ಮಹಾ ಕುಂಭಮೇಳ
ಐತಿಹ್ಯದ ಪುರಾಣದ ಧರ್ಮದ ಪುಣ್ಯಕಥೆಯು
ಕರ್ಣಾಕರ್ಣಿಕೆಯ ನಂಬಿಕೆಯ ದಂತಕಥೆಯು
ಮಹಾ ಕುಂಭಮೇಳದ ಪುಣ್ಯವನ್ನು ಪಡೆಯಲು
ಮಂಥನ ಕಾಲದ ಅಮರತ್ವದ ಅಮೃತ ಹನಿಗಳು
ಮಹಾ ಕುಂಭಮೇಳ ಇದು ಮಹಾ ಪರ್ವಕಾಲ
ಭವ್ಯ ಭಾರತದ ಪುಣ್ಯಭೂಮಿ ಪುಣ್ಯಕ್ಷೇತ್ರದಲ್ಲಿ
ಗಂಗಾ ಯಮುನಾ ಸರಸ್ವತಿ ಪುಣ್ಯ ನದಿಗಳಲ್ಲಿ
ಮುಳುಗಿ ಏಳುತ್ತಾ ಪುಣ್ಯಸ್ನಾನ ಸಂಗಮದಲ್ಲಿ
ಜನ್ಮಶುದ್ಧಿ ಆತ್ಮಶುದ್ಧಿಗಾಗಿ ಈ ಭೂಲೋಕದಲ್ಲಿ
ಕರುಣಿಸಿದ ದೇವರು ಅವಕಾಶ ಮಾನವನಿಗಿಲ್ಲಿ
ಸಾಧು ಸಂತರು ತಪೋಶ್ರೇಷ್ಠರ ದರ್ಶನ ಭಾಗ್ಯದಲ್ಲಿ
ತೊಳೆಯುತ ಎಲ್ಲ ಪಾಪಗಳ ಜನ್ಮವು ಪಾವನವಿಲ್ಲಿ
ಸಪ್ತ ಶೈವ ಮೂರು ವೈಷ್ಣವ ಧರ್ಮದ ಅಖಾಡಗಳು
ಮೂರು ಉದಾಸೀನ, ಪ್ರತ್ಯೇಕ ತತ್ತ್ವ ಸಿದ್ಧಾಂತಗಳು
ಬಗೆಬಗೆ ಆಚರಣೆಗಳು ಬೇರೆಬೇರೆ ಸಂಪ್ರದಾಯಗಳು
ಅಖಂಡತೆಯ ಧರ್ಮ ರಕ್ಷಣೆಯ ಭಕ್ತಿ ನಿಲುವುಗಳು
ಮಹತ್ವದ ಮಹೋನ್ನತ ಸಂಸ್ಕೃತಿ ಆಚರಣೆಯಿದು
ದೈವತ್ವದ ಆಧ್ಯಾತ್ಮಿಕ ಪುರಾತನ ಸಂಪ್ರದಾಯವಿದು
ಪುನೀತರಾಗುವ ನಾನೆಂಬುವ ಅಹಂ ತೊರೆಯುತ
ಧನ್ಯರಾಗುವ ಕ್ಷೇತ್ರೀಯ ಭಗವಂತನನ್ನು ಸ್ಮರಿಸುತ
-ಕಾ ವಿ ರಮೇಶ್ ಕುಮಾರ್, ಬೆಂಗಳೂರು
