*ಮಾಯದರಮನೆ*
ಕವನ
ದಿವ್ಯ ನೋಟವು ಮನೆಯ ಒಳಗಡೆ
ಚಿತ್ತ ಮೋಹಕ ಕಣ್ಣಿಗೆ
ನವ್ಯ ನವೀನ ಶೈಲಿ ಸುಂದರ
ರಂಗು ರಂಗಿದೆ ಗೋಡೆಗೆ||
ಬಿಂಕ ಮನಸಿನ ಡೊಂಕು ಬಂಗಲೆ
ಅಣುಕುವಾಡುತ ಮೆರೆದಿದೆ
ಕೊಂಕು ನುಡಿಗಳನಾಡೊ ಜನಗಳ
ಹಿಂಡು ಅದರೊಳು ನೆರೆದಿದೆ||
ಏನು ಅರಿಯದ ಮುಗ್ದ ಮನಗಳ
ತಲೆಯ ಹೊಡೆಯುತ ಬೆಳೆದಿದೆ|
ಪಾಪಿ ಹಣದಲಿ ಮಿಂದು ಚೆಂದದಿ
ಜನುಮ ಧರೆಯಲಿ ತಳೆದಿದೆ||
ಮೋಹ ಮಹಲಿದು ಜೇಡ ಬಲೆಯಿದು
ನಮ್ಮ ಪಾಪದ ಕನ್ನಡಿ
ದ್ರೋಹ ಮತ್ಸರ ನಿತ್ಯ ಬೀರುವ
ಮನುಜ ಭಾವವೆ ಮುನ್ನಡಿ||
ಮೇಲೆ ಇಹುದದು ನಮ್ಮ ಎಲ್ಲರ
ಸ್ವಂತ ಮನೆಯದು ಸ್ವರ್ಗದಿ
ಇಲ್ಲಿ ಇರುವೆವು ನಮ್ಮದಲ್ಲದ
ಮಾಯ ಸದನದಿ ಸ್ವಾರ್ಥದಿ||
-*ಶ್ರೀ ಈರಪ್ಪ ಬಿಜಲಿ*
ಚಿತ್ರಕೃಪೆ: *ವಾಟ್ಸಪ್ ಕೃಪೆ*
ಚಿತ್ರ್
