ಮುಕ್ತ

ಮುಕ್ತ

ಏಕಾಂಗಿ ಎನಿಸಿ ನಿನ್ನ ಮುಂದೆ ಕುಳಿತಾಗ,
ಬಾಷೆ ಬರದಿದ್ದರು, 
ನೀ ನನ್ನ ಆವರಿಸಿದೆ, ಆಲಂಗಿಸಿದೆ,

ಎಲ್ಲರೂ ಝೇಂಕರಿಸಿದರು,,,
ಬಾ, ಹೊರ ಬಾ, ಇಲ್ಲಿ ನೋಡು,
ಜಗ ದೊಡ್ಡದಿದೆ, ಇಲ್ಲಿ ಜ್ಯೋತಿ ಇದೆ,
ಆದರೆ 
ನನಗ್ಯಾಕೊ ಇಷ್ಟವೇ ಇಲ್ಲ, ನಿನ್ನ ಬಿಟ್ಟು ಹೋಗಲು,

ಮೌನ ಮಾತಲ್ಲ ನನ್ನದು,
ಮೂಕ ವೇದನೆ, 
ನಾ ಹೆಣ್ಣಾಗಲಿ, ಗಂಡಾಗಲಿ,
ನಿನಗದರ ಸ್ವರೂಪವೂ ಬೇಕಿಲ್ಲ, ಯಾಕೆ?
ಯಾರು ಏನೇ ಎಂದರೂ, 
ನಿನ್ನ ಕಾರ್ಯವ ನೀ ಬಿಡಲೇ ಇಲ್ಲ,
ಅಂದು, ಇಂದು, ಎಂದೆಂದೂ!
ಸೋತವರು-ಗೆದ್ದವರು
ಎಲ್ಲರನೂ ಸಂತೈಸುತಾ,
ಕೊನೆಗೆ ಸತ್ತವರನು
ನಿನ್ನೆದೆಯೊಳಗೆ ಸೆಳೆದುಕೊಳ್ಳುತಾ,,,

ಯಾರಿಗು ಕಾಣದ್ದು, ನಿನಗೆ ಕಂಡಿತು,
ನಿನಗೆ ಕಾಣಲಾಗದ್ದು, ಯಾರಿಗು ಕಾಣದು,,
ನಿನ್ನಲ್ಲಿ ನಿರ್ವಿಕಾರ ಮೌನ
ನಿನ್ನದು ವರ್ಣಿಸಲಾಗದ ಅಲಂಕಾರ,

ನಿನ್ನಲಿ ಏನಿದೆ ? ತಿಳಿದವರಾರು ಇಲ್ಲ,
ನಿನ್ನ ಬಗ್ಗೆ ಸಂಶೋದಿಸಿ, 
ಗೆಲುವು ಕಂಡವರೆಷ್ಟು ಜನ ?
ನಿನ್ನ ಭಾವ, ನಿನ್ನ ವೇಗ, ನಿನ್ನ ಮನದ ತಂಪು,
ಏನು ಗೊತ್ತಿಲ್ಲ,
ಗೊತ್ತಿರುವುದೊಂದೆ, ನಿನ್ನ ಮನ ಎಲ್ಲಕ್ಕಿಂತ ಇಂಪು,
    
       *******************
ನಿನಗಾಗಿ ಹುಡುಕಿ ಸೋತಿರುವೆ,
ವಿಪರ್ಯಾಸವೇ!
ಎಲ್ಲೆಲ್ಲಿಯು ನಿನ್ನನ್ನು ಕೊಲ್ಲುವ ಕಾತುರ,
ಬೆಳಕಿನ ಸಾಧನ, ಜೊತೆಗೆ ತಡೆಯಲಾಗದಷ್ಟು ಬಿಸಿ,
ಹುಚ್ಚರಂತೆ ನಿನ್ನ ಕೊಂದು ಬೆಳಕು ಕಂಡೆವೆಂದು ಬೀಗುತ್ತಿದ್ದೇವೆ,

ಆದರೆ ನನಗೆ ನೀನು ಬೇಕು,
ಏಕೆಂದರೆ, ನೀನು ಮಾತ್ರ ಸತ್ಯ,
ಜಗವು ಮುಗಿದ ಮೇಲೂ, ನೀನು ಮಾತ್ರ ನಿತ್ಯ
ಬೆಳಕಿದ್ದರೂ ಕಾಣದ ಏಕೈಕ ಜೀವ ನೀನು
ಪ್ರಿಯ "ಕತ್ತಲೆ" ನೀನೆಲ್ಲರಿಂದಲೂ ಮುಕ್ತ,,,,

 --ನವೀನ್ ಜೀ ಕೇ