ಮಹಾ ಶಿವರಾತ್ರಿ

ಮಹಾ ಶಿವರಾತ್ರಿ

ಕವನ

ನಮ್ಮ ನಿಮ್ಮೆಲ್ಲರ

      ವಿವಾಹ 

ಮಹೋತ್ಸವಗಳು

   ಹಳತಾಗುತಾ

    ಬರುವವಲ್ಲ...

    ಈ ಲೋಕದ

  ಚಿರ ಯುವಕ ಶಿವ-

ಯುವತಿ ಪಾರ್ವತಿಯರ

     ನಿತ್ಯನೂತನ

 ಸಂಭ್ರಮದ ವಿವಾಹ

  ವಾರ್ಷಿಕೋತ್ಸವವ

 ಆಚರಿಸೋಣ ಬನ್ನಿ

   ಮಹಾ ಶಿವರಾತ್ರಿ...

ದೊರೆಯಲಿ ಎಲ್ಲರಿಗೂ

    ನೆಮ್ಮದಿ-ಶಾಂತಿ;

     ಪ್ರಜ್ವಲಿಸಲಿ

   ಈ ಜಗದ ಕಾಂತಿ!

***

ಸೀಕ್ರೆಟ್....!

ಐದು ಜನ

ವೈವಿಧ್ಯಮಯ

ಹೆಂಡತಿಯರು

ಹಾಲಿನಂತಹ

ನಮ್ಮ ಮಧ್ಯೆ

ಹುಳಿಯನು

ಹಿಂಡಬಹುದೆಂದು

ಹೆದರಿ-ನಡುಗಿ

ದ್ರೌಪದಿಯನು

ಮದುವೆಯಾದರಾ

ಪಂಚ ಪಾಂಡವರು ...

ಗೊತ್ತಿಲ್ಲ ಗುರುವೇ!?

***

ಹೆಣ್ಣು ಮತ್ತು ತಾಯಿ

ಹೆಣ್ಣಾಗಿ

ಬದುಕಿದ

ಬದುಕು

ರೋಚಕ....

ತಾಯಿಯಾಗಿ

ಜೀವಿಸಿದ್ದು

ಭಾವುಕ!

*** 

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್