ಮುಂಬೈ ನ ಚೆಂಬೂರ್ ಕರ್ನಾಟಕ ಸಂಘ, ಇಂದು, ಬಂಗಾರದ ಹಬ್ಬವನ್ನು ಆಚರಿಸುತ್ತಿದೆ !

ಮುಂಬೈ ನ ಚೆಂಬೂರ್ ಕರ್ನಾಟಕ ಸಂಘ, ಇಂದು, ಬಂಗಾರದ ಹಬ್ಬವನ್ನು ಆಚರಿಸುತ್ತಿದೆ !

ಬರಹ

ಚೆಂಬೂರ್ ಕರ್ನಾಟಕ ಸಂಘದ ಸ್ಥಾಪನೆಯಾಗಿ ೫೨ ವರ್ಷಗಳಾಗಿವೆ. ಅದರ ಬಂಗಾರದ ಹಬ್ಬವನ್ನು ಈದಿನ ಆಚರಿಸಲಾಗುತ್ತಿದೆ.

೨೭ ವರ್ಷಗಳ ಹಿಂದೆ, ಬೊಂಬಾಯಿನ ಶಣ್ಮುಖಾನಂದ ಹಾಲ್ ನಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿದ ನೆನಪು ಇನ್ನೂ ಮಾಸಿಲ್ಲ. ಮಹಾರಾಷ್ಟ್ರರಾಜ್ಯಸರಕಾರದ ಶಾಸಕಿಯಾಗಿದ್ದ, ಕನ್ನಡಿತಿ, ಡಾ. ಲಲಿತಾರಾವ್ ರವರ ಘನ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ೬ ಮಂದಿಸಮಾಜಸೇವಕರನ್ನು ಗುರುತಿಸಿ ಸನ್ಮಾನಿಸಿದ್ದರು. ಈ ಹಿರಿಯ ಕನ್ನಡ ಸಂಘವು, ಪ್ರತಿಷ್ಠಿತ ಕನ್ನಡ ಹಾಗೂ ಆಂಗ್ಲ ಶಾಲೆಯೊಂದನ್ನು ನಡೆಸಿಕೊಂಡುಬರುತ್ತಿದೆ.

ಈದಿನ, ತಾ, ೨೨ ರ, ಡಿಸೆಂಬರ್, ೨೦೦೭, ರ ಅಪರಾನ್ಹ, ೧ ಗಂಟೆಗೆ, ಚೆಂಬೂರ್ ಫೈನ್ ಆರ್ಟ್ಸ್ ಸೊಸೈಟಿಯ, " ಶಿವಸ್ವಾಮಿ ಸಭಾಂಗಣ, "ದಲ್ಲಿ, ಸುವರ್ಣಮಹೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ, ಶ್ರೀ ವೀರೇಂದ್ರ ಹೆಗ್ಗಡೆಯವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಗೌರವ ಅತಿಥಿಗಳಾಗಿ, ಬಿಸಿ.ಸಿ.ಐ. ನ ಮುಖ್ಯ ಆಡಳಿತಾಧಿಕಾರಿ, ಪ್ರೊ. ರತ್ನಾಕರ ಶೆಟ್ಟಿ, ಮತ್ತು ಕೈಗಾರಿಕೋದ್ಯಮಿ, ಬಿ. ಡಿ. ಶೆಟ್ಟಿಯವರು ಉಪಸ್ಥಿತರಿರುವರು.

ಸಮಾರಂಭದಲ್ಲಿ, ಸಾಮಾಜಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಸಾಧನೆಗಳಿಗಾಗಿ ಬಿಲ್ಲವರ ಸಂಘದ ಅಧ್ಯಕ್ಷ, ಶ್ರೀ. ಜಯ . ಸಿ. ಸುವರ್ಣರಿಗೆ, ಬಿರುದನ್ನು ದಯಪಾಲಿಸಿ ಗೌರವಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಗಮವಾರ್ಹ ಸೇವೆಯನ್ನು ಸಲ್ಲಿಸಿದ, ೭ ಮಂದಿ ಮಹನೀಯರಿಗೆ, ಗೌರವವನ್ನು ಸಲ್ಲಿಸಿ, ಸನ್ಮಾನಿಸಲಾಗುತ್ತದೆ. ಕಲಾಸೌರಭದ ಸಂಗೀತ ರಸಮಂಜರಿ ಕಾರ್ಯಕ್ರಮದೊಂದಿಗೆ ಶಾಲಾಮಕ್ಕಳು, ಸಂಘದ ಸದಸ್ಯರುಗಳಿಂದ ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದಾಗಿದೆ.

೧. ಹಿರಿಯ ಕಾದಂಬರಿಕರ, ಶ್ರೀ. ವ್ಯಾಸರಾಯಬಲ್ಲಾಳರು :

ವ್ಯಾಸರಾಯಬಲ್ಲಾಳರು, ೫೦ ವರ್ಷಕ್ಕಿಂತ ಹೆಚ್ಚು ಸಮಯ ಮುಂಬೈ ನ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಖ್ಯಾತ ಕಾದಂಬರಿಗಾರ ಬೆಂಗಳೂರಿನಲ್ಲಿ ವಿಶ್ರಾಂತಜೀವನ ನಡೆಸುತ್ತಿದ್ದಾರೆ.

