವಿರ ಟುಲಾವ್ಗಳಿವೆ. ಕೆಲವು ವೃತ್ತಾಕಾರವಾಗಿ, ಇನ್ ಕೆಲವು ಚೌಕಾಕಾರವಾಗಿ, ಮತ್ತೆ ಕೆಲವು ಅಂಡಾಕಾರವಾಗಿ ವಿವಿಧ ಗಾತ್ರಗಳಲ್ಲಿ ಕಾಣುತ್ತವೆ. ಆದ್ರೆ ಟುಲಾವ್ ಒಳಗೆ ವೃತ್ತಾಕಾರದ ವ್ಯವಸ್ಥೆ ಒಂದು ಸಾಮಾನ್ಯ ಗುಣಲಕ್ಷಣವಾಗಿದೆ. ಅದರ ಹೊಟ್ಟೆಯೊಳಗೆ ನೂರಾರು ಕುಟುಂಬಗಳು ಬದುಕುತ್ತಿವೆ. ಟುಲಾವ್ಗಳು ಸಮಾನ್ಯವಾಗಿ ತಪ್ಪಲುಗಳಲ್ಲಿ ನಿಮರ್ಿತವಾಗುತ್ತಿದ್ದವು. ಸುತ್ತಲ ಸ್ವಚ್ಛಂದ ನಿಸರ್ಗದ ಮಧ್ಯೆ ಟುಲಾವ್ಗಳು ವಿಶಿಷ್ಟವಾಗಿ ಕಂಗೊಳಿಸುತ್ತವೆ.
ಹಾಗಾದ್ರೆ ಈ ಟುಲಾವ್ಗಳನ್ನ ಕಟ್ಟಿದ್ಯಾರು? ಅನ್ನೋ ಪ್ರಶ್ನೆಗೆ ಉತ್ತರ ಸಿಗೋದು ಇತಿಹಾಸದಲ್ಲಿ. ಟುಲಾವ್ಗಳ ನಿಮಾತೃಗಳು ಹಕ್ಕಾ ಜನ್ರು. ಈ ಹಕ್ಕಾ ಜನ್ರು ಮಧ್ಯ ಚೀನಾದಿಂದ ಫ್ಯೂಜಿನ್ಗೆ ಬಂದು ನೆಲೆಸಿದವ್ರು. ಇವ್ರ ಕಥೆ ಶುರುವಾಗೋದೇ ಕ್ರಿ.ಪೂ. 291ರಿಂದ. ಆ ಹೊತ್ತಿಗೆ ಚೀನಾದ ಗದ್ದುಗೆಯಲ್ಲಿದ್ದದ್ದು ಜಿನ್ ಸಾಮ್ರಾಜ್ಯ. ಈ ವೇಳೆ ಉಂಟಾದ ಯುದ್ಧ ಮತ್ತು ನೈಸಗರ್ಿಕ ವಿಕೋಪಗಳಿಂದ ಕಂಗೆಟ್ಟ ಜನ, ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಲು ಮುಂದಾದ್ರು. ಚೀನಾ ಇತಿಹಾಸದಲ್ಲಿ ಇಂಥ ಅದೆಷ್ಟೋ ಜನಾಂಗಗಳ ವಲಸೆಗಳ ಕಥನಗಳಿವೆ. ವಲಸೆ ಹೊರಟ ಹಕ್ಕಾ ಜನ್ರು ತಪ್ಪಲಿನ ಪ್ರದೇಶಗಳಾದ ಫ್ಯೂಜಿನ್, ಯಾಂಗ್ಡಿಂಗ್, ಝಾಂಗ್ಸಿ ಪ್ರಾಂತ್ಯಗಳನ್ನು ಆರಿಸಿಕೊಂಡ್ರು. ಅಲ್ಲಿಯೇ ಬದುಕು ಕಟ್ಟಿಕೊಳ್ಳಲು ನಿಧರ್ಾರ ಮಾಡಿದ್ರು. ಆಗ್ಲೇ ಈ ಜನ ಟುಲಾವ್ಗಳ ನಿಮರ್ಾಣದತ್ತ ಮನಸ್ಸು ಹರಿಸಿದ್ದು. ಅವ್ರು ತಪ್ಪಲಿನ ನೆಲಕ್ಕೆ ಕಾಲಿಟ್ಟಾಗ, ಆ ನೆಲೆ ವಿಷಜಂತುಗಳ, ಕ್ರೂರ ಕೀಟಗಳ, ಮೃಗಗಳ ನೆಲೆಯಾಗಿತ್ತು. ಇವ್ಗಳೆಲ್ಲವುಗಳ ಜೊತೆಗೆ ಬದುಕು ಹಂಚಿಕೊಳ್ಳೋಕೆ ಸೂಕ್ತವಾದ ಆಶ್ರಯವನ್ನು ರೂಪಿಸಿದ್ದ್ರು. ಹಾಗೇ ರೂಪಿಸಿದ ಕಟ್ಟಡಗಳೇ ಈ ಟುಲಾವ್ಗಳು. ಈ ಟುಲಾವ್ಗಳು ಸಾಮಾನ್ಯ ಅನಿಸಿದ್ರೂ ಅವುಗಳ ಒಡಲಲ್ಲಿ ನೂರಾರು ಅಚ್ಚರಿಯ ಸಂಗತಿಗಳಿವೆ.
