ಮುಗಿದ ಸಂಪದ ತಂಡದ ಪ್ರವಾಸ...

ಮುಗಿದ ಸಂಪದ ತಂಡದ ಪ್ರವಾಸ...

ಬರಹ

ಹೊರನಾಡಿಗೆಂದು ಹೊರಟಿತು ಸಂಪದ ತಂಡ...

ಇಸ್ಮಾಯಿಲ್ ಬಸ್ಸನ್ನು ಏರಿ ಸಡಗರದಿಂದ...

 

ಕೋಮಲ್, ಗೌಡಪ್ಪ, ಕಿಸ್ನ,ಗಣೇಶಣ್ಣ, ಶಾನಕ್ಕ, ಪ್ರಸನ್ನ ಹಾಗು ಇಬ್ಬರು ಜಗಜಟ್ಟಿಯರ ಜೊತೆಗೆ

ಹೆಗ್ಡೆಯವರು, ಗೋಪಿನಾಥರು, ದುಬೈ ಮಂಜಣ್ಣರು ಹೊರಟರು ಹೊರನಾಡಿಗೆ..

 

ಸಂಪದ ತಂಡವನ್ನು ಸಂತೋಷದಿಂದ ಬರ ಮಾಡಿಕೊಂಡರು ನಾವಡರು..

ಊಟದ ಮನೆಯಲ್ಲಿ ಗೌಡಪ್ಪನ ವಾಸನೆಗೆ ಮೂರ್ಚೆ ತಪ್ಪಿದರು ಹಲವರು...

 

ನಾವಡರು ಮಾಡಿಸಿದರು ಗೌಡಪ್ಪನಿಗೆ ನಸುಗುನ್ನಿ ಕಾಯಿಯ ಸ್ನಾನವನ್ನು...

ಕೆರೆದು ಕೆರೆದು ಕೆಂಪಾಗಿಸಿಕೊಂಡನು ಗೌಡಪ್ಪ ತನ್ನ ಮೈಯನ್ನು...

 

ಗೌಡಪ್ಪನ ವಾಸನೆ ತಾಳಲಾರದೆ ಶಾನಕ್ಕ, ಪ್ರಸನ್ನ ನಿರ್ಧರಿಸಿದರು...

ಜಗಜಟ್ಟಿಯರ ಒಡಗೂಡಿ ಮಹಾಸ್ನಾನವ ಮಾಡಿಸಿದರು...

 

ದುಬೈ ಸೆಂಟಿನಿಂದ ಘಮ ಘಮಿಸುತ್ತಿದ್ದನು ಗೌಡಪ್ಪನು...

ಶಾನಕ್ಕನಿಗೆ ಗೌಡಪ್ಪನು ಹಾಕಿದನು ದೀರ್ಘ ದಂಡವನ್ನು...

 

ಮಂಜಣ್ಣನ ಮಾತಿಗೆ ಬೆಲೆ ಕೊಟ್ಟು ಧರ್ಮಸ್ಥಳಕ್ಕೆ ಹೊರಟಿತು ಬಸ್ಸು...

ದಾರಿ ಪೂರ್ತಿ ಅಮ್ಲೆಟ್ ಹಾಕಿ ಹಾಕಿ ಎಲ್ಲರು ಅಂದರು ಬುಸು ಬುಸು...

 

ನೀರು ಕಂಡಲ್ಲೆಲ್ಲ ಸ್ನಾನಕ್ಕೆ ಅಣಿಯಾಗುತ್ತಿದ್ದ ಗೌಡಪ್ಪ...

ಇವೆಲ್ಲ ಕಂಡ ಹೆಗ್ದೇರು ಕೋಪದಿಂದ ಅಂದರು ಎಲ್ಲರ ಸುಮ್ನೆ ಕೂಡ್ರಪ್ಪ..

 

ಹಳ್ಳ ಗುಂಡಿಗಳನ್ನು ಲೆಕ್ಕಿಸದೆ ಓಡಿಸುತ್ತಿದ್ದ ಇಸ್ಮಾಯಿಲ್ ಬಸ್ಸನ್ನು...

ನಾವಡರು ಕೋಪದಿಂದ ಎಂದರು ಸರಿಯಾಗಿ ಓಡಿಸು ಬಸ್ಸನ್ನು...

 

ಇಸ್ಮಾಯಿಲ್ ಓಡಿಸುವ ಆಟಕ್ಕೆ ಕೈಗೆ ಬಂದಿತು ಸ್ಟೇರಿಂಗ್ ವ್ಹೀಲು...

ಮಿಲಿಟರಿ ಗೋಪಿನಾಥರು ಮತ್ತೆ ಸರಿಯಾಗಿ ಕೂಡಿಸಿದರು ವ್ಹೀಲು...

 

ಕೊನೆಗೂ ಬಂದು ತಲುಪಿತು ಧರ್ಮಸ್ಥಳಕ್ಕೆ ಸಂಪದ ತಂಡ...

ಮಂಜೂಷ ಮ್ಯೂಜಿಯಂನಲ್ಲಿ ಲಾಟಿ ಖಾಕಿ ಕೈಲಿ ಗೌಡಪ್ಪ ಒದೆ ತಿಂದ...

 

ಬಾಹುಬಲಿಯ ಕಂಡ ಗೌಡಪ್ಪ ಮೂರ್ಚೆ ತಪ್ಪಿ ಬಿದ್ದ...

ಕೋಮಲ್, ಸುಬ್ಬ ನೀರು ಹಾಕಿ ಎಬ್ಬಿಸಿದ ಮೇಲೆ ಶ್ರವಣಬೆಳಗೊಳಕ್ಕೆ ಹೊರಡೋಣ ಎಂದ...

 

ಗೌಡಪ್ಪ, ಕೋಮಲ್ , ಕಿಸ್ನ ,ಸುಬ್ಬ, ಮೊದಲು ಹತ್ತುವೆವು ಎಂದು ಹತ್ತಿದರು ದೊಡ್ಡ ಬೆಟ್ಟ...

ಮೀಸೆಯಡಿಯಲ್ಲಿ ನಕ್ಕ ಮಂಜಣ್ಣ ಮಿಕ್ಕವರು ನೀರು, ಪಾನೀಯಗಳೊಂದಿಗೆ ಹತ್ತಲು ಶುರು ಮಾಡಿದರು ಬೆಟ್ಟ...

 

ಶಾನಕ್ಕ ತಲೆಯ ಮೇಲೆ ಕೈ ಹೊತ್ತು ಕುಳಿತರು ನನಗೆ ಆಗುವುದಿಲ್ಲವೆಂದು...

ಗಾಳಿಯ ಬೀಸಿದರು ಪ್ರಸನ್ನ, ಜಗಜಟ್ಟಿಗಳು ಹೊತ್ತು ನಡೆದರು ಬೆಟ್ಟದ ಕೆಳಗಿಳಿದು...

 

ಹಾಗೂ ಹೀಗೂ ಗೊಮ್ಮಟನ ದರ್ಶನ ಮಾಡಿದ ಸಂಪದ ತಂಡದವರು...

ಗೌಡಪ್ಪ, ಶಾನಕ್ಕನ ಕಣ್ಣೀರಿನ ನಂತರ ಎಲ್ಲರು ಅವರವರ ಊರುಗಳನ್ನು ಸೇರಿದರು....