ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
ಈ ಲೇಖನವನ್ನು ಸೆಪ್ಟೆಂಬರ್ 5ರಂದು ಸರ್ಕಾರಿ ಶಾಲಾ ಶಿಕ್ಷಕರ ಪ್ರತಿಭಟನೆಗೆ ನಾನು ಹೀಗೆ ಪ್ರತಿಕ್ರಿಯಿಸಿದ್ದೆ, ಆದರೆ ಪತ್ರಿಕೆಗೆ ಕಳುಹಿಸಲಾಗಲಿಲ್ಲ, ನನ್ನ ಪ್ರತಿಕ್ರಿಯೆಗೆ ಸಂಪದಿಗರ ಅಮೂಲ್ಯ ಅಭಿಪ್ರಾಯಗಳನ್ನು ಕೇಳಲು ಪ್ರಕಟಿಸುತ್ತಿರುವೆ. ತಿಳಿಸುತ್ತೀರಾ?
ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮ: - ಈ ಶ್ಲೋಕವನ್ನು ನಾವು ಮಕ್ಕಳಿಗೆ ಅಪ್ಪ ಅಮ್ಮ ಎಂದು ಹೇಳಿಕೊಡುವ ವೇಳೆಯಲ್ಲಿಯೇ ಕಲಿಸಲು ಪ್ರಾರಂಭಿಸಿರುತ್ತೇವೆ. ಪಾಲಕರಿಗೆ ಕೊಡುವಷ್ಟೇ ಪ್ರೀತಿ ಗೌರವಗಳನ್ನು ಶಿಕ್ಷಕರಿಗೂ ಸಲ್ಲಿಸಬೇಕು ಎನ್ನುವ ಬುನಾದಿಯನ್ನು ಹಾಕಿರುತ್ತೇವೆ. ಇದಕ್ಕೆ ಪೂರಕವಾಗಿ ಸೆಪ್ಟೆಂಬರ್ 5ರಂದು ನಾವು ದಿನಾಚರಣೆಯನ್ನು ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಗೌರವಾರ್ಥವಾಗಿ ಆಚರಿಸುತ್ತೇವೆ. ಸೆಪ್ಟೆಂಬರ್ 5-ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿ ನಂತರ ಅತ್ಯುನ್ನತ ಪದವಿ - ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಜನ್ಮದಿನ - ಅವರು, ಶಿಕ್ಷಕ ವೃತ್ತಿಯ ಮೇಲಿರುವ ಅಭಿಮಾನಕ್ಕಾಗಿ, ಶಿಕ್ಷಕರ ಮೇಲಿರುವ ಪ್ರೀತಿಗಾಗಿ, ಶಿಕ್ಷಕವೃಂದಕ್ಕೆ ಗೌರವ ಸಲ್ಲ್ಲಿಸುವುದಕ್ಕಾಗಿ ನೀಡಿದ ಅಮೂಲ್ಯ ಕಾಣಿಕೆ ಈ "ಶಿಕ್ಷಕರ ದಿನಾಚರಣೆ".ಇಂತಹ ಗುರುವಂದನೆಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದರಲ್ಲ ನಮ್ಮ ಶಿಕ್ಷಕರು- ಇದು ಸಮಾಜ ತನ್ನ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಮಕ್ಕಳಿಗೆ ಶಿಕ್ಷಕ ದಿನಾಚರಣೆಯ ಮಹತ್ವವನ್ನು ತಿಳಿಸಿ "ಕತ್ತಲಿನಿಂದ ಬೆಳಕಿನೆಡೆಗೆ" ಕರೆದೊಯ್ಯುವ ಶಿಕ್ಷಕರು ತಮ್ಮ "ಬೆಳಕಿನ ದಿನ"ವನ್ನು ಕತ್ತಲೆಯ ದಿನವನ್ನಾಗಿ ಆಚರಿಸುವುದು ವಿಪರ್ಯಾಸವಲ್ಲವೇ? "ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಲಿಲ್ಲವೆ? ಸಮಾಜಕ್ಕೆ ಅದರಲ್ಲೂ ಮಕ್ಕಳಿಗೆ ಮಾದರಿಯಾಗಿ ಮಾರ್ಗದಶರ್ಿಯಾಗಬೇಕಿದ್ದ ಶಿಕ್ಷಕರು ಯಾರಿಗೆ ನ್ಯಾಯ ಸಲ್ಲಿಸುತ್ತಿದ್ದಾರೆ? ಅವರಿಗೆ ತಮ್ಮ ವೃತ್ತಿಯ ಬಗೆಗೇ ಅಭಿಮಾನವಿಲ್ಲವೇ? ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಬಗೆಗೆ ಗೌರವವೇ ಇಲ್ಲವೇ?