ಟುಲಾವ್ಗಳು ಕೋಟೆಗಳ ಥರ ಸುಭದ್ರ, ನೋಡೋಕೆ ಸಾಮಾನ್ಯ ಅನಿಸಿದ್ರೂ ಅದರ ಒಡಲು ರಹಸ್ಯಗಳ ಕಡಲು. ವೃತ್ತಾಕಾರದ ಆಕಾರವನ್ನೊಳಗೊಂಡ ಟುಲಾವ್ಗೇ ಒಂದೇ ಬಾಗಿಲು. ಈ ಬಾಗಿಲನ್ನ ಬಲಿಷ್ಠವಾದ, ಉತ್ಕೃಷ್ಠವಾದ ಮರದ ದಿಮ್ಮಿಗಳಿಂದ ಮಾಡಿರ್ತಾರೆ. ಮರದ ಬಾಗಿಲಿಗೆ ಕಬ್ಬಿಣದ ಪಟ್ಟಿಯನ್ನು ಹೊದ್ದಿಸಲಾಗಿರುತ್ತದೆ. ಈ ಬಾಗಿಲುಗಳೇ ಯುದ್ಧ ಮತ್ತು ದಾಳಿಗಳ ವೇಳೆ ಪ್ರಮುಖ ಪಾತ್ರ ವಹಿಸುವಂಥವು. ಶತ್ರುಗಳು ದಾಳಿ ಮಾಡೋಕೆ ಮುಂದಾದ್ರೆ ಬಾಗಿಲು ಬಿಗಿಯಾಗಿ ಮುಚ್ಚಿದ್ರೆ ಮುಗೀತು. ಹೊರಗೆ ಶತ್ರು ಎಗರಾಡಿದ್ರೂ ಬಾಗಿಲು ತೆಗೆಯೋಕಾಗಲ್ಲ. ಅಂತದ್ದೊಂದು ವಿಶಿಷ್ಠ ರಚನೆ ಬಾಗಿಲಿಗಿತ್ತು. ಸಣ್ಣದಾದ ಎರಡು ಚಿಲಕಗಳ ಜೊತೆ ಹಿರಿದಾದ ಮರದ ಪಟ್ಟಿಯೊಂದನ್ನ ಅಡ್ಡವಾಗಿ ಇಟ್ಟರೇ ಸಾಕು ನೂರಾರು ಸೈನಿಕ್ರು ಬಂದ್ರೂ ಏನೂ ಕೆಮ್ಮಂಗಿಲ್ಲ.
ಬಾಗಿಲ ನೆತ್ತಿಯ ಮೇಲೆ ಬದಿರಿನ ಮೂರು ಬೊಂಬುಗಳನ್ನಿಡುತ್ತಿದ್ದರು. ದಾಳಿಯ ವೇಳೆ ಶತ್ರುಗಳು ಬಾಗಿಲಿಗೆ ಬೆಂಕಿ ಹಚ್ಚಿದ್ರೆ ಅದನ್ನ ತಡೆಯೋಕೆ ಇಂಥ ಬೊಂಬುಗಳನ್ನು ಇಡುತ್ತಿದ್ರು. ಬಿದಿರ ಬೊಂಬುಗಳ ಒಳಕ್ಕೆ ನೀರು ಸುರಿಯುವುದ್ರಿಂದ ಬೆಂಕಿ ನಂದಿಸಬಹುದಾಗಿತ್ತು. ಇಂಥ ಬಿದಿರ ಬೊಂಬಿಗಳಿಗಿಂತ ಸ್ವಲ್ಪ ಮೇಲೆ ಒಂದು ಕಿಟಕಿಯೊಂದನ್ನ ಇರಿಸುತ್ತಿದ್ರು. ಈ ಕಿಟಕಿಯನ್ನ ಶತ್ರುಗಳ ಚಲನ ವಲನ ನೋಡಲು, ಅವ್ ಮೇಲೆ ಪ್ರತಿ ದಾಳಿ ಮಾಡಲು ಉಪಯೋಗಿಸುತ್ತಿದ್ದರು.
