ಮಾನವ ಶರೀರ ಎಂಬ ಅದ್ಭುತ ಜೀವಂತ ಯಂತ್ರ (ಭಾಗ 2)

ಮಾನವ ಶರೀರ ಎಂಬ ಅದ್ಭುತ ಜೀವಂತ ಯಂತ್ರ (ಭಾಗ 2)

11)”ಅಲ್ಬಿನಿನ್” ಬಾಧೆಯಿರುವ ಮನುಷ್ಯರಿಗೆ “ಮೇಲಾನಿನ್” (ಚರ್ಮ, ಕಣ್ಣು ಮತ್ತು ಕೂದಲುಗಳ ಬಣ್ಣಕ್ಕೆ ಕಾರಣವಾದ ವಸ್ತು) ಉತ್ಪಾದಿಸಲು ಸಾಧ್ಯವಿಲ್ಲ. ಇದರಿಂದಾಗಿ ಅವರಲ್ಲಿ ಬಿಳಿ ಕೂದಲುಗಳು ಮತ್ತು ಚರ್ಮದಲ್ಲಿ ಹಾಲುಬಿಳಿ ಕಲೆಗಳು ಮೂಡುತ್ತವೆ ಹಾಗೂ ಕಣ್ಣುಗಳು ಪೇಲವ ಆಗುತ್ತವೆ.

12)ಮನುಷ್ಯನ ದೇಹದಲ್ಲಿ ಅಂಗಾಲು, ಅಂಗೈ ಮತ್ತು ತುಟಿಗಳ ಹೊರತಾಗಿ ಬೇರೆಲ್ಲ ಹೊರಭಾಗಗಳನ್ನು ಕೂದಲುಗಳು ಆವರಿಸಿವೆ.

13)ಒಬ್ಬ ಮಾನವ ನಗಲು 17 ಸ್ನಾಯುಗಳನ್ನು ಬಳಸಿದರೆ ಮುಖ ಸಿಂಡರಿಸಲು 43 ಸ್ನಾಯು ಬಳಸುತ್ತಾನೆ.

14)ಮನುಷ್ಯ ಶರೀರದಲ್ಲಿರುವ ಒಂದೇ ಒಂದು ಬಹುಮುಖಿ ಗಂಟು ಹೆಬ್ಬೆರಳಿನ ಗಂಟು. ಇದು ಹೆಬ್ಬೆರಳನ್ನು ಮುಂದಕ್ಕೆ, ಹಿಂದಕ್ಕೆ ಮತ್ತು ಅಕ್ಕಪಕ್ಕಗಳಿಗೆ ಚಲಿಸಲು ಸಹಕಾರಿ.

15)ಕಾಲಿನ ಮೊಣಗಂಟು ಮಾನವನ ಎಲುಬುಗೂಡಿನ ಅತ್ಯಂತ ದೊಡ್ಡ ಗಂಟು.

16)ಸಣ್ಣಕರುಳಿನ ಒಳಗಿರುವ ಬೆರಳಿನಾಕಾರದ ಪುಟ್ಟ ರಚನೆಗಳಿಗೆ ವಿಲ್ಲಿ ಎಂದು ಹೆಸರು. ಇವು ಪೋಷಕಾಂಶಗಳ ಹೀರುವಿಕೆಯ ಭಾಗದ ವಿಸ್ತೀರ್ಣವನ್ನು ಹೆಚ್ಚಿಸುತ್ತವೆ. ಇವುಗಳ ಒಟ್ಟು ಮೇಲ್ಮೈ ವಿಸ್ತೀರ್ಣವು ಚರ್ಮದ್ದಕ್ಕಿಂತ 45 ಪಟ್ಟು ಜಾಸ್ತಿ.

17)ಮನುಷ್ಯ ನುಂಗಿದ ಆಹಾರ ಹೊಟ್ಟೆ ತಲಪಲು ಸುಮಾರು 8 ಸೆಕೆಂಡು ತಗಲುತ್ತದೆ.

18)ಮಾನವ ವೇಗವಾಗಿ ಓಡಿದಾಗ, ಹೆಚ್ಚು ಕೆಲಸ ಮಾಡುವ ಶರೀರಕ್ಕೆ ಹೆಚ್ಚು ಆಮ್ಲಜನಕ ಬೇಕಾಗುತ್ತದೆ. ಆಗ ವೇಗವಾಗಿ ಮತ್ತು ಆಳವಾಗಿ ಉಸಿರಾಟ ಮಾಡಬೇಕಾಗುತ್ತದೆ. ಪ್ರತಿ ಉಚ್ಛ್ವಾಸದಲ್ಲಿ 2 ಲೀಟರ್ ಗಾಳಿ ಒಳಕ್ಕೆ ಎಳೆದುಕೊಳ್ಳಬೇಕಾಗುತ್ತದೆ - ಇದು ಸಿಹಿಪಾನೀಯದ ಖಾಲಿ ಬಾಟಲಿಯ ಗಾತ್ರಕ್ಕೆ ಸಮಾನ.

19)ಎಲ್ಲ ಎಲುಬುಗಳೂ ಜೀವಂತ. ಆದ್ದರಿಂದ ಒಂದು ಎಲುಬು ಮುರಿದರೆ, ಅದು ತಾನಾಗಿಯೇ ಸರಿ ಮಾಡಿಕೊಳ್ಳುತ್ತದೆ - ಗಾಯ ಗುಣವಾಗುವಂತೆ.

20)ಮನುಷ್ಯರು ತಿನ್ನುವ ಆಹಾರ ಶರೀರವನ್ನು ಬೆಚ್ಚಗಿರಿಸಲಿಕ್ಕೂ ಅಗತ್ಯ. ಶರೀರದ ಎಲ್ಲ ಅಂಗಗಳೂ ಸರಿಯಾಗಿ ಕೆಲಸ ಮಾಡುತ್ತಿದ್ದರೆ, ಆಹಾರದ ಪೋಷಕಾಂಶ ಬಳಸಿ ಯಕೃತ್ತು (ಪಿತ್ತಜನಕಾಂಗ) ಉಷ್ಣತೆ ಉತ್ಪಾದಿಸಿ, ಶರೀರದ ಉಷ್ಣತೆಯನ್ನು ಸುಮಾರು 37 ಡಿಗ್ರಿ ಸೆಲ್ಸಿಯಸ್ ಮಟ್ಟದಲ್ಲಿ ಉಳಿಸಿಕೊಳ್ಳುತ್ತದೆ.

ಫೋಟೋ 3 ಮತ್ತು 4: ಮಾನವ ಅಂಗರಚನೆ

(ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ)