ಮಾಸಗಳಿಗೆ ಹಾಗೆ ಹೆಸರೇಕೆ
ಬರಹ
ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಮಾರ್ಗಶಿರ, ಪೌಷ, ಮಾಘ ಮತ್ತು ಫಾಲ್ಗುಣ ಹೀಗೇಕೆ ಕರೆಯುತ್ತಾರೆ?
ಕಾರಣ
ಹುಣ್ಣಿಮೆಯ ದಿನಕ್ಕೆ ಸರಿಸುಮಾರಾಗಿ ಚಂದ್ರ (ತಿಂಗಳ್) ಆಯಾ ನಕ್ಷತ್ರಗಳನ್ನು ಪ್ರವೇಶಿಸುವುದಱಿಂದ ಮಾಸಗಳಿಗೆ ಆಯಾ ನಕ್ಷತ್ರದ ಸಂಬಂಧದಿಂದ ಕರೆಯುತ್ತಾರೆ.
ಚೈತ್ರ=ಹುಣ್ಣಿಮೆಯ ದಿನ ಸರಿಸುಮಾರು ಚಂದ್ರ ಚಿತ್ರಾ ನಕ್ಷತ್ರಪ್ರವೇಶ
ವೈಶಾಖ= ವಿಶಾಖನಕ್ಷತ್ರದಲ್ಲಿ ಪ್ರವೇಶ
ಹಾಗೆಯೇ ಜ್ಯೇಷ್ಠ=ಜ್ಯೇಷ್ಠಾ ನಕ್ಷತ್ರ, ಆಷಾಢ=ಪೂರ್ವಾಷಾಢ/ಉತ್ತರಾಷಾಢ, ಶ್ರಾವಣ=ಶ್ರವಣ ನಕ್ಷತ್ರದಲ್ಲಿ ಚಂದ್ರನ ಪ್ರವೇಶ
ಮಾರ್ಗಶಿರ=ಮೃಗಶಿರಾನಕ್ಷತ್ರ, ಪೌಷ=ಪುಷ್ಯಾ, ಮಾಘ್ಹ=ಮಘಾನಕ್ಷತ್ರ, ಫಾಲ್ಗುಣ= ಪೂರ್ವಾ/ಉತ್ತರಾ ಫಲ್ಗುಣಿಯಲ್ಲಿ ಸರಿಸುಮಾರಾಗಿ ಚಂದ್ರ ನಕ್ಷತ್ರದಲ್ಲಿ ಪ್ರವೇಶ ಮಾಡುವುದಱಿಂದ ಆಯಾ ನಕ್ಷತ್ರಗಳಿಂದಲೇ ತಿಂಗಳುಗಳನ್ನು ಕರೆಯುತ್ತಾರೆ. ಇಲ್ಲೂ ಕೂಡ ತಿಂಗಳೇ(ಚಂದ್ರ) ತಿಂಗಳಿಗಳಿಗೆ (ಮಾಸ) ಕಾರಣನಾಗಿದ್ದಾನೆ.