ಟುಲಾವ್ಗಳಂದ್ರೆ ಒಂದು ಸುಖೀ ಸಂಸಾರಗಳ ಸಾಗರ. ಇವುಗಳೊಳಗಿನ ಕೊಠಡಿಗಳನ್ನು ತುಂಬಾ ಜಾಗರೂಕವಾಗಿ ನಿಮರ್ಾಣ ಮಾಡಲಾಗಿದೆ. ಈ ಕಟ್ಟಡ ಸಂಕೀರ್ಣಗಳ ಎರಡು ಅಂತಸ್ತುಗಳಿಂದ ಕೂಡಿದೆ. ಗ್ರೌಂಡ್ ಫ್ಲೋರ್ನಲ್ಲಿ ಅಡುಗೆ ಮನೆಗಳಿರುತ್ತವೆ. ಅದ್ರ ಮೇಲ್ಮಹಡಿಯನ್ನ ದವಸ-ಧಾನ್ಯಗಳ ಸಂರಕ್ಷಣೆಗೆ ಮುಡಿಪು. ಇನ್ನೂ ಮೇಲಿನ ಅಂತಸ್ತು ವಾಸಕ್ಕೆ ಬಳಸುತ್ತಾರೆ. ಹಾಗಾಗಿಯೇ ವಾಸಸ್ಥಳಕ್ಕಿಂತ ಕೆಳಗಿನ ಎರಡೂ ಭಾಗಗಳಿಗೆ ಕಿಟಕಿಗಳಿಲ್ಲ. ಅದಕ್ಕಿಂತ ಮೇಲಿನ ಅಂದ್ರೆ ವಾಸದ ಭಾಗದಲ್ಲಿಯೂ ಕಡಿಮೆ ಪ್ರಮಾಣದಲ್ಲಿ ಕಿಟಕಿಗಳಿವೆ. ಅವುಗಳೂ ಸಹ ಯುದ್ಧದ ದೃಷ್ಟಿಯಿಂದ ರೂಪಿತವಾಗಿವೆ.
ಟುಲಾವ್ಗಳ ಮುಂಭಾಗದ ಪ್ರಾಂಗಣದಲ್ಲಿ ಕಣಜಗಳಿವೆ, ಭಾವಿಗಳಿವೆ, ಸ್ನಾನದ ಕೋಣೆಗಳಿವೆ, ಗಿರಣಿ ಯಂತ್ರಗಳು ಇರ್ತವೆ. ಹೊರಗಿನಿಂದ ನೋಡಿದ್ರೆ ಚಕ್ರವ್ಯೂಹದಂತೆ ಕಂಡ್ರೂ ಟುಲಾವ್ ಒಡಲು ನೂರಾರು ಸಂಸಾರ ಒಂದು ಬೃಹತ್ ಗೂಡಾಗಿರುತ್ತದೆ. ರಕ್ಷಣಾತ್ಮಕ ರಚನೆಯಿಂದಾಗಿ ಒಳಗಿನ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು. ಇಂಥ ಸುಸಜ್ಜಿತ ಟುಲಾವ್ಗಳಲ್ಲೇ ಹಕ್ಕಾ ಜನಾಂಗಗಳು ಬದುಕುತ್ತಿದ್ದಾರೆ. ಅದೆಷ್ಟೋ ಪೀಳಿಗೆಗಳು ಉರುಳಿ ಹೋಗಿದ್ದರೂ ಟುಲಾವ್ಗಳಲ್ಲಿನ ಪೂರ್ವಜರ ಸೊಗಡು, ಸಂಸ್ಕೃತಿ, ವಾತಾವರಣಗಳಿಗೆ ಮುಕ್ಕಾಗಿಲ್ಲ.
ಒಂದು ಟುಲಾವ್ಗಳೊಳಗೆ ಅದೆಷ್ಟೋ ಸಂಸಾರಗಳು ಕವಲೊಡೆದು ಬದುಕುತ್ತಿರುತ್ತವೆ. ಅದ್ರಲ್ಲೂ ಈ ಚೆಂಗ್ಗ್ಲೌ ಟುಲಾವ್ಗಳ ರಾಜ. ಚೆಂಗ್ಗ್ಲೌನೊಳಗಿನ ಒಂದೇ ಮನೆಯಲ್ಲಿರೋ ಜನ್ರ ಸಂಖ್ಯೆ ಭತರ್ಿ 800. ಈ ರೀತಿಯ ಜೀವನ ಶೈಲಿಯೇ ಹಕ್ಕಾಗಳತ್ತ ಆಕರ್ಷಣೆಯನ್ನು ಹೆಚ್ಚಿಸುವಂಥದ್ದು.
