ಮುಂಗಾರು ಮಳೆ
ಕವನ
ಮುಂಗಾರು ಮಳೆಯ ಚೆಲುವ ನೋಡಾ
ನಮ್ಮೀ ಧರಣಿಯೊಂದು ಪ್ರಕೃತಿ ಬೀಡಾ
ವೈಶಾಖದಲಿ ಬಿಸಿಲಿಗೆ ಬಿರಿದೆವು ನಾವು
ಗಂಗೆಯಿಳಿದು ತಣಿಪೆ ಭೂಮಿಯ ಕಾವು!
ಮಳೆಯ ಜೊತೆಗೇ ಬಿರುಗಾಳಿಯ ತಾಳ
ಗುಡುಗು ಮಿಂಚು ಸಿಡಿಲ ಮಹಾ ಮೇಳ
ಬಿಸಿಲಿನ ಧಗೆಗೆ ಬಾಯಾರಿದ ವಸುಂಧರೆ
ಕುಡಿದು ತೃಪ್ತಿಯಲಿ ತಣಿವಳಲ್ಲ ಈ ಧರೆ!
ಸುರಿ ಸುರಿದು ಹರಿಹರಿವಾ ಗಂಗಾ ಧಾರೇ
ಕೃಷ್ಣಾ ಕಾವೇರಿಯರ ಪೂಜಿಸುವ ಬಾರೇ
ಗಿಡ ಮರಗಳಲಿ ಚಿಗುರು ಬಿರಿವ ಛಾಯೆ
ಹಸಿರ ಸೀರೆಯನುಟ್ಟು ನಲಿವಳು ತಾಯೆ!
ಬಸಿರ ಬಯಕೆಯಿಂದ ನಲಿವಾ ಮರ ಗಿಡ
ರೈತನ ಮೊಗದಲಿ ಅರಳಿದ ನಗುವ ನೋಡ
ಸಂತೋಷದಲಿ ಹಾಡುವರು ಸುಗ್ಗೀ ಹಾಡಾ
ಈ ಫಲ ಭರಿತ ಭೂಮಿ ಸೊಬಗಿನ ನಾಡಾ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್