ಮಾವಿನ ಹಣ್ಣಿನ ಸಾರು
ಬೇಕಿರುವ ಸಾಮಗ್ರಿ
ಮಾವಿನ ಹಣ್ಣು ೩, ಅರಸಿನ ಪುಡಿ ಚಿಟಿಕೆ, ಇಂಗು ಕಡಲೆ ಗಾತ್ರ, ಕೊತ್ತಂಬರಿ-ಜೀರಿಗೆ ಪುಡಿ ೧/೨ ಚಮಚ, ಸೀಳಿದ ಹಸಿ ಮೆಣಸು ೩, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ ರುಚಿಗೆ, ಒಗ್ಗರಣೆಗೆ ಸಾಸಿವೆ ೧ ಚಮಚ, ಎಣ್ಣೆ ೧ ಚಮಚ, ಬೆಳ್ಳುಳ್ಳಿ ೪ ಎಸಳು, ಒಣಮೆಣಸು ೧, ಕರಿಬೇವು ೨ ಎಸಳು.
ತಯಾರಿಸುವ ವಿಧಾನ
ಮಾವಿನ ಹಣ್ಣನ್ನು ಹೋಳು ಮಾಡಿ ಗೊರಟು ಸಹಿತ ೪ ಕಪ್ ನೀರಿನಲ್ಲಿ ಅರಸಿನ ಪುಡಿ, ಕೊತ್ತಂಬರಿ-ಜೀರಿಗೆ ಪುಡಿ, ಉಪ್ಪು, ಬೆಲ್ಲ, ಇಂಗು, ಹಸಿಮೆಣಸು ಹಾಕಿ ಬೇಯಿಸಿ. ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಅನ್ನದೊಂದಿಗೆ ಕಲಸಿ ತಿನ್ನಲು ರುಚಿ.
- ಸಹನಾ ಕಾಂತಬೈಲು, ಮಡಿಕೇರಿ