ಮಾಗೋಡು ಜಲಪಾತ ಮತ್ತು ಕವಡಿಕೆರೆ ದುರ್ಗಾಂಬಾ ದೇವಸ್ಥಾನ

ಮಾಗೋಡು ಜಲಪಾತ ಮತ್ತು ಕವಡಿಕೆರೆ ದುರ್ಗಾಂಬಾ ದೇವಸ್ಥಾನ


ಮಾಗೋಡು ಜಲಪಾತ

ಮಳೆಗಾಲದಲ್ಲಿ ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುತ್ತ ನಿಂತರೆ ಮೈಮರೆತುಬಿಡುತ್ತೇವೆ.ಮಾಗೋಡು ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ೨೦ ಕಿ.ಮೀ. ದೂರದಲ್ಲಿದೆ. ಹುಬ್ಬಳ್ಳಿಯ ಉಣಕಲ್ ನಿಂದ ಜನ್ಮಪಡೆದು ಕಲಘಟಗಿ, ಮುಂಡಗೋಡ , ಯಲ್ಲಾಪುರ ತಾಲೂಕಿನಲ್ಲಿ ಹರಿದು ಬರುವ ಬೇಡ್ತಿನದಿಯು ಮುಂದೆ ಮಾಗೋಡು ಜಲಪಾತವನ್ನು ನಿರ್ಮಿಸಿದೆ.ಸುಮಾರು ೬೫೦ ಅಡಿ ಎತ್ತರದಿಂದ ಹಚ್ಚಹಸಿರಿನ ದಟ್ಟಬೆಟ್ಟಗಳೆರಡರ ಮಧ್ಯದಿಂದ ಧುಮುಕುವ ಇದರ ದೃಶ್ಯವೈಭವ ವರ್ಣನಾತೀತ.ಈ ಜಲಪಾತದ ನೀರು ಕಾಡಿನ ಮಧ್ಯೆ ಹರಿದು ಮುಂದೆ ಗಂಗಾವತಿ ನದಿಯಾಗಿ ಅಂಕೋಲಮೂಲಕವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಈ ಜಲಪಾತ ವು ಮೂರು ಹಂತಗಳಾಗಿ ಹರಿಯುತ್ತಿದ್ದು ಈ ಜಲಧಾರೆಗಳಿಗೆ ಸೌಮ್ಯ, ರಮ್ಯ, ಭವ್ಯ ಎಂಬ ಅನ್ವರ್ಥಕ ಹೆಸರುಗಳಿವೆ.ಹಚ್ಚಹಸಿರು ವನಸಿರಿಯ ಹೊದಿಕೆ ಹೊದ್ದುಕೊಂಡಿರುವ ಎರಡುಬೆಟ್ಟಗಳ ಸಂದಿನಲ್ಲಿ ಶಾಂತವಾಗಿ ಹರಿಯುವ ಮೊದಲ ಹಂತವನ್ನು



 




`ಸೌಮ್ಯ`ವೆಂದು ಕರೆಯುತ್ತಾರೆ.ನಂತರ ಬಂಡೆಗಳ ನಡುವೆ ಬೆಳ್ನೊರೆಯಾಗಿ ಧುಮುಕುವ ರಮಣೀಯ ದ್ರಶ್ಯವನ್ನು `ರಮ್ಯ`ವೆಂದೂ,ಬಳಿಕ ಭೋರ್ಗರೆಯುತ್ತ ಸಾಗುವುದನ್ನು `ಭವ್ಯ`ವೆಂದು ವರ್ಣಿಸಿದ್ದಾರೆ.

ಹಾಲ್ನೊರೆಗಳನ್ನು ಸೂಸುತ್ತಾ ಧುಮುಕುವ ಜಲಧಾರೆಯ ಸೌಂದರ್ಯವನ್ನು ಎದುರಿನ ಬೆಟ್ಟದ ತುದಿಯಲ್ಲಿ ನಿಂತು ನೋಡಿಯೇ ಆನಂದಿಸಬೇಕು.ಸೂರ್ಯನ ಕಿರಣಗಳು ಬಿದ್ದಾಗ ಸೃಷ್ಟಿಯ ಅದ್ಭುತ ಲೀಲೆಯನ್ನುನೋಡುವುದೇ ಒಂದು ಸಂಭ್ರಮ.ಶುಭ್ರವಾಗಿ ಕಂಗೊಳಿಸುತ್ತಾ ನೀರಿನ ಹನಿಗಳಿಂದ ಕೂಡಿ ಹೊಗೆಯಂತೆ ಮೇಲೇಳುವ ನೋಟ ನಯನ ಮನೋಹರವಾಗಿದೆ.

ಈ ಜಲಪಾತವನ್ನು ತಲಪಲು ಉತ್ತಮ ಟಾರ್ ರಸ್ತೆ ಇದೆ.ಜಲಧಾರೆಯನ್ನು ಕೂತು ನೋಡಲು ಸಿಮೆಂಟು ಬೆಂಚುಗಳಿವೆ.ಹತ್ತಿ ಇಳಿಯಲು ವ್ಯವಸ್ಧಿತವಾದ ಮೆಟ್ಟಿಲುಗಳಿವೆ.ಇಲ್ಲಿಯೆ ತಂಗಲು ಅರಣ್ಯ ಇಲಾಖೆಯು ಪ್ರವಾಸಿ ಮಂದಿರವೊಂದನ್ನು ಕಟ್ಟಿಸಿದೆ.ಚಿಕ್ಕ ಮಕ್ಕಳಿಗೆ ಆಡಲು ಸಣ್ಣ ಪಾರ್ಕ್ ಇಲ್ಲಿದೆ.ಈ ಜಲಪಾತವು ವರ್ಷಪೂರ್ತಿ ಜಲಧಾರೆಯಿಂದ ಕೂಡಿರುತ್ತದೆ.ಆದರೆ ಬೇಸಿಗೆಯಲ್ಲಿ ಸ್ವಲ್ಪ ಸೊರಗುತ್ತದೆ.



 


 


 


 

ಮಾಗೋಡು ರಸ್ತೆಯಿಂದ ಸುಮಾರು ೧೦ ಕಿ.ಮಿ. ದೂರದಲ್ಲಿ ಮನಸ್ಸಿಗೆ ಮುದಕೊಡುವ ಉಲ್ಲಾಸವನ್ನು ಹೆಚ್ಚಿಸುವ ಇನ್ನೊಂದು ತಾಣವಿದೆ.ಇದುವೆ ಜೇನುಕಲ್ಲು ಗುಡ್ಡ. ಸಂಜೆ ಹೊತ್ತಿಗೆ ಸೂರ್ಯಾಸ್ತಮಾನವನ್ನು ಇಲ್ಲಿಂದ ನೋಡಬೇಕು.ಅಹ! ಮನಮೋಹಕವಾದ ಸೊಬಗಿನ ನೋಟ.

ಕವಡಿಕೆರೆ ದುರ್ಗಾಂ ಬಾ ದೇವಸ್ಥಾನ

ಮಾಗೋಡು ಜಲಪಾತದಲ್ಲಿ ಧುಮ್ಮಿಕ್ಕುವ ಜಲಧಾರೆಯನ್ನು ನೋಡಿದಮೇಲೆ ನಿಂತನೀರಿನ ಚೆಲುವನ್ನು ನೋಡಲೇಬೇಕು.ಕವಡಿಕೆರೆ ದುರ್ಗಾಂಬಾ ಎಂಬ ಪುರಾತನ ದೇವಸ್ಥಾನವಿದೆ.ಇದರ ಬದಿಯಲ್ಲಿ ವಿಶಾಲವಾದ ಪ್ರಶಾಂತವಾದ ೬೨ ಎಕರೆ ವಿಸ್ತೀರ್ಣದ ಕೆರೆ ಇದೆ.ಕೆರೆಯ ಸುತ್ತ .ಅಂದಿನಿಂದ ಕಣ್ತುಂಬುವ ಹಸಿರು.ಚೇತೋಹಾರಿ ದೃಶ್ಯ.



ಇದಕ್ಕೆ ಕುತೂಹಲಕರವಾದ ಒಂದು ಕಥೆಯೂ ಇದೆ.ಪಾಂಡವರು ಕಾಡಿನಲ್ಲಿ ಸಾಗುತ್ತಿದ್ದಾಗ ದ್ರೌಪದಿ ತುಂಬ ಬಾಯಾರಿದಳು.ಭೀಮನಲ್ಲಿ ನೀರು ತರಲು ಕೇಳಿಕೊಂಡಳು.ಸುತ್ತ ಹುಡುಕಾಡಿದರೂ ನೀರು ಸಿಗದಾಗ ಭೀಮನು ದೇವಿದುರ್ಗೆಯನ್ನು ಬೇಡಿದನು.ಆಗ ದೇವಿ ಗಂಗೆಯಿಂದ ನೀರು ತರಲು ಬೇಕಾದಷ್ಟು ಶಕ್ತಿಯನ್ನು ಕರುಣಿಸಿದಳು.ಭೀಮನು ಅಸಂಖ್ಯಾತ ಗಡಿಗೆಗಳಲ್ಲಿ ನೀರುಹೊತ್ತು ತಂದನು.ಅಲ್ಲಿ ಕೆರೆಯೇ ನಿರ್ಮಾಣವಾಯಿತು. ಸಂತುಷ್ಟಳಾದ ದೇವಿಯು ತನ್ನ ವಿಗ್ರಹವನ್ನು ಕೆರೆಯ ಪಕ್ಕದಲ್ಲೇ ಪ್ರತಿ



µÁ×

 

ಯೆಲ್ಲಾಪುರದಿಂದ ಅಂಕೋಲ ಹೆದ್ದಾರಿಯಲ್ಲಿ ಮಾಗೋಡು ತಿರುವಿಗೆ ೨ಕಿ.ಮಿ. ಅಲ್ಲಿಂದ ೪ಕಿ.ಮಿ. ಕ್ರಮಿಸಿದಾಗ ಎಡಬದಿಗೆ ೧ಕಿ.ಮಿ. ಸಾಗಿದರೆ ಕವಡಿಕೆರೆ ದೇವಸ್ಥಾನವಿದೆ.ಎಲ್ಲ ತಿರುವುಗಳಲ್ಲಿ ದಾರಿಸೂಚಿ ಫಲಕವಿರುವುದರಿಂದ ಸುಲಭವಾಗಿ ಸಾಗಬಹುದು.

 

ಪಿಸಬೇಕೆಂದು ಹೇಳಿದಳು.ಅಂದಿನಿಂದ ಇಂದಿನವರೆಗು ಈ ಕೆರೆ ಎಂಥ ಬಿರುಬೇಸಿಗೆಯಲ್ಲು ಬರಿದಾಗಲೆ ಇಲ್ಲ ಎನ್ನುತ್ತಾರೆ.

ದೇವಿಯ ದರ್ಶನ ಪಡೆದು ಹೊರಬಂದಾಗ ಪ್ರಾಂಗಣದ ಹೊರಬದಿಯಲ್ಲಿ ಧ್ಯಾನಕೇಂದ್ರವಿದೆ.ಇಲ್ಲಿ ಕುಳಿತು ಜಲರಾಶಿಯ ಸೊಬಗನ್ನು ನೋಡುತ್ತಿದ್ದರೆ ಎಂಥ ಚಂಚಲಮನಸ್ಸಿನವರಾದರೂ ಒಮ್ಮೆ ಮೂಕವಿಸ್ಮಿತರಾಗಿ ಭಾವಪರವಶರಾಗುತ್ತಾರೆ.



 

Comments