ಮುತ್ತಿಡುವ ಮುಂಗುರುಳೇ

ಮುತ್ತಿಡುವ ಮುಂಗುರುಳೇ

ಕವನ

ನನ್ನ  ಚುಂಬನಕ್ಕಿಲ್ಲದ ಜಾಗ

ನಿನ್ನ ಮುಂಗುರುಳಿಗೆಕೆ ಚೆಲುವೆ

 

ಬಿಟ್ಟುಕೊಡು ಆ ಜಾಗವನ್ನು

 

ಅತಿಯಾಯಿತು ನೀನದಕೆ  ಕೋಟ್ಟ  ಸಲೀಗೆ

ಅದಕ್ಕಾಗಿಯೆ ರಂಗೆರಿದೆ ಮುತ್ತಿನ ವೇಗ

ಓಮ್ಮೆ ನೋಡು ಅದು ಹೆಗೆ ಬಾಗಿ ಬಾಗಿ ನಿನ್ನ ಕೆನ್ನೆಗೆ ಮುತ್ತಿಡುತ್ತಿದೆ 

ನಿನ್ನ ಅಂದವೆಲ್ಲಾ ಅದರ ತುದಿಏರಿ ಕುಳಿತಿದೆ

 

ಜಾಗ ಕೊಡೆ ಮುಂಗುರುಳು

ಒಣಗುತಿದೆ ನನ್ನ ತುಟಿಗಳು

 

ತಲೆಯನಬ್ಬಿದ ಮುಂಗುರುಳೆ

ನಿದ್ದೆಯಿಲ್ಲಾ  ಹಗಲಿರುಳೆ

 

ನನ್ನ ಚುಂಬನಕ್ಕಿಲ್ಲದ ಜಾಗ 

ನಿನ್ನ ಮುಂಗುರುಳಿಗೆಕೆ ಚಲುವೆ