ಇಷ್ಟೆಲ್ಲಾ ವಿಶಿಷ್ಟತೆಗಳನ್ನೊಳಗೊಂಡ ಟುಲಾವ್ಗಳ ರಚನೆ ಕೂಡ ಒಂದು ಅಚ್ಚರಿ. ಇಂಥ ಅಬೇಧ್ಯ ಟುಲಾವ್ ರೂಪುಗೊಂಡಿರೋದು ಬರೀ ಮಣ್ಣಿನಿಂದ. ಮಾನವನ ನಾಗರೀಕತೆಯ ಪ್ರಾರಂಭದ ಅದೆಷ್ಟೋ ವಾಸ್ತುಶಿಲ್ಪಗಳು ರೂಪುಗೊಂಡಿರೋದೆ ನೈಸಗರ್ಿಕ ಕಟ್ಟಡ ನಿಮರ್ಾಣ ಸಾಮಗ್ರಿಗಳಿಂದ. ಮಣ್ಣಿನಿಂದ ಟಬ್ಯಾವನ್ನು ಮಾಡಿಕೊಳ್ಳುತ್ತಿದ್ರು. ಈ ಟಬ್ಯಾ ನಮ್ಮಲ್ಲಿನ ಹಸಿ ಇಟ್ಟಿಗೆಯನ್ನೇ ಹೋಲುತ್ತೆ. ಟಬ್ಯಾ ಮುಖ್ಯವಾಗಿ ಜಲ್ಲಿಗೊರಸು ಮಣ್ಣು, ಸುಣ್ಣ, ಕೆಂಪು ಕಳಿಮಣ್ಣನ್ನ ಒಳಗೊಂಡಿರುತ್ತಿತ್ತು. ಬಿಗಿಯಾಗಿರ್ಲಿ ಅಂತ ಮೊಟ್ಟೆಯ ಬಿಳಿ ಲೋಳೆ, ಸಕ್ಕರೆ ಮತ್ತು ಅನ್ನದ ಗಂಜಿಯನ್ನಬಳಸ್ತಿದ್ರು. ಇದ್ರಿಂದಾಗಿಯೇ ಟಬ್ಯಾ ಬಾಳಿಕೆ ಇಂದಿಗೂ ಸುಭದ್ರವಾಗಿದೆ. ಗೋಡೆ ಬಿಂಕವಾಗಿರ್ಲಿ ಅನ್ನೋ ಕಾರಣಕ್ಕೆ ಟಬ್ಯಾಗಳ ಜೊತೆ ಬಿದಿರು ಬೊಂಬುಗಳನ್ನು ಬಳಸುತ್ತಿದ್ರು. ಹಕ್ಕಾ ಜನ್ರು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ನಿಮರ್ಿಸಿರೋ ಟುಲಾವ್ ಗೋಡೆಗಳು ಇಂದಿನ ಕಾಂಕ್ರಿಟ್ ಗೋಡೆಗಳಿಗಿಂತ ಬಲಿಷ್ಠವಾಗಿವೆ.
1934ರಲ್ಲಿ ಉಂಟಾದ ರೈತ ದಂಗೆಯ ವೇಳೆ ಯಾಂಗ್ಡಿಂಗ್ನ ಈ ಟುಲಾವ್ ಮೇಲೆ ಚೀನಾ ಸೇನೆ ದಾಳಿ ಮಾಡಿತ್ತು. ಟುಲಾವ್ನೊಳಗಿದ್ದ ರೈತ್ರು, ಹಲವಾರು ಸಂಸಾರಗಳು ನೆಮ್ಮದಿಯಿಂದ ಇದ್ವು. ಸೇನಾ ಮಾತ್ರ ಸತತ ಮೂರು ದಿನ ಕಾರ್ಯಚರಣೆ ಮಾಡ್ತು. 19 ಸಲ ಗುಂಡು ಹಾರಿಸ್ತು.ಸೈನಿಕ್ರು ಏನೆಲ್ಲಾ ಎಗರಾಡಿದ್ರೂ ಗೋಡೆಯ ಒಂದು ಭಾಗದಲ್ಲಿ ಸಣ್ಣ ಮುಕ್ಕು ಮಾಡಿದ್ದಾರೆ. ಹಕ್ಕಾ ಜನ್ರು ನಿಮರ್ಿಸಿದ ಟುಲಾವ್ ಗೋಡೆಗಳು ಇಂದಿಗೂ ಅಷ್ಟೇ ಸದೃಢವಾಗಿವೆ.
