ಮಾಲು ಕಣ್ಣಿನ ಕಂಬನಿಗಳು...

ಮಾಲು ಕಣ್ಣಿನ ಕಂಬನಿಗಳು...

ಕವನ

-1-

ಇನಿಯಾ,
ಶ್ರುತಿಯು ಮಾಡುವುದೇತಕೆ 
ಯಾರು ನುಡಿಸದ ವೀಣೆಗೆ!
ಸಿಂಗರವು ಬೇಕೇತಕೆ 
ನೀನೆ ಬರದ ಕೋಣೆಗೆ!
-ಮಾಲು 
***
-2-
-ಮಾಲು 
ಕಗ್ಗತ್ತಲೆಯ ಕಾಡಿನಲಿ 
ಮಿಣುಕು ದೀಪ!
ಬಾಯರಿದವನ ಮುಂದಿರುವ 
ನೀರಿರದ ಕೂಪ!
ಅರಸಿಕನ ಜೊತೆಗೆ 
ಸರಸ ಸಲ್ಲಾಪ!
ಕಣ್ಣು ಕಾಣದವನ ಮುಂದೆ 
ಕಾಮಿನಿಯ ರೂಪ!
ಗೆಳೆಯ ಇವೆಲ್ಲ ವ್ಯರ್ಥ 
ಇವಕಿಲ್ಲ ಅರ್ಥ!
-ಮಾಲು