"ಸಂಬಳ ಹೆಚ್ಚಿಸಿಲ್ಲ, ಆ ಸೌಕರ್ಯ ಒದಗಿಸಿಲ್ಲ, ಈ ಅನುಕೂಲ ಇಲ್ಲ" ಎಲ್ಲವೂ ಸರಿ ಆದರೆ ಈ ತರಹದ ಸಮಸ್ಯೆಗಳನ್ನು ಬೇರೆ ಸರ್ಕಾರಿ ನೌಕರರು ಎದುರಿಸುತ್ತಿಲ್ಲವೇ? ಜನ ಸಾಮಾನ್ಯರು ದಿನ ಬೆಳಗಾದರೆ ಎದುರಿಸುವ ಸಮಸ್ಯೆಗಳಿಗೆ ಲೆಕ್ಕವೇ ಇಲ್ಲ ಆದರೆ ಯಾರಾದರೂ "ದೀಪಾವಳಿ"ಯನ್ನು ಮರೆಯುತ್ತಾರಾ? "ಮಕ್ಕಳ ಹುಟ್ಟು ಹಬ್ಬ"ವನ್ನು ಶೋಕ ದಿನಾಚರಣೆಯನ್ನಾಗಿಸುತ್ತಾರಾ? ನಿಮ್ಮ ಕಷ್ಟಗಳಿಗೆ ಸರ್ಕಾರ ಸ್ಪಂದಿಸಿಲ್ಲ, ಇದು ಗಂಭೀರವಾದ ಸಮಸ್ಯೆ, ಸರಿ, ಎಲ್ಲವೂ ಸರಿ, - ಪ್ರತಿಭಟಿಸಲು ಈ ದಿನವೇ ಬೇಕಿತ್ತಾ? ಬೇರೆ ದಿನಗಳು ಇರಲಿಲ್ಲವೇ? ತಾವು ಕಲಿಸುವ ಮಕ್ಕಳ ದೃಷ್ಟಿಯಲ್ಲಿ ಶಿಕ್ಷಕರ ಸ್ಥಾನ ಏನಿರುತ್ತದೆ?
ಸಮಾಜ ಇಂತಹ ಕರಾಳ ಘಟನೆಗಳು ಪುನರಾವರ್ತನೆಯಾಗದಂತೆ ಕಡಿವಾಣ ಹಾಕಲು ಯೋಚಿಸಲೇಬೇಕಾಗಿದೆ. ಆಗ ಮಾತ್ರ ಶಿಕ್ಷಕರ ದಿನಾಚರಣೆಗೊಂದು ಅರ್ಥ, ನಮ್ಮ ಜೀವನ ರೂಪಿಸಿದ ಗುರುವಿಗೊಂದು ಸಲ್ಲಿಸುವ ನಿಜ ನಮನ.
ಸುಮಾ ಎಸ್.ಕೆ. ಬಳ್ಳಾರಿ
Comments
In reply to ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ? by shashikannada
ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
In reply to ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ? by Shreekar
ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
In reply to ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ? by SRINIVAS.V
ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
In reply to ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ? by ಭಾಗ್ವತ
ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
In reply to ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ? by suma kulkarni
ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ?
ಉ: ಮಾದರಿಯ ಮಾಸ್ತರರು ಮೌಲ್ಯ ಮರೆತರೇ?