ಇಂಥ ಕಟ್ಟಡದ ಅಡಿಪಾಯವೂ ತುಂಬಾ ಬಲಿಷ್ಠ. ಅಡಿಪಾಯದ ಆಗಲ ಶುರುವಾಗೋದು 3 ಮೀಟರ್ನಿಂದ. ತಳದ ಗೋಡೆ ಗಾತ್ರ 1.5 ಮೀಟರ್ ಇರುತ್ತೆ, ಗೋಡೆಯ ತುದಿಯಲ್ಲಿ ಮುಗಿಯೋದು 0.9 ಮೀಟರ್ ದಪ್ಪದಲ್ಲಿ. ಫ್ಯೂಜಿನ್ ಪ್ರಾಂತ್ಯ ಮೊದ್ಲೇ ಉಪಉಷ್ಣವಲಯ ಮಳೆ ಅಷ್ಟಕ್ಕಷ್ಟೆ. ಟುಲಾವ್ಗಳ ಮೇಲೆ ಹೊದಿಸಿದ ಹಂಚುಗಳಿಂದಾಗಿ ಒಳಗಿನ ಪ್ರದೇಶ ತಂಪಾಗಿರುತ್ತಿತ್ತು. ಗೋಡೆಗಳ ನಿಮರ್ಾಣ ತುಂಬಾ ವಿಶಿಷ್ಟವಾಗಿದೆ. ಬೇಸಿಗೆಯಲ್ಲಿ ತಂಪನ್ನ, ಚಳಿಗಾಲದಲ್ಲಿ ಬೆಚ್ಚನೆ ವಾತಾವರಣವನ್ನು ಉಂಟು ಮಾಡುತ್ತೆ. ಟುಲಾವ್ ಮಧ್ಯದ ತೆರೆದ ಅಂಗಳದಿಂದಾಗಿ ಮನೆಯೊಳಗಿನ ಅಡುಗೆ ಘಮ, ಹೊರಗಿನ ಶುಭ್ರ ಗಾಳಿಯಿಂದಾಗಿ ಆರಾಮದಾಯಕ ಪರಿಸರ ಸೃಷ್ಠಿಯಾಗುತ್ತೆ. ಟುಲಾವ್ನ ವೃತ್ತಾಕಾರ ಶೈಲಿಯಿಂದ ಅದೆಷ್ಟೋ ಅನುಕೂಲಕರ ಸಂಗತಿಗಳಿವೆ.
ಟುಲಾವ್ಗಳ ಆಕಾರವನ್ನ ನೋಡಿದ್ರೆ ಸುರುಳಿಯಾಕಾರದ ವೃತ್ತಗಳು ಒಂದಾದ ಮೇಲೊಂದರಂತೆ ರೂಪುಗೊಂಡಿವೆ. ಪೂರ್ವಜರು ನಾಗರೀಕತೆಯ ಆರಂಭದಲ್ಲಿ ಗುಹೆಗಳಲ್ಲಿ ಮನೆಗಳು ವೃತ್ತಾಕಾರದಲ್ಲಿರುತ್ತಿದ್ವು. ಮೆಸಪಟೋಮಿಯಾ ನಾಗರೀಕತೆಯ ವಾಸ್ತುಶಿಲ್ಪದಲ್ಲೂ ವೃತ್ತಾಕಾರದ ಕಟ್ಟಡಗಳ ನಿಮರ್ಾಣವಾಗಿರೋದನ್ನ ಕಾಣಬಹುದು. ಇದೇ ಮಾದರಿಯ ವೃತ್ತಾಕಾರದ ಶೈಲಿಯನ್ನ ರೋಮ್ ನಾಗರೀಕತೆಯ ಕಾಲದ ಕಟ್ಟಡ ನಿಮರ್ಾಣದಲ್ಲೂ ಕಾಣಬಹುದು. ವೃತ್ತಾಕಾರ ಶೈಲಿಯ ಕಟ್ಟಡಗಳು ಮುಖ್ಯವಾಗಿ ಉಳಿಸಿಕೊಂಡು ಬಂದಿರೋದು ತಾಳಿಕೆ, ಬಾಳಿಕೆಯನ್ನ. ಮನೋಶಾಸ್ತ್ರಜ್ಞರ ಪ್ರಕಾರ ದಂಡು ಮೇಜುಗಳ ಮೇಲೆ ವ್ಯವಹಾರಗಳು, ಒಪಂದಗಳು ಸುಗಮವಾಗಿ ನಡೆಯುತ್ತವೆಂದು ನಂಬಿದ್ದಾರೆ. ಅಲ್ಲದೇ ಅನುಕೂಲಕರ ಮತ್ತು ಸಾಮರಸ್ಯದ ವಾತಾವರಣ ಉಂಟಾಗುತ್ತೆ ಅಂತ್ತಾರೆ.
