ಮೂರು ಹೆಜ್ಜೆ

ಮೂರು ಹೆಜ್ಜೆ

ಕವನ

ಕಾರ್ತಿಕ ಮಾಸದ ಪಾಡ್ಯದ ದಿನವು

ಬೆಳಕಿನ ಹಬ್ಬ ದೀಪಾವಳಿ ಸಡಗರವು|

ಬಲಿಪಾಡ್ಯಮಿ ಪೌರಾಣಿಕ ಹಿನ್ನೆಲೆಯು

ಗುಣಗಳ ಗಣಿ ಬಲಿರಾಜನ  ಕಥೆಯು||

 

ಸುರಪೀಠಕೆ  ಲಗ್ಗೆಯಿಡುವ ಆಸೆಯು

ದಿಗ್ವಿಜಯ ಸಾಧಿಸಿ ಕೈಗೊಂಡನು ವಿಶ್ವಜಿತ್ ಯಜ್ಞವ |

ದಾನಧರ್ಮಗಳ ಕೊಡುವ ಅರಸನು

ವೀರೋಚನ ಸುತ ಅಗಣಿತ ಘನ ಮಹಿಮನು||

 

ಕೈಯಲಿ ಕಮಂಡಲ ಶಿರದ ಮೇಲೆ ಛತ್ರಿಯು

ವಟು ರೂಪಧಾರಿ ವೈಕುಂಠ ವಾಸಿ  |

ವಾಮನನಾಗಿ ಬೆಳೆದು ದಾನ ಬೇಡಿದನು

ಮೂರು ಹೆಜ್ಜೆಗಳ ಸ್ಥಳ ಬೇಡಿಕೆಯಿಟ್ಟನು||

 

ಒಂದನೇ ಪಾದವ ಬುವಿಗೆ ಊರಿದ

ಎರಡನೇ ಪಾದವ ಆಗಸಕೂರಿದ|

ಭೂಮ್ಯಾಕಾಶ ಗಾತ್ರ ಪಾದವ ಬೆಳೆಸಿದ

ಮೂರನೇ ಹೆಜ್ಜೆಯ ಎಲ್ಲಿಡಲೆಂದ||

 

ಶಿರದ ಮೇಲೆ ಹೆಜ್ಜೆಯನೂರಿದ ದೇವ

ಬಲಿಯ ಪಾತಾಳಕೆ ತಳ್ಳಿದ ಜಗದ್ರಕ್ಷಕ ಕಾವ|

ಗೋಧೂಳಿ ಲಗ್ನದಿ ಪೂಜೆಯು ಸಂದಿತು

ನೆನೆಯೋಣ ಕಥಾಸಾರದ ತಿರುಳ ಧನ್ಯರಾಗುತ||

 

-ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್