ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು?

ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು?

Comments

ಬರಹ

ಮಾರಿತೊತ್ತಿಗ(ಕಾಳಿದಾಸ) ಸಕ್ಕದದ ಬಲು ಮೇಲ್ಮೆಯ ಕಬ್ಬಿಗರಲ್ಲೊಬ್ಬ. ತುಂಬ ರಸಿಕಗಬ್ಬಿಗರಲ್ಲಿ ಮೊದಲನೇಯ ಇಕ್ಕೆ ಮಾರಿತೊತ್ತಿಗನದೆ. ಆದರೆ ಇವನ ಹೊತ್ತಿನ ಬಗ್ಗೆ ಇನ್ನು ಹಲವು ಗೊಂದಲಗಳಿವಿಯಂತೆ. ಇತ್ತೀಚೆಗೆ ನಾನು ಅಯೊಳೆ(ಐಹೊಳೆ)ಗೆ ಹೋಗಿದ್ದಾಗ ನೋಡಿದ/ತಿಳಿದುಕೊಂಡ ೬-೭ ನೇ ನೂರೇಡಿನ ಶಾಸನದಲ್ಲಿ ಕಾಳಿದಾಸನನ್ನು ಹೊಗಳಿ ಬರೆದಿದ್ದಾರೆ. ಆದ್ದರಿಂದ ಅವನು ಆರನೇ ನೂರೇಡಿಗಿಂತ ಮೊದಲೇ ಇದ್ದ ಅಂತ ಹೇಳಬಹುದು. ಆದರೆ ಅವನು ಬೋಜರಸನ ಆಸ್ತಾನದಲ್ಲಿದ್ದ ಎಂಬ ಬಲವಾದ ನಂಬುಗೆಯಿದೆ('ಕವಿರತ್ನ ಕಾಳಿದಾಸ'ಸಿನಿಮಾದಲ್ಲಿ ಇದೇ ತೋರ್ಸಿರದು). ಆದರೆ ಬೋಜರಾಜನ ಹೊತ್ತು ೧೧ ನೂರೇಡಂತೆ. ಬೋಜರಾಜ ಮತ್ತು ಕಾಳಿದಾಸ ಇಬ್ಬರು ಒಂದೇ ಹೊತ್ತಿನವರೆಂದು ಒತ್ತಿಹೇಳಲು ಯಾವುದೇ ಪುರಾವೆಯಿಲ್ಲವಂತೆ. ಕಾಳಿದಾಸನು ಬಂಗಾಳದವನ ಅತ್ವ ಉಜ್ಜಿಯನಿವನ? ಇದು ಸರಿಯಾಗಿ ತಿಳಿದಿಲ್ವಂತೆ...ದಯವಿಟ್ಟು ಇದರ ಬಗ್ಗೆ ಹೆಚ್ಚು ತಿಳಿದವರು ಬೆಳಕು ಚೆಲ್ಲುವಿರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet