ಮಾವಿನ ಹೂವೆ, ನೀನೂ ಸುಂದರವಾಗಿರುವೆ
ಬರಹ
ಮಾವಿನ ಮರವನ್ನು ನೋಡದವರಾರಿದ್ದಾರೆ? ಮಾವಿನ ಹಣ್ಣಿನ ಸವಿ ಅರಿಯದವರಾರಿದ್ದಾರೆ? ಮಾವಿಗೂ ಕೋಗಿಲೆಗೂ ಸಂಬಂಧವನ್ನು ಕಲ್ಪಿಸದ ಕವಿಗಳಾರಿದ್ದಾರೆ? ಆದರೆ, ಮಾವಿನ ಹೂವಿನ ಸೌಂದರ್ಯವನ್ನು ಕಂಡಿದ್ದೀರಾ? ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಅರಳಿ ತನ್ನ ಬಿನ್ನಾಣವನ್ನು ಹೊರಸೂಸುವ ಮಾವಿನ ಹೂವಿನ ಸುಂದರ ಚಿತ್ರ ಇಲ್ಲಿದೆ, ಸಂಪದದ ಓದುಗರಿಗಾಗಿ. ನೋಡಿ, ಸೌಂದರ್ಯೋಪಾಸನೆಯಲ್ಲಿ ತೊಡಿಗಿಸಿಕೊಳ್ಳಿ.