ಮೂರು ಘಟನೆಗಳು ... ಹೀಗೆ !

ಮೂರು ಘಟನೆಗಳು ... ಹೀಗೆ !

ಬರಹ

ಮೂರು ಘಟನೆಗಳು ... ಹೀಗೆ
surprise ! ಯಾರಿಗಾದರೂ ಸರ್ಪ್ರೈಸ್ ಮಾಡಲು ಸಕ್ಕತ್ ಮಜ ಇರುತ್ತೆ .... ಹಲವಾರು ಬಾರಿ ಅದು ಖುಷಿ ತರುತ್ತದೆ ನಿಜ, ಆದರೆ ಕೆಲವೊಮ್ಮೆ ಅದರ ಪರಿಣಾಮ ವ್ಯತಿರಿಕ್ತವಾಗಿರುವುದೂ ಉಂಟು !! 
ಕೆಲಸಕ್ಕಾಗಿ ಅಮೇರಿಕಕ್ಕೆ ಬಂದವನೊಬ್ಬ ಪ್ರಾಜಕ್ಟ್ ಮುಗಿದು ವಪಸ್ಸಾಗುವ ಸಮಯ ಬಂತು. ತಾನು ಹೊರಡುವ ದಿನವನ್ನು ತನ್ನ ತಂದೆ-ತಾಯಿಗೆ ತಿಳಿಸದೆ ಗುಪ್ತವಾಗಿಟ್ಟ .... ಸುಮ್ಮನೆ ಹಾಗೇ ಹೋಗಿ ಸರ್ಪ್ರೈಸ್ ಕೊಡುವ ನಿರ್ಧಾರ ಮಾಡಿ ಆ ಸನ್ನಿವೇಶವನ್ನು ಮನದಲ್ಲಿ ನಾನಾ ಬಗೆಯಲ್ಲಿ ಊಹಿಸಿಕೊಂಡು ಪುಳಕಿತನಾಗುತ್ತಿದ್ದ. ಹಾಗೆ ಹೊರಟವನು, ಊರಿಗೆ ತಲುಪಿ ತನ್ನ ತಮ್ಮನಿಗೆ ಕರೆ ಮಾಡಿ ವಿಷಯ ತಿಳಿಸಿದ. 
ತಾನು ಮನೆ ತಲುಪಿ, ಒಳ ಹೊಕ್ಕು, ಬಟ್ಟೆ ಬದಲಾಯಿಸಿ, ಹಾಲ್’ನಲ್ಲಿ ಸೋಫಾದ ಮೇಲೆ ಕುಳಿತು ಪೇಪರ್ ಮುಖಕ್ಕೆ ಅಡ್ಡವಿಟ್ಟುಕೊಂಡವನು, ತನ್ನ ಅಮ್ಮನು ಮನೆ ಬಾಗಿಲಿಗೆ ರಂಗವಲ್ಲಿ ಇಟ್ಟು ಒಳ ಬಂದಾಗ ಪೇಪರನ್ನು ಸರಿಸುತ್ತ "ಸರ್ಪ್ರೈಸ್" ಎಂದ. ಇದ್ದಕ್ಕಿದ್ದ ಹಾಗೆ ತನ್ನ ಪ್ರೀತಿಯ ಮಗನನ್ನು ಕಂಡು, ಸಂತಸ ತಡೆಯಲಾರಾದೆ ಕುಸಿದ ಆ ತಾಯಿಗೆ ಸುಧಾರಿಸಿಕೊಳ್ಳಲು ಮೂರು ದಿನ ಬೇಕಾಯ್ತು !!!
ಇದೇ ರೀತಿಯ ’ಸರ್ಪ್ರೈಸ್’ ಮಾಡಲು ಹೊರಟ ಮತ್ತೊಂದು ಘಟನೆಯನ್ನು ಕೇಳಿ. ಬೆಳಿಗ್ಗೆ ಊರಿಗೆ ತಲುಪಿದವನು, ಮುಂಬಾಗಿಲು ತೆರೆದಿರುವುದನ್ನು ಕಂಡ. ಆದರೇ ಗೇಟಿಗೆ ಜಡಿದಿದ್ದ ಬೀಗ ಮಾತ್ರ ಇನ್ನೂ ತೆರೆದಿರಲಿಲ್ಲ. ’ಜೈ ಭಜರಂಗಬಲಿ’ ಎಂದವನೇ ಕಾಂಪೌಂಡ್ ಹಾರಿದ. ಭಾರತಕ್ಕೆ ಬಂದಾಗ ಇವನಿಗೆ ’ಸರ್ಪ್ರೈಸ್’ ಮಾಡಲೆಂದು ಅವನಪ್ಪ ತಂದಿದ್ದ ನಾಯಿಗೆ ಇವನಾರೆಂದು ಗೊತ್ತಿಲ್ಲ ಪಾಪ !! ಮುಂದೇನಾಯ್ತು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು ...
ಈಗ ಮನೋಭಾವದ ಬಗೆಗಿನ ಒಂದು ಸಂದರ್ಭ ನೋಡೋಣ.
ಮೂಲೆ ಮನೆ ತಿಪ್ಪಣ್ಣ ಕಾಂಪೌಂಡ್ ಮೇಲೆ ನಿಂತುಕೊಂಡು ಸೀಬೆಕಾಯಿ ಕಿತ್ತುತ್ತಿದ್ದರು. ಯಾರಾದರೂ ನೋಡುತ್ತಿದ್ದಾರೇನೋ ಎಂದು ಆಗೊಮ್ಮೆ ಈಗೊಮ್ಮೆ ಸುತ್ತಲೂ ನೋಡುತ್ತಲೂ ಇದ್ದರು. ಇದನ್ನು ಕಂಡ ಹಿಂದಿನ ಮನೆ ಹುಡುಗರು, ಇವರಿಗೆ ಕಾಣದಂತೆ ಕುಳಿತು ’ಕಳ್ಳ ಕಳ್ಳ ಕಳ್ಳ’ ಎಂದು ಬೊಬ್ಬೆ ಹಾಕಿದರು. ತಿಪ್ಪಣ್ಣ ಕಾಂಪೌಂಡ್’ನಿಂದ ಹಾರಿದವರೇ ಮನೆ ಒಳಗೆ ಓಡಿದರು. ಆಮೇಲೆ ಅವರಿಗೆ ಅರಿವಾಯಿತು, ಇಷ್ಟು ಹೊತ್ತೂ ಅವರು ತಮ್ಮ ಮನೆಯದೇ ಕಾಂಪೌಂಡ್ ಮೇಲೆ ನಿಂತು ತಮ್ಮದೇ ಗಿಡದ ಸೀಬೆಕಾಯಿ ಕಿತ್ತುತ್ತಿದ್ದರು ಎಂದು.
ಮಾನವನ ಗುಣಾವಗುಣಗಳು, ಸ್ವಭಾವಗಳು, ನಡೆನುಡಿಗಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ !

surprise ! ಯಾರಿಗಾದರೂ ಸರ್ಪ್ರೈಸ್ ಮಾಡಲು ಸಕ್ಕತ್ ಮಜ ಇರುತ್ತೆ .... ಹಲವಾರು ಬಾರಿ ಅದು ಖುಷಿ ತರುತ್ತದೆ ನಿಜ, ಆದರೆ ಕೆಲವೊಮ್ಮೆ ಅದರ ಪರಿಣಾಮ ವ್ಯತಿರಿಕ್ತವಾಗಿರುವುದೂ ಉಂಟು !! 

ಕೆಲಸಕ್ಕಾಗಿ ಅಮೇರಿಕಕ್ಕೆ ಬಂದವನೊಬ್ಬ ಪ್ರಾಜಕ್ಟ್ ಮುಗಿದು ವಾಪಸ್ಸಾಗುವ ಸಮಯ ಬಂತು. ತಾನು ಹೊರಡುವ ದಿನವನ್ನು ತನ್ನ ತಂದೆ-ತಾಯಿಗೆ ತಿಳಿಸದೆ ಗುಪ್ತವಾಗಿಟ್ಟ .... ಸುಮ್ಮನೆ ಹಾಗೇ ಹೋಗಿ ಸರ್ಪ್ರೈಸ್ ಕೊಡುವ ನಿರ್ಧಾರ ಮಾಡಿ ಆ ಸನ್ನಿವೇಶವನ್ನು ಮನದಲ್ಲಿ ನಾನಾ ಬಗೆಯಲ್ಲಿ ಊಹಿಸಿಕೊಂಡು ಪುಳಕಿತನಾಗುತ್ತಿದ್ದ. ಹಾಗೆ ಹೊರಟವನು, ಊರಿಗೆ ತಲುಪಿ ತನ್ನ ತಮ್ಮನಿಗೆ ಕರೆ ಮಾಡಿ ವಿಷಯ ತಿಳಿಸಿದ. 

ತಾನು ಮನೆ ತಲುಪಿ, ಒಳ ಹೊಕ್ಕು, ಬಟ್ಟೆ ಬದಲಾಯಿಸಿ, ಹಾಲ್’ನಲ್ಲಿ ಸೋಫಾದ ಮೇಲೆ ಕುಳಿತು ಪೇಪರ್ ಮುಖಕ್ಕೆ ಅಡ್ಡವಿಟ್ಟುಕೊಂಡವನು, ತನ್ನ ಅಮ್ಮನು ಮನೆ ಬಾಗಿಲಿಗೆ ರಂಗವಲ್ಲಿ ಇಟ್ಟು ಒಳ ಬಂದಾಗ ಪೇಪರನ್ನು ಸರಿಸುತ್ತ "ಸರ್ಪ್ರೈಸ್" ಎಂದ. ಇದ್ದಕ್ಕಿದ್ದ ಹಾಗೆ ತನ್ನ ಪ್ರೀತಿಯ ಮಗನನ್ನು ಕಂಡು, ಸಂತಸ ತಡೆಯಲಾರದೆ ಕುಸಿದ ಆ ತಾಯಿಗೆ ಸುಧಾರಿಸಿಕೊಳ್ಳಲು ಮೂರು ದಿನ ಬೇಕಾಯ್ತು !!!