ವೃತ್ತ ಭೂಮಿ ಮತ್ತು ಸ್ವರ್ಗವನ್ನ ಪ್ರತಿನಿಧಿಸುತ್ತದೆಂಬ ಪ್ರಾಚೀನ ಚೀನಿಗರ ಭಾವನೆ. ಸ್ವರ್ಗವನ್ನ ಪೂಜ್ಯ ಭಾವದಿಂದ ಕಾಣ್ತಾರೆ. ಹಾಗಾಗಿಯೇ ಟೆಂಪಲ್ ಆಫ್ ಹೆವೆನ್ ದೇಗುಲ ಕಟ್ಟಿದ್ದಾರೆ. ಅದೂ ವೃತ್ತಾಕಾರ ಶೈಲಿಯನ್ನೇ ಹೋಲುತ್ತೆ. ವೃತ್ತಾಕಾರ ಚೀನಿಯರಿಗೆ ಪೂಜ್ಯನೀಯ. ಟುಲಾವ್ಗಳು ವೃತ್ತಾಕಾರದ ನಿಮರ್ಾಣ ಕೂಡ ಪ್ರಾಯೋಗಿಕವಾಗಿ ಲಾಭದಾಯಕ.
ವೃತ್ತಾಕಾರದ ಟುಲಾವ್ನೊಳಗಿಂದ ಒಂದು ಕಡೆ ಗಾಳಿ ಹೊರ ಹಾಯ್ದರೆ, ಮತ್ತೊಂದು ಕಡೆಯಿಂದ ಪರಿಶುದ್ಧ ಗಾಳಿ ಒಳ ನುಗ್ಗುತ್ತದೆ. ಟುಲಾವ್ನೊಳಗೆ ಹರಿಯುವ ಬೆಳಕು ಪ್ರತಿ ಮೂಲೆ ಮೂಲೆಯನ್ನ ತಲುಪುತ್ತೆ. ವೃತ್ತಾಕಾರವಾಗಿ ಭೂಮಿಯನ್ನ ತಬ್ಬಿರೋ ಕಟ್ಟಡಗಳು ಭೂಕಂಪನವಾದಾಗ್ಲೂ ಅನುಕೂಲಕರ. 1918ರಲ್ಲಿ ಉಂಟಾದ ಪ್ರಬಲ ಭೂಕಂಪಗಳ ಸಂದರ್ಭ ಈ ವಾನ್ಚಿ ಟುಲಾವ್ ಮಾತ್ರ ಬಿರುಕು ಬಿಡ್ತೇ ವಿನಃ ಬಿದ್ದಿಲ್ಲ.
ವೃತ್ತಾಕಾರದ ಟುಲಾವ್ನಲ್ಲಿ ಅದೆಷ್ಟೋ ಕೋಣೆಗಳು, ಸಂಸಾರಗಳು ಜೀವಿಸುತ್ತಿವೆ. ಪ್ರತಿಯೊಂದು ಕೋಣೆ ಹಾಗೂ ಸಂಸಾರ ಟುಲಾವ್ನ ಒಂದು ಭಾಗ. ಇಲ್ಲಿ ಪ್ರತಿಯೊಬ್ಬರ ಸಾಮರಸ್ಯದಿಂದ್ಲೇ ಬದುಕಬೇಕು. ಅಂತ ಸಾಮರಸ್ಯವೇ ಇಂದಿಗೂ ಅಲ್ಲಿ ನೂರಾರು ಕುಟುಂಬಗಳು ಒಟ್ಟಾಗಿ ಬದುಕುತ್ತಿರುವುದಕ್ಕೆ ಕಾರಣ.