೨. ಪ್ರಖ್ಯಾತಪತ್ರಿಕಾಕರ್ತ, ಶ್ರೀ. ಎಂ. ವಿ.ಕಾಮತ್ :

ಎಂ. ವಿ.ಕಾಮತ್, ರಾತ್ರಿಶಾಲೆಯಲ್ಲಿ ಓದಿ ಪತ್ರಿಕೋದ್ಯಮದಲ್ಲಿ ಒಂದು ತಮ್ಮದೇ ಆದ ಛಾಪನ್ನು ಸೇರಿಸಿರುವ ಪ್ರಖ್ಯಾತ ಅಂಕಣಕಾರ, ಪತ್ರಿಕಾಕರ್ತರು. ೧೯೭೮-೧೯೮೧ ರಲ್ಲಿ, ಇಲ್ಲ್ಯು ಸ್ಟ್ರೇಟೆಡ್ ವೀಕ್ಲಿಯ ಸಂಪಾದಕರ್‍ಆಗಿಯೂ ದುಡಿದಿದ್ದಾರೆ.

೩. ಅಂಕಲ್ ಶ್ರೀ. ಅನಂತ ಪೈ :

ಅನಂತ ಪೈ. ಮಕ್ಕಳ ಮಾನಸಿಕ ವಿಕಾಸಕ್ಕೆ ಹೆಸರಾದ ಅವರು, ಅಮರಚಿತ್ರ ಕಥೆಯ ಮೂಲಸ್ಥಾಪಕರು. ಈಗ, ಅಮರಚಿತ್ರ ಕಥಾಮಾಲಿಕೆಯನ್ನು ಅಭ್ಯಸಿಸಿ, ಅದರಲ್ಲಿ ಪಿ. ಎಚ್. ಡಿ ಮಾಡಲು ಕೆಲವರು ಉದ್ಯುಕ್ತರಾಗಿರುವುದು ಹೆಮ್ಮೆಯ ಸಂಗತಿ.

೪. ರಂಗ ಕಲಾವಿದ ಶ್ರೀ. ಸದಾನಂದ ಸುವರ್ಣ :

ಸದಾನಂದ ಸುವರ್ಣ ಮುಂಬೈ ರಂಗಭೂಮಿಗೆ ಹೊಸದನ್ನು ತಂದ ಕಲಾವಿದ.

೫. ಶ್ರೀ. ಜಯ ಸಿ. ಸುವರ್ಣ :

ಜಯ ಸಿ. ಸುವರ್ಣ ಇವರೊಬ್ಬ ಯಶಸ್ವಿ ಉದ್ಯಮಿ. ಸಮರ್ಥ ಜನ-ನಾಯಕ. ಬಿಲ್ಲವ ಮಹಾಮಂಡಲದ ವ್ಯವಸ್ಥಾಪಕ ಅಧ್ಯಕ್ಷರು.

೬. ಕವಿ, ಶ್ರೀ. ಬಿ. ಎಸ್. ಸನದಿ :

ಬಿ. ಎಸ್. ಸನದಿ ಬೆಳಗಾವಿ ಜಿಲ್ಲೆಯ ಸಿಂದೊಳಿಯ ಕವಿಯವರು, ಬಹುಭಾಷಾವಿಷಾರದರು, ಭಾವಗೀತೆಗಳನ್ನು ಬರೆಯುತ್ತಾರೆ ಹಾಡುತ್ತಾರೆ. ಎರಡು ದಶಕಗಳಿಂದ ಮುಂಬೈನಲ್ಲೆ ಇದ್ದು, ಕರ್ನಟಕ ಸಂಘದ ಕನ್ನಡ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದವರು.

೭. ಶ್ರೀ. ಸದಾನಂದ ಎಮ್. ಶೆಟ್ಟಿ :

ಸದಾನಂದ ಎಮ್. ಶೆಟ್ಟಿಯವರು, ಕೊಡುಗೈ ದಾನಿ. ರಾತ್ರಿಶಾಲೆಯಲ್ಲಿ ಕಲಿತು, ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಮ್. ಬಿ. ಎ ಗಳಿಸಿದ, ಹಾಗೂ ೪ ಎಸ್ ಸಂಸ್ಥೆಯ ಸ್ಥಾಪಕರು. ಕಳೆದ ವರ್ಷವೇ ಕಣ್ಣುಮುಚ್ಚಿದ ಶೆಟ್ಟಿಯವರು, ಒಬ್ಬ ಸಮರ್ಥ ಉದ್ಯಮಿ, ಹಾಗೂ ಚಿಂತಕರು. ಸುಮಾರು ದಶಕಕಾಲ ಮುಂಬೈಕರ್ನಾಟಕ ಸಂಘದ ಅಧ್ಯಕ್ಷರಾಗಿ, ಅದಕ್ಕೆ ಗೌರವ ಸ್ಥಾನವನ್ನು ತಂದುಕೊಟ್ಟವರು. ಈ ಚೇತನಕ್ಕೆ, ಮರಣೋತ್ತರ ಸನ್ಮಾನವನ್ನು ಮಾಡಲಾಗುತ್ತಿದೆ.

-ಕರ್ನಾಟಕ ಮಲ್ಲ ದೈನಿಕಪತ್ರಿಕೆ.