ಮುಸ್ಸಂಜೆ ಹೊತ್ತಿನಲಿ

ಮುಸ್ಸಂಜೆ ಹೊತ್ತಿನಲಿ

ಕವನ

ಮುಸ್ಸಂಜೆ ಹೊತ್ತಿನಲಿ

ಮತ್ತೆ ಮೌನಕೆ ಜಾರಿ

ಚೆಲುವು ತುಂಬಿದ ಕಲೆಗೆ ಒಲವುಯೆಲ್ಲೆ

ಕನಸುಗಳ ಮಾತಿನಲಿ

ನನಸು ಕರಗುತ ಸಾಗಿ

ಮುಗಿಲಿನೊಳಗಿನ  ಬಗೆಗೆ ಒಲವುಯೆಲ್ಲೆ

 

ಮಾದಕದ ರೂಪದೊಳು 

ಹೊಳಪು ಚಿಮ್ಮತಲಿರಲು

ಮೋಹ ಕಾಂತಿಯ ನಗೆಗೆ ಒಲವುಯೆಲ್ಲೆ

ತಲೆಯೆತ್ತಿ ನೋಡಲದು 

ಸಿಂಗಾರ ಸಮಯದೊಳು

ಮಿಂಚು ಹೊಳಪಿನ ಬೆಸುಗೆ ಒಲವುಯೆಲ್ಲೆ

 

ಮತ್ತೆ ಹುಟ್ಟದು ಜೀವ

ಬಯಕೆ ತೀರಿದ ಭಾವ

ಚೈತ್ರಗಳ ಸುಳಿ ಒಳಗೆ  ಒಲವುಯೆಲ್ಲೆ

ಕಾಮನೆಯು ತೀರದವ

ಸುಳಿಯುತಲೆ ಬರುತಿರುವ 

ಹೊನ್ನ ಮಂಚದ ಸವಿಗೆ ಒಲವುಯೆಲ್ಲೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್