ಟುಲಾವ್ ಬೆಂಕಿ ಮತ್ತು ಮಳೆಯಿಂದ ತಪ್ಪಿಸಿಕೊಳ್ಳಲು ಯೋಗ್ಯವಾಗಿ ಕಟ್ಟಲಾಗಿದೆ. ಇಡೀ ಟುಲಾವ್ನ್ನು ಚೀನಾ ಪುರಾಣದ ಪ್ರಕಾರ 8 ಭಾಗಗಳಾಗಿ ನಿಮರ್ಿಸಲಾಗಿದೆ. ಹೀಗೆ ವಿಭಾಗಿಸಿರೋದ್ರಿಂದ ಬೆಂಕಿ ಇನ್ನೊಂದೆಡೆಗೆ ಹಾಯದಂತೆ ತಡೆಯಬುಹುದಾಗಿದೆ. ಈ ಕಟ್ಟಡವನ್ನು ಎಂಟು ಭಾಗಗಳಾಗಿ ಕಟ್ಟಲಾಗಿದೆ. ಗೋಡೆಯಲ್ಲೂ 8 ಇಟ್ಟಿಗೆಗಳನ್ನು ಕಾಣಬಹುದು. ಈ ಇಟ್ಟಿಗೆಗಳು ಟುಲಾವ್ನ್ನೂ ಎಂಟು ಭಾಗಗಳಾಗಿ ವಿಭಾಗಿಸುತ್ತದೆ. ಈ ಇಟ್ಟಿಗೆಯ ಗೋಡೆಗಳು 8 ಅಗ್ನಿಗೋಡೆಗಳು. ಈ ಗೋಡೆಗಳೇ ಅಗ್ನಿ ದುರಂತವಾದ್ರೇ ಉಳಿದ ಭಾಗಗಳತ್ತ ಬೆಂಕಿ ಹಾಯದಂತೆ ರಕ್ಷಿಸಬಹುದು.
ಮಳೆಯಿಂದಾಗಿ ಪ್ರವಾಹ ಉಂಟಾದ್ರೆ ತಡೆಯೋಕೆ ಕಲ್ಲುಗಳಿಂದ ನಿಮರ್ಾಣವಾದ ಭದ್ರ ಅಡಿಪಾಯವಿದೆ. ಯಾವಾಗಲಾದ್ರೂ ಮಳೆ ಜಾಸ್ತಿಯಾದ್ರೆ ಟುಲಾವ್ ರಕ್ಷಣೆಗೆ ಸೂರು 3 ಮೀಟರ್ನಷ್ಟು ಉದ್ದಕ್ಕೆ ಹೊರಚಾಚಿಕೊಂಡಿದೆ. ಹೀಗೆ ವಿಸ್ತಾರಗೊಂಡಿರೋ ಚಾವಣಿ ಮಳೆಯಿಂದ ಟುಲಾವ್ನ ಗೋಡೆಗಳನ್ನ ಕಾಪಾಡುತ್ತೆ.
ಟುಲಾವ್ಗಳೇ ಹಬ್ಬಗಳಾದ್ರೆ ಸಂಗೀತ ಕಛೇರಿಗಳನ್ನ ಇಟ್ಟುಕೊಳ್ತಾರೆ. ವೃತ್ತಾಕಾರದ ಟುಲಾವ್ಗಳೊಳಗೆ ಸಂಗೀತ ಪ್ರತಿಧ್ವನಿಸುತ್ತದೆ. ಸಂಗೀತ ಟುಲಾವ್ನ ಮೂಲೆ ಮೂಲೆಗಳನ್ನ ಸ್ಪಷ್ಠವಾಗಿ ಮುಟ್ಟುತ್ತದೆ. ಇವ್ರಿಗೆ ಮೈಕ್ನ ಅಗತ್ಯವೇ ಇಲ್ಲ.
