ಮಾಯಾವತಿಯ ಇಂದ್ರಲೋಕ

ಮಾಯಾವತಿಯ ಇಂದ್ರಲೋಕ

ಬರಹ

ಮಾಯಾವತಿಯ ಇಂದ್ರಲೋಕ

ನಡೆದಲ್ಲಿ ನಡುಮುರಿದು ಬಿತ್ತು ಕೈ
ಕೆಸರಾಯಿತು ಕಮಲ ಮೈ
ಹಸಿರು ಸೈಕಲಿಗೆ ಕುತ್ತು
ಐರಾವತಕ್ಕೆ ಬಿತ್ತು ಒತ್ತು!

ಜಾತಿ ಉಪಜಾತಿ ಗಣಿತದಲಿ ಮಿಂಚಿ
ಎಲ್ಲ ಜಾತಿಗೂ ಕೊಂಚ ಜನಿವಾರ ಹಂಚಿ
ಸಂಚಿಗೆ ಸಿಲುಕಿದರೂ ಇಂಚು ಅಲುಗದೆ
ಜನರ ಸಿಟ್ಟೇ ಬಲ, ಸದೆ ಬಡಿದ ಗದೆ!

ಆನೆ ನಡೆದದ್ದೇ ದಾರಿ
ನಾನೆ ಇನ್ನಿಲ್ಲಿಯ ರೂವಾರಿ
ಮಾಲೆ ಹಾಕಿ ಅಂಬಾರಿಯೇರಿ
ಇದೀಗ ಸವಾರಿ ನಾಲ್ಕನೇ ಬಾರಿ!

- ಗೋಪೀನಾಥ ರಾವ್.