ಮುಂಬೈನಗರದ ಹಿರಿಯ ವೈಣಿಕ, ಸಿ. ಕೆ. ಶಂಕರನಾರಾಯಣರಾಯರ ನಿಧನ
’ಮೈಸೂರು ಅಸೋಸಿಯೇಶನ್’ ನ ಹಿರಿಯ ಸದಸ್ಯ, ಹಾಗೂ ’ಮುಂಬೈ ಕನ್ನಡ ಸಂಘದ ಸ್ಥಾಪಕ’ ’ಅಜೀವ ಸದಸ್ಯ’ರೂ ಆಗಿದ್ದ ’ಹಿರಿಯ ವೈಣಿಕ ಶ್ರೀ ಶಂಕರನಾರಾಯಣರಾಯರು’, ಸನ್, ೨೦೧೧ ರ, ಜನವರಿ ೧೫ ನೇ ತಾರೀಖಿನ ಬೆಳಿಗ್ಯೆ, ೮-೩೦ ಕ್ಕೆ ತಮ್ಮ ’ಥಾಣೆ’ಯ ಮಗನ ಮನೆಯಲ್ಲಿ ಕೊನೆಯುಸಿರೆಳೆದರು. ಸುಮಾರು ಸಮಯದಿಂದ ರಾಯರು ಅನಾರೋಗ್ಯದಿಂದ ನರಳುತ್ತಿದ್ದರು.
ವೀಣಾ ವಿದ್ವಾಂಸ, ’ಸಿ. ಕೆ. ಎಸ್’, ಮುಂಬೈನ ಸಂಗೀತ ರಸಿಕರಿಗೆ ಚಿರಪರಿಚಿತರಾಗಿದ್ದರು, ೯೦ರ ವಯಸ್ಸಾಗಿದ್ದರೂ, 'ಮೈಸೂರು ಅಸೋಸಿಯೇಷನ್' ನ ಹಲವಾರು ಕಾಯಕ್ರಮಗಳಿಗೆ ತಪ್ಪದೆ ಬರುತ್ತಿದ್ದರು. ಕರ್ನಾಟಕ ಸಂಗೀತ ಅವರಿಗೆ ಅತಿ ಪ್ರಿಯ. ಮುಂಬೈನ ಉಪನಗರ ’ಚೆಂಬೂರಿನಲ್ಲಿತರಂಗಿಣಿ ಸಂಗೀತ ಅಕಾಡೆಮಿ’ಯನ್ನು ಸ್ಥಾಪಿಸಿ, ಹಲವಾರು ಕಲಾವಿದರಿಗೆ ಒಂದು ಅತ್ಯುತ್ತಮ ವೇದಿಕೆಯನ್ನು ಸೃಷ್ಟಿಮಾಡಿಕೊಟ್ಟಿದ್ದರು. ಅಲ್ಲಿ ತಾವೇ ಖುದ್ದಾಗಿ ತರಬೇತಿಯನ್ನು ಕೊಡುತ್ತಿದ್ದರು. ಕಲೆ, ಸಾಹಿತ್ಯಗಳಲ್ಲಿ ಅಪಾರ ಆಸಕ್ತಿಯಿತ್ತು. ಶಂಕರನಾರಾಯಣರಾಯರ ೪ ಗಂಡುಮಕ್ಕಳಲ್ಲಿ ಹಿರಿಯ ಮಗ ಸನ್, ೨೦೦೦ರಲ್ಲಿ ಮೃತರಾದರು. ರಾಯರು ಈಗಿನ ೩ ಮಕ್ಕಳು ಹಾಗೂ ಅಪಾರ ಬಂಧುವರ್ಗ, ಮತ್ತು ಗೆಳೆಯರನ್ನು ಅಗಲಿ ತೆರಳಿದ್ದಾರೆ.
'ಸಂಪದದ ಮುಂಬೈ ಓದುಗರು’, ಹಾಗೂ ಮುಂಬೈನಗರದ ಸಂಗೀತಾಸಕ್ತರು ಈ ಮೂಲಕ ತಮ್ಮ ’ಶ್ರದ್ಧಾಂಜಲಿ’ಯನ್ನು ಸಲ್ಲಿಸುತ್ತಿದ್ದಾರೆ. ಮೃತರ ಆತ್ಮಕ್ಕೆ ಶಾಂತಿಸಿಗಲಿ.
Comments
ಉ: ಮುಂಬೈನಗರದ ಹಿರಿಯ ವೈಣಿಕ, ಸಿ. ಕೆ. ಶಂಕರನಾರಾಯಣರಾಯರ ನಿಧನ