ಟುಲಾವ್ಗಳ ನೆತ್ತಿಯಲ್ಲಿ ಹೊರ ಚಾಚಿಕೊಂಡಿರೋ ಸೂರು, ಟುಲಾವ್ಗಳಿಗೊಂದು ಬೇರೆಯದ್ದೇ ಲುಕ್ ಕೊಡ್ತವೆ. ಇವುಗಳಿಂದಾಗಿಯೇ ಟುಲಾವ್ಗಳು ಯುಎಫ್ಒಗಳಂತೆ ಕಾಣೋದು. ಹೊರಗೆ ಚಾಚಿರುವಂತೆ ಒಳಗೂ ಸೂರು ಮೈ ಚಾಚಿದೆ. ಹೀಗೆ ಮೈ ಚಾಚಿರೋ ಸೂರು ಬಿಸಿಲು, ಮಳೆಗೆ ಕೊಡೆಯಂತೆ ಕಾಯುತ್ತೆ. ಅದ್ರಡಿಯಲ್ಲೇ ಉಣ್ತಾರೆ, ಹರಟ್ತಾರೆ, ತಾಯಿ ಮಕ್ಕಳನ್ನ ಮುದ್ದಿಸುತ್ತಾಳೆ. ಮಧ್ಯದಲ್ಲಿರೂ ಖಾಲಿ ಅಂಗಳದಲ್ಲಿ ಮಕ್ಕಳು ಆಡಿ, ಆನಂದಿಸುತ್ತಾರೆ. ಹಕ್ಕಾ ಜನ್ರ ಆಧ್ಯಾತ್ಮಿಕ ಕೇಂದ್ರಗಳೂ ಈ ಟುಲಾವ್ಗಳೇ. ಟುಲಾವ್ಗಳ ಒಳಗೆ ಪ್ರತ್ಯೇಕವಾಗಿ ಬದುಕುವ ಮೂಲಕ ಹಕ್ಕಾ ಜನ್ರು ತಮ್ಮ ಜೀವನ ಶೈಲಿ ಮತ್ತು ಸಂಸ್ಕೃತಿಯನ್ನ ಕಾಪಾಡಿಕೊಂಡು ಬಂದಿದ್ದಾರೆ. ತಮ್ಮ ಪೂರ್ವಜರು ಮಧ್ಯ ಚೀನಾದಿಂದ ಬಂದವ್ರು ಅನ್ನೋ ನಂಬಿಕೆಯಲ್ಲಿದ್ದಾರೆ. ಹಕ್ಕಾ ಜನ ತಮ್ಮತನವನ್ನು ಉಳಿಸಿಕೊಂಡು ಬಂದಿರುವುದರ ಹಿಂದೆ ಇರೋದು ಒಗ್ಗಟ್ಟು, ಬ್ರಾತೃತ್ವ, ದೃಢ ಪ್ರಯತ್ನ, ನಿಷ್ಠೆ, ಸಾಚಾತನ.
ಇವತ್ತು ಟುಲಾವ್ಗಳ ಮಧ್ಯೆ ಸಿಮೆಂಟ್ ಕಾಂಕ್ರೀಟ್ಗಳ ಕಟ್ಟಡಗಳು ತಲೆ ಎತ್ತಿದ್ರೂ ಸಹ ಹಕ್ಕಾ ಜನ ಟುಲಾವ್ಗಳಲ್ಲೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕೆಲವೇ ಕೆಲವು ಹಕ್ಕಾ ಜನ್ರು ಟುಲಾವ್ಗಳನ್ನ ಬಿಟ್ಟಿರಬಹುದು. ಅದ್ಕೆ ಅವ್ರ ಆಥರ್ಿಕಾಂಶಗಳು ಕಾರಣ. ಆದ್ರೆ ಇವತ್ತಿಗೂ ಅವ್ರೂ ಕೂಡ ಟುಲಾವ್ ಜೀವನಶೈಲಿಯನ್ನು ನೆನಪು ಮಾಡಿಕೊಂಡೇ ತೀರುತ್ತಾರೆ. ಅನುಭವಿಸಿ ಕಲಿ, ನೋಡಿ ಕಲಿ,
ಖ್ಯಾತಿ ಸುಲಭವಾಗಿ ಸಿಗುವಂಥದ್ದಲ್ಲ. ಪ್ರಾದೇಶಿಕವಾಗಿ, ಅಂತರಾಷ್ಟ್ರೀಯವಾಗಿಯೂ ಚಿಂತಿಸು ಗಂಭೀರವಾಗಿ ಅದು ಪ್ರಾದೇಶಿಕವಾಗಿರಲಿ, ಅಂತರಾಷ್ಟೀಯವಾಗಿಲಿ ಅನ್ನುವಂತಹ ಅದೆಷ್ಟೋ ಸಾಲುಗಳನ್ನು ಟುಲಾವ್ಗಳ ಗೋಡೆಗಳ ಮೇಲೆ ಬರೆದಿರಲಾಗುತ್ತದೆ. ತಮ್ಮತನವನ್ನು ಮರೆಯದೇ, ಹೊರಗಿನದ್ದನ್ನು ನೋಡಿ ಗೌರವಿಸುವ ಭಾವವನ್ನು ಹೊಂದಿದ್ದಾರೆ ಹಕ್ಕಾ ಜನ.
Comments
ಉ: ಮಹಾಮನೆ!
In reply to ಉ: ಮಹಾಮನೆ! by makara
ಉ: ಮಹಾಮನೆ!