ಮೂತ್ರಾಲಯ-- ಪದದ ಬಳಕೆ ಎಷ್ಟು ಸಮಂಜಸ?

ಮೂತ್ರಾಲಯ-- ಪದದ ಬಳಕೆ ಎಷ್ಟು ಸಮಂಜಸ?

Comments

ಬರಹ

ಉಳ್ಳವರು ಶಿವಾಲಯವ ಮಾಡುವರು


ನಾನೇನು ಮಾಡಲಿ ಬಡವನಯ್ಯಾ......


ಬಸವಣ್ಣನವರ ಈ ವಚನವನ್ನು ಕೇಳಿದಾಗಲೆಲ್ಲಾ ನನ್ನ ಮನಸ್ಸಿನಲ್ಲಿ ಸ್ಪುಟವಾಗಿ ನಿಲ್ಲುವ ಶಬ್ದ "ಶಿವಾಲಯ". ಶಿವನಿರುವ ಸ್ಥಳ "ಶಿವಾಲಯ" ವಾದಂತೆ, ದೇವರಿರುವ ಸ್ಥಳ ದೇವಾಲಯ" ವೆನಿಸುತ್ತದೆ. "ಆಲಯ" ಎಂಬ ಪದಕ್ಕೆ "ವಾಸಸ್ಥಳ" , "ನಿವಾಸ" ಎಂದು ನಿಘಂಟುಗಳು ವ್ಯಾಖ್ಯಾನಿಸಿದರೂ, ಅದು "ಪವಿತ್ರ ಸ್ಥಳ" ಎಂದೇ ನಮ್ಮೆಲ್ಲರ ಭಾವನೆ.


ಹೀಗಿರುವಾಗ, ಸಾರ್ವಜನಿಕ ಪ್ರದೇಶದಲ್ಲಿ ಮೂತ್ರವಿಸರ್ಜನೆಗೆ ಇರುವ ಸ್ಥಳವನ್ನು "ಮೂತ್ರಾಲಯ" ಎಂದು ಕರೆಯುವುದು ಎಷ್ಟು ಸಮಂಜಸ?


ಈ ಬಗ್ಗೆ ನಾನು ಪ್ರೊ. ವೆಂಕಟಸುಬ್ಬಯ್ಯನವರಲ್ಲಿ ಪ್ರಸ್ಥಾಪಿಸಿದಾಗ ಆವರು ಮೂತ್ರವಿಸರ್ಜನೆಯಂತಹ ಸ್ಥಳವನ್ನು "ಮೂತ್ರಿ" ಎಂದು ಹೇಳುವುದೇ ಸೂಕ್ತ ಎಂದು ತಿಳಿಸಿದ್ದರು.


"ಸಾರ್ವಜನಿಕ ಮೂತ್ರಿ" ಎಂಬ ಫಲಕ ಪ್ರಾರಂಭದಲ್ಲಿ ಸ್ವಲ್ಪ ಗೊಂದಲವೆನಿಸಿದರೂ, ನಿತ್ಯ ಬಳಸಿದಲ್ಲಿ ಒಪ್ಪಾದೀತಲ್ಲವೇ?


ನೀವೇನಂತೀರಿ ???

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet