ಮುನಿಸೇಕೆ ವರುಣದೇವ???

ಮುನಿಸೇಕೆ ವರುಣದೇವ???

ಬರಹ

ವಿಜಯದಶಮಿಯ ಪ್ರಯುಕ್ತ ಕಳೆದ ಶನಿವಾರದಂದು ನಮ್ಮ ಇಡೀ ಕುಟುಂಬ ಊರಿಗೆ ಹೊರಡಲು ಸಿದ್ದತೆಗಳನ್ನು ನಡೆಸಿತ್ತು..ನಾನು ನನ್ನ ದೊಡ್ಡಪ್ಪ,ಚಿಕ್ಕಪ್ಪನ ಮಕ್ಕಳು

ಬೆಳಿಗ್ಗೆ ೮-೧೫ ಕ್ಕೆ ಚೆನ್ನೈ ಎಕ್ಷ್ಪ್ರೆಸ್ಸ್ನಲ್ಲಿ ಬಂಗಾರಪೇಟೆಗೆ ಹೋಗಿ ಅಲ್ಲಿಂದ ಕೆ.ಜಿ.ಎಫ್. ಗೆ ಬಸ್ಸಲ್ಲಿ ಬಂದು ಅಲ್ಲಿಂದ ಗುಟ್ಟಹಳ್ಳಿ (ಬಂಗಾರ ತಿರುಪತಿ) ಗೆ ಬಸ್ಸಲ್ಲಿ ಬಂದು

ಅಲ್ಲಿ ದರ್ಶನ ಮಾಡಿಕೊಂಡು ಅಲ್ಲಿಂದ ನಮ್ಮ ಹಳ್ಳಿಗೆ ಹೋಗುವ ಹಾಗೆ ನಿರ್ಧರಿಸಿದ್ದೆವು...

 

ಪೂರ್ವ ನಿಯೋಜಿತ ಯೋಜನೆಯಂತೆ ಟ್ರೈನ್ ಹಿಡಿದು ಹೊರಟೆವು..ನನಗೆ ಟ್ರೈನ್ ಎಂದರೆ ಆಗುವುದಿಲ್ಲ...ಎಷ್ಟು ಹೊತ್ತಾದರೂ ಕೂತು ಬಸ್ಸಿನಲ್ಲಿ ಪ್ರಯಾಣಿಸಬಲ್ಲೆ

ಆದರೆ ಈ ಟ್ರೈನ್ ಎಂದರೆ ಅದೇನೋ ಒಂಥರಾ ಅಸಹ್ಯ. ಆದರೆ ಈ ಹುಡುಗರ ಬಲವಂತದಿಂದ ಹೊರಟೆ...ಟ್ರೈನಿನಲ್ಲಿ ಬರಿ ಊರಿನಲ್ಲಿ ಏನು ಮಾಡಬೇಕು ಯಾವ ಯಾವ

ಕೆರೆಗೆ ಹೋಗಬೇಕು ಎಂದು ಮಾತಾಯಿತು. ಏಕೆಂದರೆ ಕಳೆದ ಬಾರಿ ವಿಜಯದಶಮಿಗೆ ಹೋದಾಗ ಒಳ್ಳೆ ಪ್ರಮಾಣದಲ್ಲಿ ಮಳೆ ಬಂದು ಎರಡು ಕೆರೆಗಳು ಅಲ್ಪ ಮಟ್ಟಿಗೆ

ತುಂಬಿತ್ತು..ಹಾಗು ಇನ್ನೊಂದು ಚಿಕ್ಕ ಕೆರೆ ತುಂಬಿ ಕೋಡಿ ಹರಿಯುತ್ತಿತ್ತು..ಆಗ ಎರಡು ದಿನ ಸಿಕ್ಕಾಪಟ್ಟೆ ಮಜಾ ಮಾಡಿದ್ದೆವು...ಆ ಎರಡು ದಿನ ನಾವುಗಳು ಮನೆಗಿಂತ 

ಜಾಸ್ತಿ ಕೆರೆಯ ಹತ್ತಿರ ಇದ್ದಿದ್ದೆ ಜಾಸ್ತಿ..ಆ ಕೆರೆ ತುಂಬಾ ಸುಂದರವಾಗಿದೆ...ಅದು ಕೋಡಿ ಹರಿದು ಕೆಳಗೆ ಬಂದು ಒಂದು ಸಣ್ಣ ಹಳ್ಳಕ್ಕೆ ಬಂದು ಅಲ್ಲಿಂದ ಕಾಲುವೆಗೆ ಸೇರುತ್ತದೆ.. 

