ಮುಂಬೈನಾಗಿನ್ ಸಾರ್ವಜನಿಕ ಉದ್ಯಾನ್ದಾಗ, ಅಡ್ಕಿ-ಗಿಡ ಐತ್ರಿ ಅಂದ್ರೆ, ನಂಬ್ತೀರೋ ಇಲ್ಲೋ ?

ಮುಂಬೈನಾಗಿನ್ ಸಾರ್ವಜನಿಕ ಉದ್ಯಾನ್ದಾಗ, ಅಡ್ಕಿ-ಗಿಡ ಐತ್ರಿ ಅಂದ್ರೆ, ನಂಬ್ತೀರೋ ಇಲ್ಲೋ ?

ಬರಹ

ಮುಂಬೈನಲ್ಲಿ, ’ ಹಿಮಾಲಯ ಜಾಗಿಂಗ್ ಪಾರ್ಕ್ ’ ಅಂತ ಒಂದು ಖಾಸಗೀ ಉದ್ಯಾನ ಇದೆ. ಅಲ್ಲಿ ಅಡಿಕೆಗಿಡ... ಅಲ್ಲ ಅಡಿಕೆ ಮರಗಳ, ಗುಂಪೇ ಇದೆ. ಈಗ ಕೆಲವು ಮರಗಳಲ್ಲಿ ಅಡಿಕೆ ಗೊಂಚಲು ಕಾಣಿಸ್ಕೊಳ್ಳಲಿಕ್ಕೆ ಹತ್ಯಾವೆ ! ಪ್ರತಿದಿನ, ನಮ್ಮ ಟೋನಿಯವರು ಆ ಗಿಡಗಳಿಗೆ, ಮತ್ತೆ ಬೇರೆಗಿಡಗಳಾದ, ತೆಂಗಿನ ಸಸಿಗಳು, ಹತ್ತಿಗಿಡ, ಎಕ್ಕದಗಿಡಗಳು, ಬೇವಿನ ಮರ, ಕಣಗಿಲೆಹೂವಿನ ಗಿಡ, ಹಳದಿಹೂವಿನ ಗಿಡ, ಆಲದ ಮರ, ಬಳ್ಳಿಗಳು, ಅಶೋಕಮರ, ಮುಂತಾದ ಮರಗಿಡಗಳಿಗೆ, ಪೈಪ್ ನಲ್ಲಿ ನೀರನ್ನು ಹಾಕುತ್ತಾರೆ. ಬೇರೆ ಸದಸ್ಯರೂ ಅನೇಕವಿಧಗಳಲ್ಲಿ ಸಹಕರಿಸುತ್ತಿದ್ದಾರೆ. ಕಾಂಪೌಂಡ್ ಗೋಡೆಯ ಫೆನ್ಸ್, ಇತ್ತೀಚೆಗೆ ಭದ್ರಪಡಿಸಿದ್ದಾರೆ. ವಾಚ್ಮನ್ ಹೋಗಿಬರುವವರನ್ನು ವಿಚಾರಿಸಿಕೊಳ್ಳುತ್ತಾನೆ. ವರ್ಷಕ್ಕೆ, ಒಬ್ಬ ವ್ಯಕ್ತಿಗೆ ೩೬೦ ರೂಪಾಯಿ ಸಸಸ್ಯತ್ವದ ಫೀ, ಪಡೆಯುತ್ತಾರೆ.

ಮಕ್ಕಳು, ಹುಡುಗರು, ಗಿಡಮರಗಳನ್ನು ಹತ್ತುವುದು, ಕಾಯಿಕೀಳುವುದು, ಕೊಂಬೆಮೇಲೆ ಮರಕೋತಿಆಟ ಆಡುವುದು ಮುಂತಾದವುಗಳನ್ನು ಮಾಡುವುದಿಲ್ಲ. ಇದರಿಂದ ಅಡಿಕೆ ಕಾಯಿ, ಹತ್ತಿಯನ್ನು ನಾವು ಪಾರ್ಕ್ ನಲ್ಲಿ ಕಾಣಲು ಸಾಧ್ಯ ! ಇದೇ ಈ ಉದ್ಯಾನದ ಗುಟ್ಟು ! ಈ ಹತ್ತಿ ಹಾಗೂ ಅಡಿಕೆ ಕಾಯಿನ ಗುಣಮಟ್ಟ ಅಷ್ಟೇನು ಚೆನ್ನಾಗಿಲ್ಲ. ಆದರೆ, ಒಂದು ಬೆಳೆ-ಬೆಳೆಸುವ -ಹಾಗೂ ಬೆಳೆದ ಬೆಳೆಯನ್ನು ಉಳಿಸುವ ಪ್ರಯತ್ನವನ್ನು ನಾವು ಇಲ್ಲಿ ಕಾಣಬಹುದಾಗಿದೆ. ಮಕ್ಕಳು ಕೇಳಿದರೆ, ಅವಕ್ಕೆ ತಕ್ಷಣ ಅಡಿಕೆ-ಮರ, ಹತ್ತಿಗಿಡಗಳನ್ನು ತೋರಿಸಲು ಸಾಧ್ಯವಾಗುತ್ತದಲ್ಲವೇ ?

ನೀವೂ ಪ್ರಯತ್ನಿಸಿದರೆ, ಎಲ್ಲಾ ಗಿಡಮರಗಳನ್ನು ಬೆಳೆಯಬಹುದು. ಎಲ್ಲರ ಸಹಕಾರ ಅತಿಮುಖ್ಯ ! ಅಲ್ಲವೇ... ಏನಂತೀರಿ ...?...?

ಕಲ್ಲು ಬೆಂಚಿನ ಮೇಲೆ ಕುಳಿತಿರುವ ಮಗನ್ ಭಾಯಿ, ೯೦ ವರ್ಷ ಪ್ರಾಯದವರು. ಅವರ ಬಲಭಾಗದಲ್ಲಿರುವ ಹಿರಿಯನಾಗರಿಕರು, ದೇವೆಂದ್ರಭಾಯಿ, ಅವರ ಪಕ್ಕದ ಮನೆಯವರು.