ಆ ಸಣ್ಣ ಹಳ್ಳದಲ್ಲಿ ಕುತ್ತಿಗೆ ಮಟ್ಟಕ್ಕೆ ನೀರಿದ್ದು ಅಲ್ಲಿ ಆಟ ಆಡಿದ್ದೆವು...

 

ಹಾಗೆ ಅದೆಲ್ಲ ನೆನೆಸಿಕೊಂಡು ಮಾತಾಡುತ್ತಿದ್ದಾಗಲೇ ಬಂಗಾರಪೇಟೆ ತಲುಪಿದೆವು. ಅಲ್ಲಿಂದ ಬಂಗಾರ ತಿರುಪತಿಗೆ ಹೋಗಿ ದರ್ಶನ ಮುಗಿಸಿಕೊಂಡು ಮುಳಬಾಗಿಲಿಗೆ

ಹೊರಟೆವು..ನಾವು ಮುಳಬಾಗಿಲು ತಲುಪಿದಾಗ ಮಧ್ಯಾನ್ಹ ೧.೦೦ ಗಂಟೆ...ಕೆಟ್ಟ ಬಿಸಿಲು...ಏನಪ್ಪಾ ಇದು ಈ ಪಾಟಿ ಬಿಸಿಲು ಇನ್ನು ಹಳ್ಳಿಯಲ್ಲಿ ಹೇಗಿರುವುದೋ ಎಂದುಕೊಂಡು

ಹಳ್ಳಿಗೆ ಹೊರಟೆವು..ನಮ್ಮ ಹಳ್ಳಿ ಮಾರಂಡಹಳ್ಳಿ, ಮುಳಬಾಗಿಲಿನಿಂದ ಸುಮಾರು ೮ ಕಿ.ಮೀ. ಹೋಗಬೇಕು..ಸರಿ ಆಟೋ ಹಿಡಿದು ಹೊರಟೆವು...ಹಳ್ಳಿಯ ಮೊದಲಿಗೆ ಒಂದು

ಕೆರೆ ಸಿಗುವುದು ಅದಕ್ಕೆ ಅಡವಿ ಕೆರೆ ಎಂದು ಹೆಸರು..ಅದು ಏಕೆ ಆ ಹೆಸರು ಬಂತೋ ಗೊತ್ತಿಲ್ಲ..ನನಗೆ ತಿಳಿದ ಮಟ್ಟಿಗೆ ಅದರ ಸುತ್ತ ಅಡವಿ ಅಂತೂ ಇಲ್ಲ...ಅಥವಾ ನಾನು

ಹುಟ್ಟುವ ಮೊದಲು ಇತ್ತೋ ಇಲ್ಲವೋ ಅದು ಗೊತ್ತಿಲ್ಲ...ಆ ಕೆರೆ ಸಿಕ್ಕಾಪಟ್ಟೆ ದೊಡ್ಡದು...ಆ ಕೆರೆ ತುಂಬಿ ಹತ್ತು ವರ್ಷಗಳೇ ಕಳೆದು ಹೋಗಿದೆ...ಆದರೂ ಒಳ್ಳೆ ಮಳೆ ಬಂದರೆ

ಅಲ್ಲಲ್ಲಿ ನೀರು ಕಾಣುತ್ತಿತ್ತು...ಆದರೆ ಈ ಸಲ ಮಳೆಯ ಅಭಾವದಿಂದ ಅದೂ ಸಹ ಇಲ್ಲ...ನೀರೆಲ್ಲ ಬತ್ತಿ ಒಳ್ಳೆ ಬಂಜರು ಭೂಮಿ ಆದಂತೆ ಆಗಿ ಹೋಗಿತ್ತು...ಅದೂ ಅಲ್ಲದೆ ಜನ

ನೀರಿಗಾಗಿ ಅಲ್ಲಲ್ಲಿ ಬೋರ್ ಗಳನ್ನೂ ಹಾಕಿದ್ದಾರೆ...ಹೀಗೆ ಆದರೆ ಒಂದು ದಿನ ಅಂತರ್ಜಲವೂ ಖಾಲಿ ಆಗಿ ಏನೇನು ಕಷ್ಟ ಅನುಭವಿಸಬೇಕಾಗುತ್ತದೋ...

 

ಸರಿ ಅದನ್ನು ನೋಡಿ ಬೇಸರಗೊಂಡು ಹಾಗೆ ಮುಂದೆ ಬಂದರೆ ಸದಾ ನಳನಳಿಸುತ್ತಿದ್ದ ಹೊಲ ಗದ್ದೆಗಳು ಈ ಸಾರಿ ವರುಣನ ಮುನಿಸಿನಿಂದಾಗಿ ಬರ ಪೀಡಿತ ಪ್ರದೇಶದಂತೆ

ಒಣಗಿ ಬಿರುಕುಗಳು ಕಾಣಿಸುತ್ತಿದ್ದವು...ಎಲ್ಲೋ ಅಲ್ಲಲ್ಲಿ ಮಾತ್ರ ಅಲ್ಪ ಸ್ವಲ್ಪ ಹಸಿರು ಕಂಡಿತು...ಅಷ್ಟರಲ್ಲಿ ಹಳ್ಳಿ ತಲುಪಿ ಊಟ ಮಾಡಿ ಸ್ವಲ್ಪ ಹೊತ್ತು ಸುಧಾರಿಸ್ಕೊಂಡು ಇನ್ನೊಂದು ಕೆರೆ

"ಹೊಸಳ್ಳಿ ಕೆರೆ " ಗೆ ಹೋಗೋಣ ಎಂದುಕೊಂಡೆವು ಅಷ್ಟರಲ್ಲಿ ನಮ್ಮ ದೊಡ್ಡಪ್ಪ ಏತಕ್ಕೆ ಹೋಗುತ್ತಿರ ಅಲ್ಲಿ ತೊಳೆಯಲು ಸಹ ನೀರಿಲ್ಲ ಎಂದರು...ನಮ್ಮ ಆಸೆಗೆ ಮತ್ತೊಂದು

ಕೊಡಲಿ ಪೆಟ್ಟು ಬಿದ್ದಂತಾಯಿತು...ಹೊಸಳ್ಳಿ ಕೆರೆ ಪಕ್ಕದಲ್ಲೇ ಇನ್ನೊಂದು ಕೆರೆ (ಮೊದಲು ಹೇಳಿದ ಚಿಕ್ಕ ಕೆರೆ) ಹೋಗಲಿ ಅದಕ್ಕಾದರೂ ಹೋಗೋಣ ಎಂದುಕೊಂಡರೆ ಅಲ್ಲಿಯೂ

ಅದೇ ಪರಿಸ್ಥಿತಿ ಎಂದು ತಿಳಿದು ವರುಣನ ಮೇಲೆ ಎಲ್ಲಿಲ್ಲದ ಕೋಪ ಬಂತು...ಮಳೆಯ ನೀರಿನ ಅವಶ್ಯಕತೆ ಹೆಚ್ಚ್ಚಿಲ್ಲದ, ಗ್ಯಾಲನ್ ಗಟ್ಟಲೆ ನೀರನ್ನು ಮೋರಿಗೆ ಬಿಡುವ ಬೆಂಗಳೂರಿನಲ್ಲಿ

ಹೊತ್ತಲ್ಲದ ಹೊತ್ತಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಸಿದ ವರುಣ ನಮ್ಮ ಹಳ್ಳಿಯ ಮೇಲೆ ಏತಕೆ ನಿಂಗೆ ಇಂಥಹ ಮುನಿಸು ಎಂದೆನಿಸಿತು..ಈಗಾಗಲೇ ಸುಮಾರು ಜನ ಹಳ್ಳಿ ಬಿಟ್ಟು

ಬೆಂಗಳೂರಿಗೆ ವಲಸೆ ಬಂದಿದ್ದಾರೆ...ಇದು ಬರಿ ನಮ್ಮ ಹಳ್ಳಿಯ ಪ್ರಶ್ನೆ ಅಲ್ಲ...ಇದೆ ಪರಿಸ್ಥಿತಿ ಮುಂದುವರಿದರೆ ಒಂದು ದಿನ ಹಳ್ಳಿಗಳೆಲ್ಲ ಖಾಲಿ ಆಗಿ ಮರುಭೂಮಿಯಾದರೂ ಆಶ್ಚರ್ಯ

ಪಡಬೇಕಾಗಿಲ್ಲ...

 

ಕುಟುಂಬದವರೆಲ್ಲರೂ ಬಂದಿದ್ದರಿಂದ ಅವರ ಜೊತೆ ಸಂಭ್ರಮಿಸುತ್ತ ಈ ಬೇಸರವನ್ನು ಕಳೆದುಕೊಂಡು ಹೇಗೋ ಹಬ್ಬ ಮುಗಿಸಿದೆವು...ವಾಪಸ್ ಬರಬೇಕಾದರೆ ಮತ್ತೆ ಅದೇ ಕೆರೆಯ

ದರ್ಶನವಾಗಿ ವರುಣದೇವ ಇನ್ನಾದರೂ ನಮ್ಮ ಹಳ್ಳಿಯ ಮೇಲೆ ಕೃಪೆ ತೋರಿಸು ಎಂದು ಬೇಡಿಕೊಂಡು ಬಂದೆವು...